ದೌರ್ಜನ್ಯ ತಡೆಗೆ ಪಠ್ಯ”ಕ್ರಮ’
Team Udayavani, Sep 18, 2017, 8:35 AM IST
ಹೊಸದಿಲ್ಲಿ:ಗುರುಗ್ರಾಮದ ರ್ಯಾನ್ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಸಾವಿನ ಅನಂತರ ದೇಶಾದ್ಯಂತ ಮಕ್ಕಳ ಸುರಕ್ಷತೆ ವಿಚಾರ ಹೆಚ್ಚು ಚರ್ಚೆಯಾಗಿದೆ. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಕೇಂದ್ರ, ರಾಜ್ಯ ಸರಕಾರಗಳಿಗೆ ಸೂಚನೆ ಕೂಡ ನೀಡಿದೆ. ಈ ನಡುವೆ ಮಕ್ಕಳ ಸುರಕ್ಷತೆ ಮತ್ತು ಜಾಗೃತಿಗಾಗಿ ಎನ್‌ಸಿಇಆರ್‌ಟಿ ಹೊಸ ಆಲೋಚನೆ ಮಾಡಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದು “ಒಳ್ಳೆಯ ಸ್ಪರ್ಶ’ ಮತ್ತು ಯಾವುದು “ಕೆಟ್ಟ ಸ್ಪರ್ಶ’? ಸ್ಪರ್ಶದ ಹಿಂದಿನ ಉದ್ದೇಶ ತಿಳಿಯುವುದು ಹೇಗೆ? ಲೈಂಗಿಕ ಮತ್ತಿತರ ದೌರ್ಜನ್ಯ ನಡೆದಾಗ ಏನು ಮಾಡಬೇಕು ಎಂಬ ಕುರಿತು ಪಠ್ಯಪುಸ್ತಕಗಳ ಹಿಂಬದಿ ಪುಟದಲ್ಲಿ ಮಾಹಿತಿ ಮುದ್ರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಮಿತಿ (ಎನ್‌ಸಿಇಆರ್‌ಟಿ) ನಿರ್ಧರಿಸಿದೆ.
ಏನೆಲ್ಲ ಮಾಹಿತಿ?: ಶೈಕ್ಷಣಿಕ ವಿಷಯಗಳ ಕುರಿತು ಕೇಂದ್ರ, ರಾಜ್ಯ ಸರಕಾರಗಳಿಗೆ ಸಲಹೆ ನೀಡುವ ಎನ್‌ಸಿಇಆರ್‌ಟಿ, ಮುಂಬರುವ ಶೈಕ್ಷಣಿಕ ವರ್ಷದಿಂದ ತಾನು ಹೊರತರುವ ಎಲ್ಲ ಪಠ್ಯಪುಸ್ತಕಗಳ ಹಿಂದಿನ ಪುಟದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಅಗತ್ಯವಿರುವ ಮಾಹಿತಿ ಇರಲಿದೆ ಎಂದು ಹೇಳಿದೆ. ಸಹಾಯವಾಣಿ ಸಂಖ್ಯೆಗಳು, ಪೋಕೊÕà ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಸಮಿತಿ (ಎನ್‌ಸಿಪಿಸಿಆರ್) ಬಗೆಗಿನ ಸಂಕ್ಷಿಪ್ತ ವಿವರ ಸಹಿತ ಹಲವು ಉಪಯುಕ್ತ ಮಾಹಿತಿಗಳು ಪುಸ್ತಕದ ಹಿಂದಿನ ಪುಟದಲ್ಲಿರಲಿವೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲಾಣ ಇಲಾಖೆ ಕೋರಿಕೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ಎನ್‌ಸಿಇಆರ್‌ಟಿ ನಿರ್ದೇಶಕ ಹೃಷಿಕೇಶ್ ಸೇನಾಪತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
ISRO; ಶೀಘ್ರ ದೇಸಿ ನ್ಯಾವಿಗೇಶನ್ ವ್ಯವಸ್ಥೆ ಜಾರಿ
Congress guarantees; ಕರ್ನಾಟಕಕ್ಕೆ ಬಂದು ಯಶಸ್ಸು ನೋಡಿ: ಮಹಾ ಬಿಜೆಪಿಗೆ ಡಿಕೆಶಿ ಚಾಟಿ
Kejriwal ಮನೆಯಲ್ಲಿ 100 ಎಸಿ, 73 ಲಕ್ಷದ ಟಿವಿ: ಬಿಜೆಪಿ ಟೀಕೆ
Ayodhya; ಕಾರ್ಮಿಕರ ಕೊರತೆ: ಮಂದಿರ ನಿರ್ಮಾಣ 3 ತಿಂಗಳು ವಿಳಂಬ
MUST WATCH
ಹೊಸ ಸೇರ್ಪಡೆ
Delhi Ganesh: ಹಿರಿಯ ನಟ ಡೆಲ್ಲಿ ಗಣೇಶ್ ಇನ್ನಿಲ್ಲ
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Toxic: ಯಶ್ ಚಿತ್ರಕ್ಕೆ ಬಂದ ಹಾಲಿವುಡ್ ನ ಜೆ.ಜೆ.ಪೆರ್ರಿ
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
BGT: ಭಾರತ ವಿರುದ್ದದ ಮೊದಲ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.