Telangana;3 ಬಾರಿ ಗೆದ್ದಿದ್ದ ಟಿಆರೆಸ್ ನಾಯಕ ಜರ್ಮನಿ ಪ್ರಜೆ: ಹೈಕೋರ್ಟ್
Team Udayavani, Dec 10, 2024, 6:40 AM IST
ಹೈದರಾಬಾದ್: ಟಿಆರ್ಎಸ್ನಿಂದ 3 ಬಾರಿ ವೇಮುಲವಾಡ ಕ್ಷೇತ್ರದಿಂದ ಗೆದ್ದಿದ್ದ ಚೆನ್ನಮಾನೇನಿ ರಮೇಶ್ ಜರ್ಮನಿ ಪ್ರಜೆ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ. ಈ ಅಂಶವನ್ನು ಮುಚ್ಚಿಟ್ಟು ಭಾರತೀಯ ನಾಗರಿಕ ಎಂದು ಸುಳ್ಳು ದಾಖಲೆ ನೀಡಿ ಚುನಾವಣೆಗೆ ಸ್ಪರ್ಧಿಸಿದ ಆರೋಪದ ಹಿನ್ನೆಲೆಯಲ್ಲಿ ಅವರಿಗೆ 30 ಲಕ್ಷ ರೂ.ಗಳ ದಂಡ ವಿಧಿಸಿದೆ.
ಈ ಪೈಕಿ 25 ಲಕ್ಷ ರೂ.ಗಳನ್ನು ರಮೇಶ್ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ನ ಆಡಿ ಶ್ರೀನಿವಾಸ್ಗೆ ನೀಡಲು ಆದೇಶಿಸಿದೆ. ಮೂಲತಃ ಆಂಧ್ರದವರೇ ಆದ ರಮೇಶ್ ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸೇರಿದ್ದು ಉದ್ಯೋಗಕ್ಕಾಗಿ ಜರ್ಮನಿಗೆ ತೆರಳಿ ಅಲ್ಲಿನ ನಾಗರಿಕತ್ವ ಪಡೆದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.