ಅರ್ಚಕರ ಮದುವೆಯಾದ್ರೆ ಸಿಗಲಿದೆ 4 ಲಕ್ಷ!
Team Udayavani, Oct 20, 2017, 6:00 AM IST
ಹೈದರಾಬಾದ್: ಅರ್ಚಕರಿಗೆ ಯೋಗ್ಯ ವಧು ಸಿಗುವುದು ಕಷ್ಟ ಎನ್ನುವ ಮಾತು ಪದೇ ಪದೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರವೇ ಇದಕ್ಕೊಂದು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ!
ಹೌದು, ಇನ್ಮುಂದೆ ಅರ್ಚಕರು ಈ ಸಮಸ್ಯೆ ಎದುರಿಸಬೇಕಾಗಿಲ್ಲ. ಏಕೆಂದರೆ, ಅರ್ಚಕರನ್ನು ವಿವಾಹವಾಗುವ ಯುವತಿಯರಿಗೆ 3 ಲಕ್ಷ ರೂ. ಬಹುಮಾನ ಸಿಗಲಿದೆ. ಜತೆಗೆ ಒಂದು ಲಕ್ಷ ರೂ ಮದುವೆಯ ವೆಚ್ಚವನ್ನೂ ನೀಡಲಾಗುತ್ತದೆ. ತೆಲಂಗಾಣ ರಾಜ್ಯ ಸರ್ಕಾರದ ಹೊಸ ಯೋಜನೆ ಇದು.
ಇತ್ತೀಚೆಗಷ್ಟೇ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರ ಮಹಿಳೆಯರಿಗೆ ಸೀರೆ ನೀಡುವ ಯೋಜನೆಯನ್ನು ಜಾರಿ ಮಾಡಿತ್ತು. ಇದಕ್ಕೆ ಸಿಕ್ಕ ಭಾರಿ ಜನಪ್ರಿಯತೆ ಬೆನ್ನಲ್ಲೇ ಇದೀಗ ಮತ್ತೂಂದು ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಸಿದಟಛಿತೆ ನಡೆಸಿದೆ.
“ಕಲ್ಯಾಣಮಸ್ತು’ ಎಂಬ ಶಿರೋನಾಮೆಯ ಹೊಸ ಯೋಜನೆ ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ ಎಂದು ತೆಲಂಗಾಣ ಬ್ರಾಹ್ಮಣ ಸಂಕ್ಷೇಮ ಪರಿಷತ್‌ನ ಅಧ್ಯಕ್ಷ ಕೆ.ವಿ.ರಮಣಾಚಾರಿ ತಿಳಿಸಿದ್ದಾರೆ.
ಸರ್ಕಾರದ ವತಿಯಿಂದ ನೀಡಲಾಗುವ 3 ಲಕ್ಷ ರೂ. ಮೊತ್ತವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಶಾಖೆಯಲ್ಲಿ
ವಧು ಮತ್ತು ವರನ ಜಂಟಿ ಖಾತೆಯಲ್ಲಿ ಮೂರು ವರ್ಷಗಳ ಕಾಲ ಠೇವಣಿ ಇರಿಸಲಾಗುತ್ತದೆ. ದಂಪತಿಗೆ ಜನಿಸುವ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಹಣಕಾಸಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗುತ್ತದೆ
ಎಂದಿದ್ದಾರೆ. ಜತೆಗೆ, ಮದುವೆ ಖರ್ಚಿಗೆಂದು 1 ಲಕ್ಷರೂ. ನೀಡಲಾಗುತ್ತದೆ.
ವಿವಾಹವಾಗಲು ಬಯಸುವ ವಧುವಿನ ಹೆತ್ತವರು ಸರ್ಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು. ವರನ ಹೆತ್ತವರೂ ಅದೇ ಮಾದರಿ ಅನುಸರಿಸಬೇಕು. ಇಂತಿಷ್ಟೇ ಸಂಖ್ಯೆಯ ಜೋಡಿಗಳು ಎಂದು ನಿಗದಿ ಮಾಡಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.