ಹಿಮಾಚಲಕ್ಕೆ ಜೈರಾಮ್ ಠಾಕೂರ್‌ ಸಿಎಂ, ಡಿ.27ರಂದು ಪ್ರಮಾಣವಚನ

Team Udayavani, Dec 25, 2017, 6:00 AM IST

himachal.jpg

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮುಖ್ಯ ಮಂತ್ರಿ ಯಾರು ಎಂಬ ಗೊಂದಲಕ್ಕೆ ರವಿವಾರ ತೆರೆ ಬಿದ್ದಿದೆ. ಕರ್ನಾಟಕದ ಅಳಿಯ, ಮಾಜಿ ಸಚಿವ ಜೈರಾಮ್‌ ಠಾಕೂರ್‌ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಶಿಮ್ಲಾದಲ್ಲಿ ನಡೆದ ಬಿಜೆಪಿ ಶಾಸಕ ಪಕ್ಷದ ಸಭೆಯಲ್ಲಿ ಐದು ಬಾರಿ ಶಾಸಕರಾಗಿರುವ ಠಾಕೂರ್‌ ಅವರನ್ನು ಪ್ರಮುಖ ಹುದ್ದೆಗೆ ಆಯ್ಕೆ ಮಾಡಲಾಯಿತು. ಡಿ. 27ರಂದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್‌ ಪ್ರಕಾಶ್‌ ನಡ್ಡಾ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಆಕಾಂಕ್ಷಿ
ಯಾಗಿದ್ದರು. ಶನಿವಾರ ರಾತ್ರಿಯ ವರೆಗೆ ಮಾಜಿ ಮುಖ್ಯಮಂತ್ರಿ ಪಿ.ಕೆ. ಧುಮಾಲ್‌ ಅವರೇ ಪ್ರಬಲ ಸ್ಥಾನಾಕಾಂಕ್ಷಿ ಯಾಗಿದ್ದರು. ಕೊನೆಯ ಹಂತದವರೆಗೆ ನಡೆದ ಮಾತುಕತೆಯಲ್ಲಿ ಧುಮಾಲ್‌ ಅವ ರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದರು.

ಹಿಮಾಚಲ ಪ್ರದೇಶದ ಮಂಡಿ ಪ್ರದೇಶದಿಂದ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾದ ಮೊದಲ ನಾಯಕ ಠಾಕೂರ್‌ ಆಗಿದ್ದಾರೆ. ಈ ಪ್ರದೇಶದಿಂದಲೇ ಬಿಜೆಪಿ ಹಾಲಿ ಸಾಲಿನಲ್ಲಿ ಹತ್ತು ಸ್ಥಾನಗಳ ಪೈಕಿ ಒಂಬತ್ತನ್ನು ಗೆದ್ದಿತ್ತು. ಇದುವರೆಗಿನ ಇತಿಹಾಸ ನೋಡಿದರೆ ಶಿಮ್ಲಾ, ಕಾಂಗ್ರಾ ಮತ್ತು ಸಿರ್ಮೋರ್‌ ಪ್ರದೇಶಗಳ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗುತ್ತಿದ್ದರು.

ಇಬ್ಬರು ವೀಕ್ಷಕರು: ಮಾಜಿ ಮುಖ್ಯಮಂತ್ರಿ ಪಿ.ಕೆ. ಧುಮಾಲ್‌ ಪರವಾಗಿಯೇ ಹೆಚ್ಚಿನ ಶಾಸಕರು ಬೆಂಬಲ ವ್ಯಕ್ತಪಡಿಸುತ್ತಿದ್ದುದರಿಂದ ಬಿಜೆಪಿ ವರಿಷ್ಠ ಮಂಡಳಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಮತ್ತು ನರೇಂದ್ರ ಸಿಂಗ್‌ ತೋಮರ್‌ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿತ್ತು. ಅವರ ಸಮ್ಮುಖದಲ್ಲಿಯೇ ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೆಸರು ಸೂಚಿಸಿದ್ದಕ್ಕೆ ಜಟಾಪಟಿಯೇ ನಡೆದಿತ್ತು.

ಕಾಂಗ್ರೆಸ್‌ ಮುಕ್ತ ಹಿಮಾಚಲ: ಹಿಮಾಚಲ ಪ್ರದೇಶ ಬಿಜೆಪಿ ಶಾಸಕ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಜೈರಾಮ್‌ ಠಾಕೂರ್‌ ಅವರು, “ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್‌ ಮುಕ್ತ ಗೊಳಿಸಬೇಕು ಎಂಬ ಕನಸು ನನಸಾಗಿದೆ. ಬಿಜೆಪಿ ಶಾಸಕ ಪಕ್ಷದ ನಾಯಕನಾಗಿ ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಮತ್ತು ಶಾಸಕರಿಗೆ ಕೃತಜ್ಞತೆಗಳು. ಮಾಜಿ ಮುಖ್ಯಮಂತ್ರಿ ಪಿ.ಕೆ. ಧುಮಾಲ್‌ ನನ್ನ ಹೆಸರನ್ನು ಪ್ರಸ್ತಾವ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.

ಯಾರಿವರು ಹೊಸ ಸಿಎಂ?
ರಜಪೂತ್‌ ಕುಟುಂಬದಲ್ಲಿ ಹುಟ್ಟಿದ ಜೈರಾಮ್‌ ಠಾಕೂರ್‌ ಆರಂಭದಲ್ಲಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ನಲ್ಲಿ ಸಕ್ರಿಯರಾಗಿದ್ದವರು. ಪಂಜಾಬ್‌ ವಿವಿಯಿಂದ ಎಂ.ಎ. ಪದವಿ ಪಡೆದ ಬಳಿಕ ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1993ರಲ್ಲಿ  ಮಂಡಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಯಲ್ಲಿ  ಸ್ಪರ್ಧಿಸಿದರೂ ಸೋತರು. ಆದರೂ ಪಟ್ಟುಬಿಡದ ಅವರು 1998ರಲ್ಲಿ  ನಡೆದ ಚುನಾವಣೆಯಲ್ಲಿ ಆಯ್ಕೆ ಯಾದರು. 2007-2012ರ ಅವಧಿಯಲ್ಲಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವರಾಗಿ ದ್ದರು. 2007-09ರ ವರೆಗೆ ಹಿಮಾಚಲ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದರು. ಅವರ ಪತ್ನಿ ಡಾ| ಸಾಧನಾ ಕರ್ನಾಟಕದ ಶಿವಮೊಗ್ಗ ಮೂಲದವರು. ಎಬಿವಿಪಿ ಕಾರ್ಯಕರ್ತರಾಗಿರುವ ಡಾ| ಸಾಧನಾ ಅವರ ಕುಟುಂಬ ಬಹು ಹಿಂದೆಯೇ ಶಿವಮೊಗ್ಗದಿಂದ ಜೈಪುರಕ್ಕೆ ವಲಸೆ ಹೋಗಿತ್ತು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. 2003ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನ.23ರ ಬಳಿಕ ಝಾರ್ಖಂಡಲ್ಲಿ ಸೊರೇನ್‌ ಸರಕಾರಕ್ಕೆ ವಿದಾಯ: ಅಮಿತ್‌ ಶಾ

Amit Shah: ನ.23ರ ಬಳಿಕ ಝಾರ್ಖಂಡಲ್ಲಿ ಸೊರೇನ್‌ ಸರಕಾರಕ್ಕೆ ವಿದಾಯ

ಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶ

Flight: ಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

ಬೆಂಗಳೂರಿನ ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

Bengaluru ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.