ಬ್ಯಾಂಕ್ ವಹಿವಾಟು: ಎಲ್ಲ ರೀತಿಯ ಮಿತಿ, ನಿರ್ಬಂಧ ತೆರವು
Team Udayavani, Mar 14, 2017, 3:50 AM IST
ಮುಂಬಯಿ: ಕಳೆದ ನವೆಂಬರ್‌ನಲ್ಲಿ 500, 1000 ರೂ. ಮುಖಬೆಲೆಯ ನೋಟುಗಳನ್ನು ಅಪಮೌಲ್ಯಗೊಳಿಸಿದ ಅನಂತರ ಬ್ಯಾಂಕ್, ಎಟಿಎಂ ವಹಿವಾಟುಗಳ ಮೇಲೆ ಹೇರಲಾಗಿದ್ದ ಎಲ್ಲ ರೀತಿಯ ಮಿತಿ, ನಿರ್ಬಂಧಗಳನ್ನು ಸೋಮವಾರದಿಂದಲೇ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಪ್ಟಪಡಿಸಿದೆ.
ಇದಕ್ಕೆ ಮೊದಲು ವಾರಕ್ಕೆ 24 ಸಾವಿರ ರೂ. ಗಳನ್ನಷ್ಟೇ ವಿತ್‌ಡ್ರಾ ಮಾಡಲು ಅವ ಕಾಶವಿತ್ತು. ಅನಂತರ ಪರಿಸ್ಥಿತಿ ಸುಧಾರಿಸುತ್ತಾ ಬಂದಂತೆ ಇದನ್ನು ವಾರಕ್ಕೆ 50 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿತ್ತು. ಈಗ ವಿತ್‌ಡ್ರಾ ಮಾಡಲು ಯಾವ ಮಿತಿಯೂ ಇಲ್ಲ ಎಂದು ಆರ್‌ಬಿಐ ಉಪ ಗವರ್ನರ್ ಗಾಂಧಿ ತಿಳಿಸಿದ್ದಾರೆ.
ಮಾ. 13 ರಂದು ಮಿತಿ ರದ್ದುಗೊಳಿಸಲಾಗುವುದು ಎಂದು ಈ ಹಿಂದೆಯೇ ಆರ್‌ಬಿಐ ಮಾಹಿತಿ ನೀಡಿತ್ತು. ಕಳೆದ ನವೆಂಬರ್ 8ರಂದು ನೋಟು ಅಪಮೌಲ್ಯ ನಿರ್ಧಾರ ಪ್ರಕಟಿಸಿದ್ದ ಪ್ರಧಾನಿ ಮೋದಿ, ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೋಟುಗಳ ಹಾವಳಿ ತಡೆಗಾಗಿ
ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದರು. ಜತೆಗೆ, ಪರಿಸ್ಥಿತಿ ಸುಧಾರಿಸಲು 50 ದಿನಗಳ ಕಾಲಾವಕಾಶವನ್ನೂ ಕೋರಿದ್ದರು. ತದನಂತರ, ಬ್ಯಾಂಕ್, ಎಟಿಎಂ ವಹಿವಾಟುಗಳ ಮೇಲೆ ಒಂದರ ಮೇಲೆ ಒಂದರಂತೆ ಮಿತಿ, ನಿರ್ಬಂಧಗಳನ್ನು ಹೇರುತ್ತಾ ಬರಲಾಗಿತ್ತು. ಈಗ ಅಂತಿಮವಾಗಿ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.