ಉಗ್ರರು ಉತ್ತರ ಕಾಶ್ಮೀರಕ್ಕೆ?
Team Udayavani, Aug 23, 2019, 5:18 AM IST
ಶ್ರೀನಗರ: ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದ ದಕ್ಷಿಣ ಭಾಗದಲ್ಲೇ ಉಗ್ರ ಚಟುವಟಿಕೆ ನಡೆಯುತ್ತಿತ್ತಾದರೂ, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆದ ನಂತರ ಉಗ್ರರು ಉತ್ತರದ ಕಡೆಗೆ ಸ್ಥಳ ಬದಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈವರೆಗೆ ಉತ್ತರದ ಬಾರಾಮುಲ್ಲಾ ಹಾಗೂ ಇತರ ಪ್ರದೇಶಗಳಲ್ಲಿ ಉಗ್ರರು ಅಷ್ಟೇನೂ ಪ್ರಭಾವಶಾಲಿಯಾಗಿರಲಿಲ್ಲ. ಅದರಲ್ಲೂ ಕಳೆದ ಜನವರಿಯಲ್ಲಂತೂ ಬಾರಾಮುಲ್ಲಾವನ್ನು ಉಗ್ರ ಚಟುವಟಿಕೆ ಮುಕ್ತ ಜಿಲ್ಲೆ ಎಂದೇ ಸೇನೆ ಘೋಷಿಸಿತ್ತು. ಆದರೆ ಮಂಗಳವಾರ ಬಾರಾಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರನೊಬ್ಬನನ್ನು ಸೇನೆ ಹೊಡೆದುರುಳಿಸಿದೆ. ಈತನನ್ನು ತಿಂಗಳ ಹಿಂದಷ್ಟೇ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಮೋಮಿನ್ ರಸೂಲ್ ಗೋಜ್ರಿ ಎಂದು ಗುರುತಿಸಲಾಗಿದೆ.
ಉತ್ತರ ಕಾಶ್ಮೀರ ಭಾಗವು ಜನನಿಬಿಡ ಪ್ರದೇಶವಾಗಿದ್ದು, ಸಣ್ಣ ರಸ್ತೆಗಳು ಹಾಗೂ ಗಲ್ಲಿಗಳಿವೆ. ಇದರಿಂದ ಉಗ್ರರು ಮನೆಗಳಲ್ಲಿ ಅವಿತುಕೊಳ್ಳುವುದು ಸುಲಭ ಮತ್ತು ಶೋಧ ಕಾರ್ಯಾಚರಣೆ ನಡೆಸುವುದೂ ಸೇನೆಗೆ ಕಷ್ಟಕರ. ಅಲ್ಲದೆ, ಸೇನೆ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ಜನರು ಕಲ್ಲೆಸೆಯುವುದರಿಂದ ಕಾರ್ಯಾಚರಣೆ ನಡೆಸಲು ಅಸಾಧ್ಯ ಎಂಬಂತಾಗಿದೆ. 1997ರ ನಂತರದಲ್ಲಿ ನಡೆಸಿದ ಯಾವ ಕಾರ್ಯಾಚರಣೆಯೂ ಈ ಭಾಗದಲ್ಲಿ ಯಶಸ್ವಿಯಾಗಿರಲಿಲ್ಲ. ಕಾಲಾನಂತರದಲ್ಲಿ ಉಗ್ರ ಚಟುವಟಿಕೆ ದಕ್ಷಿಣ ಭಾಗಕ್ಕೆ ಸೀಮಿತಗೊಂಡಿತ್ತು. ಈಗ ಪುನಃ ಉಗ್ರರು ಉತ್ತರ ಭಾಗಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಸೇನೆ ಶಂಕಿಸಿದೆ.
ವಿಪಕ್ಷಗಳಿಂದ ಪ್ರತಿಭಟನೆ: ಜಮ್ಮು ಕಾಶ್ಮೀರದಲ್ಲಿ ಬಂಧಿಸಲಾಗಿರುವ ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡುವಂತೆ ಗುರುವಾರವೂ ಹಲವು ಪಕ್ಷಗಳ ಮುಖಂಡರು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಾಶ್ಮೀರದ ಹಲವೆಡೆ ನಿರ್ಬಂಧ ಸಡಿಲಿಸಲಾಗಿದೆ. ಆದರೆ ಮಾರುಕಟ್ಟೆ ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ. ಅಲ್ಲದೆ, ಮೊಬೈಲ್, ಇಂಟರ್ನೆಟ್ ಸೇವೆಗಳು ಬಂದ್ ಆಗಿಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.