ಹೆಚ್ಚಿನ ನಗದು ವಿಥ್‌ಡ್ರಾ ಕೊರತೆಗೆ ಕಾರಣ: ಕೇಂದ್ರ
Team Udayavani, Apr 20, 2018, 9:37 AM IST
ನವದೆಹಲಿ: ಅಗತ್ಯಕ್ಕಿಂತ ಹೆಚ್ಚು ನಗದು ಹಿಂಪಡೆದಿರುವುದೇ ಸದ್ಯ ಉಂಟಾಗಿರುವ ಕೊರತೆಗೆ ಕಾರಣ ಎಂದು ಕೇಂದ್ರ ಸರ್ಕಾರ ಕಂಡುಕೊಂಡಿದೆ. ಆರಂಭದಲ್ಲಿ ಈ ಕೊರತೆ ಕಾಣಿಸಿಕೊಂಡದ್ದು ತೆಲಂಗಾಣದಲ್ಲಿ, ನಂತರ ಉತ್ತರ ಕರ್ನಾಟಕ, ಬಳಿಕ ಆಂಧ್ರಪ್ರದೇಶದಲ್ಲಿ ಈ ಕೊರತೆ ಕಾಣಿಸಿಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖೀಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ. ಸಾರ್ವಜನಿಕರು ಎಟಿಎಂಗಳಿಂದ ಅಗತ್ಯಕ್ಕಿಂತ ಹೆಚ್ಚು ನಗದು ವಿಥ್ ಡ್ರಾ ಮಾಡಿದ್ದರಿಂದ ಈ ಕೊರತೆ ಉಂಟಾಗಿದೆ ಎಂಬ ವಾದವನ್ನು ಸರ್ಕಾರ ಒಪ್ಪಿಕೊಂಡಿಲ್ಲ.
ಇದೇ ವೇಳೆ ಆದಾಯ ತೆರಿಗೆ ಕಂಡುಕೊಂಡ ಮಾಹಿತಿ ಪ್ರಕಾರ ದಕ್ಷಿಣದ ಮೂರು ರಾಜ್ಯಗಳಲ್ಲಿರುವ ಗುತ್ತಿಗೆದಾರರು, ವ್ಯಾಪಾರಸ್ಥರು, ಕೃಷಿ ಸಂಬಂಧಿತ ಉದ್ಯಮಿಗಳು ಮಾರ್ಚ್ ತಿಂಗಳ ಎರಡನೇ ವಾರದಿಂದ ಭಾರಿ ಪ್ರಮಾಣದಲ್ಲಿ ಚೆಕ್ ಮತ್ತು ಇತರ ಮಾರ್ಗದ ಮೂಲಕ ಪಾವತಿ ಮಾಡಲು ಆರಂಭಿಸಿದ್ದರು ಎಂದು ಮೂಲಗಳು ಹೇಳಿವೆ. ಅದಕ್ಕೆ ಪೂರಕವಾಗಿ ತೆರಿಗೆ ಇಲಾಖೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಚರಣೆ ನಡೆಸಿತ್ತು. ಈ ಹಂತದಲ್ಲಿ ಉದ್ಯಮಿಯೊಬ್ಬರು ಕೆಲವೇ ಗಂಟೆಗಳ ಅವಧಿಯಲ್ಲಿ 20 ಬಾರಿ ಅತ್ಯಧಿಕ ಮೊತ್ತವನ್ನು ಪಾವತಿ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.
POSನಲ್ಲಿ 2 ಸಾವಿರ ಶುಲ್ಕ ರಹಿತ ವಿತ್‌ಡ್ರಾ : ನಗದು ಕೊರತೆ ನೀಗಲು ಎಸ್‌ಬಿಐ ಕ್ರಮ
ನಗದು ಕೊರತೆ ನಿವಾರಿಸಲು ಪಾಯಿಂಟ್ ಆಫ್ ಸೇಲ್ಸ್ ಮಷಿನ್ ಗಳ ಮೂಲಕ ಸಣ್ಣ ಪಟ್ಟಣಗಳಲ್ಲಿ ಪ್ರತಿ ದಿನ 2 ಸಾವಿರ ರೂ. ವರೆಗೆ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಯಾವುದೇ ರೀತಿಯಲ್ಲಿ ಶುಲ್ಕ ವಿಧಿಸಲಾಗುತ್ತಿಲ್ಲ ಎಂದು SBI ಟ್ವೀಟ್ ಮೂಲಕ ಮಾಹಿತಿ ನೀಡಿದೆ. SBI ಮತ್ತು ಇತರ ಯಾವುದೇ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಮೂಲಕ ಮೂರನೇ ಹಂತದ ನಗರ ಪ್ರದೇಶಗಳಲ್ಲಿ 1 ಸಾವಿರ ರೂ. ವರೆಗೆ ವಿಥ್ ಡ್ರಾ ಮಾಡಲು ಅವಕಾಶವಿದೆ. 1 ಮತ್ತು 2ನೇ ಹಂತದ ನಗರಗಳಲ್ಲಿ ಶುಲ್ಕ ರಹಿತವಾಗಿ 1 ಸಾವಿರ ರೂ. ವಿಥ್‌ಡ್ರಾಕ್ಕೆ ಅವಕಾಶವಿದೆ ಎಂದು SBIನ ಮುಖ್ಯ ನಿರ್ವಹಣಾ ಅಧಿಕಾರಿ ನೀರಜ್ ವ್ಯಾಸ್ ತಿಳಿಸಿದ್ದಾರೆ.
ಇಂದು ಮುಕ್ತಾಯ: ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಉಂಟಾಗಿರುವ ನಗದು ಕೊರತೆ ಶುಕ್ರವಾರದ ಒಳಗಾಗಿ ಕೊನೆಗೊಳ್ಳಲಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ. ನಗದು ಕೊರತೆ ಇರುವ ಪ್ರದೇಶಗಳಿಗೆ ಈಗಾಗಲೇ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಹಣ ಎನ್ನುವುದು ಚಾಲನೆಯಲ್ಲಿರಬೇಕು. ಜನರು ತಮ್ಮ ಬಳಿಯಲ್ಲಿಯೇ ಅದನ್ನು ಇರಿಸಿಕೊಂಡಿದ್ದರೆ ಬ್ಯಾಂಕ್ ಗಳಿಗೂ ವಹಿವಾಟು ಕಷ್ಟವಾಗುತ್ತದೆ ಎಂದು ರಜನೀಶ್ ಕುಮಾರ್ ಹೇಳಿದ್ದಾರೆ.
ಮುಷ್ಕರದ ಎಚ್ಚರಿಕೆ: ಎಟಿಎಂಗಳಲ್ಲಿ ನಗದು ಪೂರೈಕೆಗೆ ಕೊರತೆ ಉಂಟಾಗಿರುವುದರಿಂದ ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳ, ಉದ್ಯೋಗಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿ ತಿಳಿಗೊಳಿಸದಿದ್ದರೆ ಮುಷ್ಕರ ನಡೆಸಬೇಕಾಗುತ್ತದೆ ಎಂದು ಅಖೀಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಗುರುವಾರ ಎಚ್ಚರಿಕೆ ನೀಡಿದ್ದಾರೆ. ನೋಟು ಅಮಾನ್ಯಗೊಂಡು 16 ತಿಂಗಳು ಕಳೆದರೂ ಎಟಿಎಂಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಇನ್ನೂ ಪೂರ್ತಿಗೊಂಡಿಲ್ಲ. RBI ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸದ್ದೇ ಕೊರತೆಗೆ ಕಾರಣ ಎಂದು ಟೀಕಿಸಿದರು.
6.08 ಲಕ್ಷ : SBI ಹೊಂದಿರುವ POS
4.78 ಲಕ್ಷ : ಹಣ ವಿಥ್‌ಡ್ರಾ ಮಾಡುವ ವ್ಯವಸ್ಥೆ ಇರುವ POS
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.