Manipal Health ಷೇರು ಖರೀದಿಸಿದ ಸಿಂಗಾಪುರ ಸಂಸ್ಥೆ
ದೇಶದ ಆರೋಗ್ಯ ವಲಯದ ಅತೀ ದೊಡ್ಡ ಒಪ್ಪಂದವಿದು
Team Udayavani, Apr 11, 2023, 7:23 AM IST
ಹೊಸದಿಲ್ಲಿ: ಸಿಂಗಾಪುರದ ಸರಕಾರಿ ಸ್ವಾಮ್ಯದ ಟೆಮಾಸೆಕ್ ಸಂಸ್ಥೆಯು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಹೆಚ್ಚುವರಿ ಶೇ. 41ರಷ್ಟು ಷೇರುಗಳನ್ನು ಖರೀದಿ ಸುವುದಾಗಿ ಘೋಷಿಸಿದ್ದು, ಈ ಮೂಲಕ ಮಣಿಪಾಲ ಆಸ್ಪತ್ರೆಗಳ ಸಮೂಹದಲ್ಲಿ ಟೆಮಾಸೆಕ್ ಷೇರುಗಳ ಒಟ್ಟು ಪ್ರಮಾಣ ಶೇ. 59ಕ್ಕೆ ಏರಲಿದೆ. ಇದನ್ನು ಭಾರತದ ಆರೋಗ್ಯ ಕ್ಷೇತ್ರದಲ್ಲೇ ಅತೀ ದೊಡ್ಡ ಒಪ್ಪಂದ ಎಂದು ಪರಿಗಣಿಸಲಾಗಿದೆ.
ಷೇರು ಖರೀದಿಯ ಕುರಿತು ಸೋಮವಾರ ಅಧಿಕೃತ ವಾಗಿ ಘೋಷಣೆ ಮಾಡಲಾಯಿತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ (ಎಂಎಚ್‌ಇ) “ಮಣಿಪಾಲ ಆಸ್ಪತ್ರೆಗಳು’ ಬ್ರ್ಯಾಂಡ್ ಹೆಸರಿನಡಿ ದೇಶದ 16 ನಗರಗಳಲ್ಲಿ ಸುಮಾರು 8,300 ಹಾಸಿಗೆ ಸಾಮರ್ಥ್ಯವಿರುವ 29 ಆಸ್ಪತ್ರೆಗಳ ಸಮೂಹವನ್ನು ಹೊಂದಿದೆ.
ಈಗ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಪ್ರವರ್ತಕ ರಂಜನ್ ಪೈ ಅವರ ಕುಟುಂಬ, ಟಿಪಿಜಿ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್)ಯಲ್ಲಿರುವ ಹೆಚ್ಚುವರಿ ಷೇರುಗಳನ್ನು ಟೆಮಾಸೆಕ್ ಖರೀದಿಸುತ್ತಿದೆ. ಈಗಾಗಲೇ ಟೆಮಾಸೆಕ್ ಸಂಸ್ಥೆಯು ಎಂಎಚ್‌ಇಯಲ್ಲಿ ಶೇ. 18ರಷ್ಟು ಷೇರುಗಳನ್ನು ಹೊಂದಿತ್ತು. ಈಗ ಮತ್ತೆ ಹೆಚ್ಚುವರಿ ಶೇ. 41 ಷೇರುಗಳ ಖರೀದಿ ಮೂಲಕ, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಲ್ಲಿ ಟೆಮಾಸೆಕ್ ಹೊಂದುವ ಷೇರುಗಳ ಒಟ್ಟು ಪ್ರಮಾಣ ಶೇ. 59ಕ್ಕೆ ಏರಲಿದೆ ಎಂದು ಸೋಮವಾರ ಬಿಡುಗಡೆ ಮಾಡಲಾದ ಜಂಟಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಆದರೆ, ಹೆಚ್ಚಿನ ಹಣಕಾಸು ವಿವರಗಳನ್ನು ಕಂಪೆನಿ ನೀಡಿಲ್ಲ. ಈ ಒಪ್ಪಂದದ ಬಳಿಕ ಎಂಎಚ್‌ಇಯಲ್ಲಿ ಪೈ ಕುಟುಂಬದ ಷೇರುಗಳು ಶೇ. 30ರಷ್ಟು ಇರಲಿವೆ.
16,300 ಕೋಟಿ ರೂ.ಗಳ ಷೇರು
ಮೂಲಗಳ ಪ್ರಕಾರ ಟೆಮಾಸೆಕ್ ಸಂಸ್ಥೆಯು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಿಂದ ಹೆಚ್ಚುವರಿ ಯಾಗಿ ಖರೀದಿಸು ತ್ತಿರುವ ಷೇರುಗಳ ಮೌಲ್ಯ 16,300 ಕೋಟಿ ರೂ.ಗಳು. ಟೆಮಾಸೆಕ್ ಅಧೀನಕ್ಕೆ ಶೇ. 59ರಷ್ಟು ಷೇರುಗಳು ಬರ ಲಿವೆ. ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಒಟ್ಟು ಮೌಲ್ಯ ಸುಮಾರು 40 ಸಾವಿರ ಕೋಟಿ ರೂ.ಗಳು ಎಂದು ಹೇಳಲಾಗಿದೆ.
ಹರ್ಷದ ಸಂಗತಿ
ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಲ್ಲಿನ ಗಣ ನೀಯ ಪ್ರಮಾಣದ ಷೇರುಗಳನ್ನು ಟೆಮಾಸೆಕ್ ಸ್ವಾಧೀನ ಪಡಿಸಿ ಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ. ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆಯು ದೀರ್ಘಾವಧಿ ದೃಷ್ಟಿಕೋನ ಮತ್ತು ಸಂವೇದನಾಶೀಲ ಸಾಮಾ ಜಿಕ ಹೊಣೆಗಾರಿಕೆಯನ್ನು ಬಯಸುತ್ತದೆ. ಇಂತಹ ಮೌಲ್ಯಗಳನ್ನು ಹೊಂದಿರುವ ಟೆಮಾಸೆಕ್ ಮತ್ತು ಟಿಪಿಜಿಯಂಥ ಪಾಲುದಾರರನ್ನು ನಾವು ಹೊಂದಿರು ವುದು ಹರ್ಷದ ಸಂಗತಿ ಎಂದು ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಪ್ರವರ್ತಕ ರಂಜನ್ ಪೈ ಹೇಳಿದರು. ಕೊರೊನಾದಂಥ ಕ್ಲಿಷ್ಟಕರ ಸಮಯದಲ್ಲೂ ನಮ್ಮೊಂದಿಗೆ ಕೈಜೋಡಿಸಿ, ಉನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಬೆಂಬಲವಾಗಿ ನಿಂತ ಎನ್‌ಐಐಎಫ್ಗೂ ನಾನು ಆಭಾರಿಯಾಗಿದ್ದೇನೆ ಎಂದೂ ಅವರು ತಿಳಿಸಿದರು.
ಟಿಪಿಜಿ ಕ್ಯಾಪಿಟಲ್‌ನ ಏಷ್ಯಾ ವಿಭಾಗದ ಸಹ- ಪ್ರವರ್ತಕ ಪಾಲುದಾರ ಪುನೀತ್ ಭಾಟಿಯಾ ಮಾತನಾಡಿ, ಆರೋಗ್ಯ ಕ್ಷೇತ್ರದ ಕ್ಷಮತೆಗೆ ಮಣಿಪಾಲ್ ಸಂಸ್ಥೆ ಇಟ್ಟಿರುವ ಹೆಜ್ಜೆಗೆ ಸದಾ ನಮ್ಮ ಬೆಂಬಲವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.