ತಿಂಗಳಲ್ಲಿ ಮೂರನೇ ಬಾರಿಗೆ ಪದ್ಮಾವತಿ ವಿರುದ್ಧದ ಅರ್ಜಿ ವಜಾ
Team Udayavani, Nov 29, 2017, 7:10 AM IST
ನವದೆಹಲಿ: ಒಂದೇ ತಿಂಗಳಲ್ಲಿ 3ನೇ ಬಾರಿಗೆ ವಿವಾದಾತ್ಮಕ “ಪದ್ಮಾವತಿ’ ಸಿನಿಮಾಗೆ ನಿಷೇಧ ಹೇರುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ವಿದೇಶಗಳಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ವಕೀಲರೊಬ್ಬರು ಸಲ್ಲಿ ಸಿದ್ದ ಹೊಸ ಅರ್ಜಿಯನ್ನೂ ಮಂಗಳ ವಾರ ನ್ಯಾಯಾಲಯ ವಜಾ ಮಾಡಿದ್ದು, ಸಿಬಿಎಫ್ಸಿ ಪ್ರಮಾಣಪತ್ರ ಸಿಗುವವ ರೆಗೂ ನಿಷೇಧ ಸಾಧ್ಯವಿಲ್ಲ ಎಂದಿದೆ.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಿನಿಮಾಗೆ ನಿಷೇಧ ಹೇರಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೆಲವು ಜನಪ್ರತಿನಿಧಿಗಳನ್ನು ನ್ಯಾಯ ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ಸಾರ್ವಜನಿಕ ಹುದ್ದೆಯಲ್ಲಿ ಇರುವವರೇ ಸಿನಿಮಾವನ್ನು ವೀಕ್ಷಿಸುವ ಮೊದಲೇ ಪರ-ವಿರೋಧ ಮಾತನಾಡಿದರೆ, ಅದು ಸಿಬಿಎಫ್ಸಿ ಮೇಲೆ ಪ್ರಭಾವ ಬೀರಿದಂತಾಗುವುದಿಲ್ಲವೇ ಎಂದು ಖಾರ ವಾಗಿ ಪ್ರಶ್ನಿಸಿತು. ಬಳಿಕ ನಿಷೇಧ ಕೋ ರಿದ್ದ ಅರ್ಜಿಯನ್ನು ವಜಾ ಮಾಡಿತು.
ಸುಪ್ರೀಂ ಆದೇಶ ಕುರಿತು ಪ್ರತಿಕ್ರಿಯಿ ಸಿರುವ ಹರ್ಯಾಣ ಸಚಿವ ಅನಿಲ್ ವಿಜ್, “ನಾವು ಹೇಳಿಕೆ ಕೊಡಲೂ ಸುಪ್ರೀಂ ಕೋರ್ಟ್ ಅನುಮತಿ ಪಡೀ ಬೇಕೇ’ ಎಂದು ಪ್ರಶ್ನಿಸಿದ್ದಾರೆ. ಇನ್ನೊಂ ದೆಡೆ, ನಿರ್ದೇಶಕ ಬನ್ಸಾಲಿ ಸ್ಪಷ್ಟನೆ ನೀಡುವವರೆಗೂ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಹಾರ ಸಿಎಂ ನಿತೀಶ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.