Jammu Kashmir; ಕಥುವಾ ದಾಳಿಗೆ ಉಗ್ರರಿಂದ ಅಮೆರಿಕದ ಶಸ್ತ್ರಾಸ್ತ್ರ ಬಳಕೆ!
Team Udayavani, Jul 10, 2024, 4:31 AM IST
ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾ ದಲ್ಲಿ ಸೋಮ ವಾರ ಪಾಕ್ ಉಗ್ರರು ನಡೆಸಿದ ದಾಳಿಯಲ್ಲಿ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡ ಲಾಗಿದೆ. ಅಲ್ಲದೇ ಗಸ್ತು ಪಡೆಯ ಮೇಲಿನ ದಾಳಿಗೆ ಯಾರೋ ಸ್ಥಳೀಯರ ನೆರವನ್ನು ಉಗ್ರರು ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸೋಮವಾರ ನಡೆದಿದ್ದ ಈ ದಾಳಿಯಲ್ಲಿ 5 ಯೋಧರು ಹುತಾತ್ಮರಾಗಿದ್ದರು. ದಾಳಿ ನಡೆದ ಬದ್ನೋಟವು ಗುಡ್ಡ ಗಾಡು ಪ್ರದೇಶವಾಗಿದ್ದು, ಗಂಟೆಗೆ 10-15 ಕಿ.ಮೀ.ವೇಗದಲ್ಲಿ ಸಂಚರಿಸ ಬಹುದು. ಈ ಮಾಹಿತಿಯನ್ನು ಸ್ಥಳೀಯರಿಂದಲೇ ಕಲೆ ಹಾಕಿ ರುವ ಶಂಕೆ ಇದೆ. ಗಸ್ತು ವಾಹನ ನಿಧಾನವಾಗಿ ಸಂಚರಿಸುತ್ತಿರುವುದನ್ನು ಗಮನಿಸಿ ಗ್ರೆನೇಡ್ ದಾಳಿ ನಡೆಸಿದ್ದಾರೆ. ಬಳಿಕ ಪ್ರದೇಶದಲ್ಲೇ ಅವಿತಿದ್ದ 2-3 ಉಗ್ರರು ಸೇರಿ ಭದ್ರತಾ ಸಿಬಂದಿ ಮೇಲೆ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ರೈಫಲ್ಸ್‌ಗಳಿಂದ ಗುಂಡಿನ ಮಳೆಗರೆದಿದ್ದಾರೆ. ಈ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಉಗ್ರರ ಹೆಡೆಮುರಿ ಕಟ್ಟಲು ಎನ್‌ಐಎ ತನಿಖೆ ಶುರು
ಭದ್ರತಾ ಪಡೆ ಮೇಲೆ ದಾಳಿ ನಡೆಸಿ ಪರಾರಿಯಾಗಿರುವ ಉಗ್ರರ ಹೆಡೆ ಮುರಿ ಕಟ್ಟಲು ರಾಷ್ಟ್ರೀಯ ತನಿಖಾ ಸಂಸ್ಥೆಯೂ ಸಜ್ಜಾಗಿದೆ. ಜಮ್ಮು- ಕಾಶ್ಮೀರ ಪೊಲೀಸರು ನಡೆಸುತ್ತಿರುವ ತನಿಖೆಗೆ ಸಹಾಯ ಮಾಡಲು ಎನ್‌ಐಎ ಅಧಿಕಾರಿಗಳ ತಂಡ ವೊಂದು ಕಥುವಾಗೆ ಬಂದಿಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.