ಕದನ ವಿರಾಮ ಉಲ್ಲಂಘನೆ: ಪಾಕ್ ಫಿರಂಗಿ ಬಳಕೆ
Team Udayavani, Mar 1, 2018, 8:15 AM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸುವುದು ಹೊಸತೇನಲ್ಲ. ಅಧಿಕೃತ ಮಾಹಿತಿ ಪ್ರಕಾರ ಹಾಲಿ ವರ್ಷದಲ್ಲಿ ಇದುವರೆಗೆ 411 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಉತ್ತರ ಕಾಶ್ಮೀರದ ಉರಿಗೆ ಹೊಂದಿಕೊಂಡಿರುವ ಎಲ್ಒಸಿ ಸಮೀಪವಿರುವ ಪಿರ್ ಪಂಜಾಲ್ ಪರ್ವತ ಪ್ರದೇಶಗಳಿಂದ 15 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಪಾಕ್ ಫಿರಂಗಿಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ. ಕದನ ವಿರಾಮ ಉಲ್ಲಂಘನೆ ಒಪ್ಪಂದ 2003ರಲ್ಲಿ ನಡೆದ ಅನಂತರ ಫಿರಂಗಿಗಳನ್ನು ಪಾಕ್ ಬಳಸಿರಲಿಲ್ಲ.
ಸೆಪ್ಟಂಬರ್ 2016ರಲ್ಲಿ ಕ್ಷಿಪ್ರ ದಾಳಿ ನಡೆದ ಬಳಿಕ ಉಭಯ ದೇಶಗಳ ಮಧ್ಯೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದಾಗ 155 ಎಂಎಂ ಬೊಫೋರ್ಸ್ ಗನ್ ಸಹಿತ ಇತರ ಫಿರಂಗಿಗಳನ್ನು ಬಳಸಿ ಪಾಕ್ ಪಿರ್ ಪಾಂಜಾಲ್ ಪ್ರದೇಶದಲ್ಲಿ ದಾಳಿ ನಡೆಸಿದೆ. ಬೇಸಗೆಯಲ್ಲಿ ಗಡಿ ಒಳನುಸುಳುವಿಕೆ ಹಾಗೂ ಕದನ ವಿರಾಮ ಉಲ್ಲಂಘನೆ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಮಧ್ಯೆ ಜಮ್ಮುವಿನ ರಜೌರಿ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕ್ ಪಡೆಗಳು ಬುಧವಾರ ಗುಂಡಿನ ದಾಳಿ ನಡೆಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.