ಬಯಲಾದ ಸುಳ್ಳನ್ನು ಸತ್ಯವನ್ನಾಗಿಸಲು ಕಾಂಗ್ರೆಸ್ ಯತ್ನ:ಪರಿಕ್ಕರ್
Team Udayavani, Jan 2, 2019, 10:03 AM IST
ಪಣಜಿ: ರಫೇಲ್ ಡೀಲ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಆಡಿಯೋ ಸುಳ್ಳು ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಟ್ವೀಟ್ ಮಾಡಿದ್ದಾರೆ.
‘ರಫೇಲ್ ವಿಚಾರದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನಿಂದ ಬಯಲಾಗಿರುವ ಸುಳ್ಳನ್ನು ಸತ್ಯವನ್ನಾಗಿಸಲು ಸೃಷ್ಟಿಸಿರುವ ಹತಾಶ ಪ್ರಯತ್ನ.ಅಂತಹ ಚರ್ಚೆಗಳು ಸಂಪುಟದಲ್ಲಿ ಆಗಲಿ, ಬೇರೆಲ್ಲೂ ನಡೆದೇ ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
#WATCH Randeep Surjewala, Congress releases audio clip of Goa Health Minister Vishwajit Pratapsingh Rane claiming Chief Minister Manohar Parrikar has “All the files related to #RafaleDeal in his bedroom” pic.twitter.com/M8VZbfPnxJ
— ANI (@ANI) January 2, 2019
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು,ಅದರಲ್ಲಿ ಮನೋಹರ್ ಪರಿಕ್ಕರ್ ಅವರು ಗೋವಾದ ಸಚಿವ ವಿಶ್ವಜಿತ್ ಪ್ರತಾಪ್ ಸಿಂಗ್ ರಾಣೆ ಅವರೊಂದಿಗೆ ‘ನನ್ನನ್ನು ಯಾರು ಹುದ್ದೆಯಿಂದ ಕೆಳಗಿಳಿಸಲು ಸಾಧ್ಯವಿಲ್ಲ.ಯಾಕೆಂದರೆ ರಫೇಲ್‌ಗೆ ಸಂಬಂಧಿಸಿದ ಎಲ್ಲಾ ಕಡತಗಳು ನನ್ನ ಬೆಡ್‌ರೂಮ್‌ನಲ್ಲಿವೆ’ ಎಂದಿರುವುದು ಕೇಳಿ ಬಂದಿದೆ.
ಆಡಿಯೋ ತಿರುಚಲಾಗಿದೆ : ವಿಶ್ವಜಿತ್ ಪ್ರತಾಪ್ ರಾಣೆ
ಸಚಿವ ರಾಣೆ ಅವರು ಮಾತನಾಡಿ ಆಡಿಯೋವನ್ನು ಕಾಂಗ್ರೆಸ್ ತಿರುಚಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವರ ನಡುವೆ ಕೀಳು ಮಟ್ಟದ ತಿರುಚಿದ ಸಂಭಾಷಣೆಯನ್ನು ಸೃಷ್ಟಿಸಿದೆ. ಈ ಬಗ್ಗೆ ಕ್ರಿಮಿನಲ್ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.