ಪಾಕ್ ಉಗ್ರರಿಂದ ಭಾರತದ ಮೇಲೆ ಮುಂದೆಯೂ ದಾಳಿ: ಅಮೆರಿಕ ಎಚ್ಚರಿಕೆ
Team Udayavani, Feb 14, 2018, 11:33 AM IST
ವಾಷಿಂಗ್ಟನ್ : ಪಾಕ್ ಬೆಂಬಲಿತ ಉಗ್ರ ಸಮೂಹಗಳು ಭಾರತದೊಳಗೆ ನುಗ್ಗಿ ಭಯೋತ್ಪಾದಕ ದಾಳಿಗಳನ್ನು ಮುಂದುವರಿಸಲಿವೆ ಎಂದು ಅಮೆರಿಕದ ಗುಪ್ತಚರ ದಳದ ಮುಖ್ಯಸ್ಥ ಮುನ್ನೆಚ್ಚರಿಕೆ ನೀಡಿದ್ದಾರೆ. ಉಗ್ರರ ಮುಂದುವರಿದ ದಾಳಿಗಳಿಂದಾಗಿ ಉಭಯ ದೇಶಗಳ ನಡುವಿನ ಬಿಕ್ಕಟ್ಟು ತಾರಕಕ್ಕೇರಲಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಶನಿವಾರ ಪಾಕ್ ಬೆಂಬಲಿತ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಜಮ್ಮುವಿನ ಸಂಜುವಾನ್ ಮಿಲಿಟರಿ ಶಿಬಿರದ ಮೇಲೆ ದಾಳಿ ನಡೆಸಿ ಏಳು ಭಾರತೀಯ ಯೋಧರನ್ನು ಹತ್ಯೆಗೈದ ಕೆಲ ದಿನಗಳ ಬಳಿಕ ಅಮೆರಿಕದ ಗುಪ್ತಚರ ದಳದ ಮುಖ್ಯಸ್ಥ ಡ್ಯಾನ್ ಕೋಟ್ಸ್ ಅವರಿಂದ ಈ ಮುನ್ನೆಚ್ಚರಿಕೆ ಬಂದಿದೆ. ಪಾಕ್ ಬೆಂಬಲಿತ ಉಗ್ರರು ಭಾರತದೊಳಗೆ ನುಗ್ಗಿ ನಡೆಸುವ ದಾಳಿಗಳು ಮುಂದುವರಿಯಲಿದ್ದು ಇದರಿಂದ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ಥಾನ ಮುಂಬರುವ ದಿನಗಳಲ್ಲಿ ಚೀನಕ್ಕೆ ನಿಕಟವಾಗಲಿದೆ. ತನ್ನಲ್ಲಿನ ಉಗ್ರರೊಂದಿಗಿನ ಬಾಂಧವ್ಯವನ್ನು ಅಂತೆಯೇ ಉಳಿಸಿಕೊಂಡು ವಿನೂತನ ಅಣ್ವಸ್ತ್ರಗಳನ್ನು ಮುಂದಿಟ್ಟು ಕೊಂಡು ಅಮೆರಿಕದ ಹಿತಾಸಕ್ತಿಗೆ ಬೆದರಿಕೆ ಒಡ್ಡಲಿದೆ; ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿನ ತನ್ನ ಸಹಕಾರವನ್ನು ನಿರ್ಬಂಧಿಸಲಿದೆ ಎಂದು ಕೋಟ್ಸ್ ಅವರು ಗುಪ್ತಚರ ಕುರಿತಾದ ಸೆನೆಟ್ ಆಯ್ಕೆ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ.
ಇಸ್ಲಾಮಾಬಾದ್ ಬೆಂಬಲಿತ ಉಗ್ರ ಸಮೂಹಗಳು ಪಾಕಿಸ್ಥಾನದಲ್ಲಿನ ತಮ್ಮ ಸುರಕ್ಷಿತ ತಾಣಗಳನ್ನು ಗರಿಷ್ಠವಾಗಿ ಬಳಸಿಕೊಂಡು ಭಾರತ ಮತ್ತು ಅಫ್ಘಾನಿಸ್ಥಾನದಲ್ಲಿ ಉಗ್ರ ದಾಳಿ ನಡೆಸಲಿವೆ; ಅಮೆರಿಕದ ಹಿತಾಸಕ್ತಿಗಳನ್ನು ಗುರಿ ಇರಿಸಿಕೊಂಡು ಈ ಉಗ್ರ ದಾಳಿಗಳು ನಡೆಯಲಿವೆ ಎಂದು ಕೋಟ್ಸ್ ಅವರು “ವಿಶ್ವಾದ್ಯಂತದ ಉಗ್ರ ಬೆದರಿಕೆಗಳ ವಿಶ್ಲೇಷಣೆ’ ಬಗೆಗಿನ ತಮ್ಮ ಹೇಳಿಕೆಯಲ್ಲಿ ಅಮೆರಿಕದ ಬೇಹು ಸಮುದಾಯವನ್ನು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.