ದೇಗುಲಗಳೇ ಐಸಿಸ್ ಗುರಿ
ಬಂಧಿತ 3 ಉಗ್ರರು ಬಾಯ್ಬಿಟ್ಟ ಸ್ಫೋಟಕ ಮಾಹಿತಿ
Team Udayavani, Jun 18, 2019, 6:00 AM IST
ನವದೆಹಲಿ: ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದಂದು ಸ್ಫೋಟ ನಡೆಸಿದ ಉಗ್ರರ ಜೊತೆಗೆ ನಂಟು ಹೊಂದಿದ್ದರು ಎಂಬ ಶಂಕೆಯ ಮೇರೆಗೆ ಕಳೆದ ವಾರ ತಮಿಳುನಾಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದ ಮೂವರು ಉಗ್ರರು ದಕ್ಷಿಣ ಭಾರತದ ಪ್ರಮುಖ ದೇಗುಲಗಳು ಮತ್ತು ಚರ್ಚ್‌ಗಳ ಮೇಲೆ ದಾಳಿ ನಡೆಸುವ ಯೋಜನೆ ಹೊಂದಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಸ್ಫೋಟದ ಸಂಚು ಇನ್ನೂ ಯೋಜನೆಯ ರೂಪದಲ್ಲೇ ಇತ್ತು. ಅಷ್ಟೇ ಅಲ್ಲ, ಇದಕ್ಕೆ ಅಗತ್ಯವಿರುವವರನ್ನು ನೇಮಕ ಮಾಡುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಐಸಿಸ್‌ಗೆ ಸಂಬಂಧಿಸಿದ ಕೈಪಿಡಿಗಳನ್ನು ಇವರು ತಮಿಳಿಗೆ ಅನುವಾದ ಮಾಡುತ್ತಿದ್ದರು. ಇದನ್ನು ಬಳಸಿ ಯುವಕರನ್ನು ಮನವೊಲಿಸಲಾಗುತ್ತಿತ್ತು.
ಪೊಲೀಸರು ಈ ವಿವರಗಳನ್ನು ಎಫ್ಐಆರ್‌ನಲ್ಲಿ ವಿವರಿಸಿದ್ದಾರೆ. ಕಳೆದ ವಾರವೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಏಳು ಕಡೆಗಳಲ್ಲಿ ಶೋಧ ನಡೆಸಿತ್ತು. ಅಲ್ಲದೆ ಶ್ರೀಲಂಕಾ ಸ್ಫೋಟದ ಸಂಚುಕೋರ ಝಹ್ರನ್ ಹಶೀಮ್‌ಗೆ ಸ್ನೇಹಿತನಾಗಿದ್ದ ಮೊಹಮದ್ ಅಜರುದ್ದೀನ್ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿತ್ತು.
ಈ ವೇಳೆ ಇವರ ಬಳಿ ಇದ್ದ 14 ಮೊಬೈಲ್ ಫೋನ್‌ಗಳು, 29 ಸಿಮ್ ಕಾರ್ಡ್‌ಗಳು, 10 ಪೆನ್ ಡ್ರೈವ್‌ಗಳು, ಮೂರು ಲ್ಯಾಪ್‌ಟಾಪ್‌ಗ್ಳು, ಆರು ಮೆಮೊರಿ ಕಾರ್ಡ್‌ಗಳು, ನಾಲ್ಕು ಹಾರ್ಡ್ ಡಿಸ್ಕ್ ಡ್ರೈವ್‌ಗಳು ಹಾಗೂ ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಹಲವು ಪ್ರಚೋದನಕಾರಿ ಸಾಹಿತ್ಯವೂ ಇವರ ಬಳಿ ಇತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ. ಇವರ ಬಳಿ ಪಿಎಫ್ಐ ಮತ್ತು ಎಸ್‌ಡಿಪಿಐಗೆ ಸಂಬಂಧಿಸಿದ ಕೆಲವು ಕೈಪಿಡಿಗಳೂ ಇದ್ದವು ಎಂದು ಎನ್‌ಐಎ ಹೇಳಿದೆ. ಈ ಉಗ್ರರು ಫೇಸ್‌ಬುಕ್‌ನಲ್ಲಿ ಖಲೀಫಾಜಿಎಫ್ಎಕ್ಸ್ ಎಂಬ ಹೆಸರಿನ ಪೇಜ್ ತೆರೆದಿದ್ದು, ಇದರಲ್ಲಿ ಐಸಿಸ್ ಪರ ಪೋಸ್ಟ್ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.