ಮೊದಲ ನದಿ ಜೋಡಣೆ ಯೋಜನೆಗೆ ಹಸಿರು ನಿಶಾನೆ
Team Udayavani, Jan 14, 2017, 9:32 AM IST
ಹೊಸದಿಲ್ಲಿ: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಕೆನ್ – ಬೆತ್ವಾ ನದಿ ಜೋಡಣೆ ಕಾರ್ಯಕ್ರಮಕ್ಕೆ ಪರಿಸರ ಆಯೋಗ ಹಾಗೂ ಬುಡಕಟ್ಟು ಸಚಿವಾಲಯಗಳ ಅನುಮೋದನೆ ಸಿಕ್ಕಿದೆ. ಇದರಿಂದಾಗಿ ದೇಶದ ಮೊದಲ ಅಂತಾರಾಜ್ಯ ನದಿ ಜೋಡಣೆ ಯೋಜನೆಗೆ ಇದ್ದ ತೊಡಕು ಬಹುತೇಕ ನಿವಾರಣೆಯಾದಂತಾಗಿವೆ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮತ ದಾನಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಯೋಜನೆಗೆ ಅನುಮತಿ ಸಿಕ್ಕಿರುವುದು, ಯೋಜನೆಗೆ ಚಾಲನೆ ನೀಡಿದ್ದ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ನೆರವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಹರಡಿ ಕೊಂಡಿರುವ ಬರಪೀಡಿತ ಬುಂದೇಲ್ಖಂಡ ಪ್ರದೇಶಕ್ಕೆ ಕುಡಿಯುವ ನೀರು ಮತ್ತು 6.35 ಲಕ್ಷ ಹೆಕ್ಟೇರ್ ಜಮೀನಿಗೆ ನೀರೊದಗಿಸುವ 9,393 ಕೋಟಿ ರೂ. ವೆಚ್ಚದ ಕೆನ್- ಬೆತ್ವಾ ನದಿ ಜೋಡಣೆ ಯೋಜನೆಗೆ ಪರಿಸರ ಪರಿಶೀಲನಾ ಸಮಿತಿ ಹಾಗೂ ಬುಡಕಟ್ಟು ಸಚಿವಾಲಯಗಳು ಅನುಮತಿ ಕೊಟ್ಟಿವೆ ಎಂದು ಜಲಸಂಪನ್ಮೂಲ ಸಚಿವೆ ಉಮಾಭಾರತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Ayodhya ರಾಮಮಂದಿರಕ್ಕೆ ಇಂದು ವರ್ಷಪೂರ್ಣ: ಹೇಗಿರಲಿದೆ ಕಾರ್ಯಕ್ರಮ?
Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್
Maha Kumbh; ಜಾಗ ಕೇಳಿದರೆ ಹುಷಾರ್: ವಕ್ಫ್ ಬೋರ್ಡ್ಗೆ ಎಚ್ಚರಿಕೆ ನೀಡಿದ ಯೋಗಿ
Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.