“ನಾವು ಸ್ವಾತಂತ್ರ್ಯದ ಸನಿಹದಲ್ಲಿದ್ದೇವೆ”: ಕಣಿವೆ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಉಗ್ರರ ಸಂಚು
Team Udayavani, Aug 31, 2019, 9:25 AM IST
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯ ನಂತರ ಸಹಜ ಸ್ಥಿತಿಗೆ ಬಂದಿದ್ದ ಜನಜೀವನವನ್ನು ಹಾಳುಗೆಡವಲು ಉಗ್ರರು ಪಣ ತೊಟ್ಟಂತಿದೆ. ಪಾಕ್ ಮೂಲದ ಉಗ್ರರು ಕಾಶ್ಮೀರದಲ್ಲಿ ಜನರಿಗೆ ಅಂಗಡಿ ಮುಂಗಟ್ಟು ತೆರೆಯದಂತೆ, ಟ್ಯಾಕ್ಸಿಗಳನ್ನು ಓಡಿಸದಂತೆ ಬೆದರಿಕೆ ಒಡ್ಡುತ್ತಿದ್ದಾರೆ.
ಉಗ್ರ ಸಂಘಟನೆಗಳಾದ ಲಷ್ಕರ್ ಎ ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಒಂದು ಪತ್ರ ಬಿಡುಗಡೆ ಮಾಡಿದ್ದು, “ನಾವು ಸ್ವಾತಂತ್ರ್ಯದ ಸನಿಹದಲ್ಲಿದ್ದೇವೆ, ನಮ್ಮ ಕೆಲಸವನ್ನು ಇನ್ನೂ ಸಧೃಡಗೊಳಿಸಬೇಕಿದೆ” ಎಂದು ಪತ್ರದಲ್ಲಿ ಬರೆದುಕೊಂಡಿದೆ. ಕಣಿವೆಯಲ್ಲಿ ಯಾರೂ ತಮ್ಮ ಮನೆಯಿಂದ ಹೊರಬರಬಾರದು. ಟ್ಯಾಕ್ಸಿಗಳನ್ನು ಓಡಿಸಬಾರದು. ಎಲ್ಲಾ ಟ್ಯಾಕ್ಸಿಗಳ ನೋಂದಣಿ ಸಂಖ್ಯೆಗಳು ನಮ್ಮ ಸಂಗ್ರಹದಲ್ಲಿದೆ. ಯಾರಾದರೂ ಟ್ಯಾಕ್ಸಿಗಳನ್ನು ರಸ್ತೆಗೆ ತಂದರೆ ಅವರು ಮುಂದಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಶಾಲಾ ಕಾಲೇಜುಗಳನ್ನು ಮರು ಆರಂಭಗೊಳಿಸಿರುವ ಕ್ರಮದ ಬಗ್ಗೆಯೂ ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಅಂಗಡಿ ರಾತ್ರಿಯವರೆಗೂ ತೆರೆದಿದ್ದ ಕಾರಣಕ್ಕಾಗಿ 65 ವರ್ಷದ ವೃದ್ದನನ್ನು ಗುರುವಾರ ಉಗ್ರರು ಹತ್ಯೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.