ಸೇನೆಗೆ ಸಿಕ್ಕಿತು ಶಸ್ತ್ರಬಲ
Team Udayavani, Nov 10, 2018, 8:41 AM IST
ಮುಂಬೈ: ಸೇನೆಯ ಹೋರಾಟ ಹಾಗೂ ಸಾಮರ್ಥ್ಯ ಹೆಚ್ಚಳದ ಭಾಗವಾಗಿ ಮೂರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಶುಕ್ರವಾರ ಸೇರ್ಪಡೆಗೊಳಿಸಲಾಗಿದೆ. ಮಹಾರಾಷ್ಟ್ರದ ದಿಯೋಲಾಯ್‌ನಲ್ಲಿರುವ ಫೀಲ್ಡ್ ಫೈರಿಂಗ್ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಎಂ777 ಎ2 ಅಲ್ಟ್ರಾ ಲೈಟ್ ಹೊವಿಟ್ಜರ್‌ಗಳು, ಕೆ-9 ವಜ್ರ ಸೆಲ್ಫ್ ಪ್ರೊಪೆಲ್ಡ್ ಗನ್ ಮತ್ತು ಕಾಂಪೊಸಿಟ್ ಗನ್ ಟೋವಿಂಗ್ ಟ್ರ್ಯಾಕ್ಟರ್ ಅನ್ನು ಸೇನೆಗೆ ಸೇರ್ಪಡೆ ಮಾಡಲಾಯಿತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭೂಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇಂತಹ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಮುಂದಿನ ವರ್ಷಗಳಲ್ಲಿ ಸೇನೆಗೆ ನಿಯೋಜಿಸಲಾಗುತ್ತದೆ ಎಂದಿದ್ದಾರೆ. ಬೋಫೋರ್ಸ್ ಗನ್‌ಗಳನ್ನು ನಿಯೋಜಿಸಿದ 30 ವರ್ಷಗಳ ಬಳಿಕ ಈ ಗನ್‌ಗಳು ಲಭ್ಯವಾಗಿವೆ. ಹೊವಿಟ್ಜರ್ ಗನ್‌ಗಳನ್ನು ಅಮೆರಿಕದಿಂದ ಖರೀದಿಸಲಾಗಿದೆ. ಮಹಿಂದ್ರಾ ಡಿಫೆನ್ಸ್ ಬಿಎಇ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಜೋಡಿಸಲಾಗಿದೆ. ಇವು ವಿಶಿಷ್ಟ ಗನ್‌ಗಳಾಗಿದ್ದು ಸುಲಭವಾಗಿ ಸಾಗಿಸಬಹುದಾಗಿದೆ. ಸದ್ಯ ಅಮೆರಿಕ, ಕೆನಡಾ ಆಸ್ಟ್ರೇಲಿಯಾದಲ್ಲಿ ಈ ಗನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಕೆ-9 ವಜ್ರ ಸೆಲ್ಫ್ ಗನ್‌ಗಳನ್ನು ದ. ಕೊರಿಯಾದಿಂದ ಖರೀದಿಸಿ, ಭಾರತದಲ್ಲಿ ಎಲ್ ಆ್ಯಂಡ್ ಟಿ ಕಂಪೆನಿ ಜೋಡಿಸಿದೆ. ಮೊದಲ 10ನ್ನು ಖರೀದಿ ಸಲಾಗಿದ್ದು, ಉಳಿದ 90 ಗನ್‌ಗಳನ್ನು ದೇಶೀಯವಾಗಿಯೇ ತಯಾರಿಸಲಾಗುತ್ತದೆ. ಆರ್ಟಿಲರಿ ಟ್ರ್ಯಾಕ್ಟರ್ ಅನ್ನು ಭಾರತದಲ್ಲೇ ಅಶೋಕ್ ಲೇಲ್ಯಾಂಡ್ ತಯಾರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.