ಕಂಬಳದಲ್ಲಿ ಕೋಣಗಳಿಗೆ ಹಿಂಸೆ ಕೊಡಲ್ಲ
Team Udayavani, Nov 18, 2017, 7:49 AM IST
ಹೊಸದಿಲ್ಲಿ: ಇತ್ತ ಕರ್ನಾಟಕದ ಸುವರ್ಣವಿಧಾನಸೌಧದಲ್ಲಿ ಕಂಬಳ ಮಸೂದೆಗೆ ಒಪ್ಪಿಗೆ ಸಿಗುತ್ತಿರುವಂತೆಯೇ, ಅತ್ತ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲೂ ಕೇಂದ್ರ ಸರಕಾರ ರಾಜ್ಯದ ಹಿತಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದೆ.
ಕಂಬಳ ವಿಚಾರದಲ್ಲಿ ಕರ್ನಾಟಕದ ಅತೀವ ಆತಂಕದ ಬಗ್ಗೆ ಪ್ರಶ್ನೆ ಮಾಡಿದ ಸುಪ್ರೀಂಕೋರ್ಟ್‌ನ ಮನವೊಲಿಕೆ ಮಾಡಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಇದರಲ್ಲಿ ಬಳಕೆ ಮಾಡುವ ಪ್ರಾಣಿಗಳಿಗೆ ಅನಾವಶ್ಯಕವಾಗಿ ಹಿಂಸೆ ನೀಡದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಅಲ್ಲದೆ ಕಂಬಳದಲ್ಲಿ ಬಳಕೆ ಮಾಡುವ ಪ್ರಾಣಿಗಳಿಗೆ ಹಿಂಸೆ ನೀಡದಂತೆ ನಿಯಮ ರೂಪಿಸಲು ಸುಪ್ರೀಂ ಕೋರ್ಟ್‌ಗೇ ವೇಣುಗೋಪಾಲ್ ಆಹ್ವಾನ ನೀಡಿದರು. ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ವಾದ ಮಂಡಿಸಿದ ಅವರು, “ಈ ಕ್ರೀಡೆಯಲ್ಲಿನ ಹಿಂಸೆ ಹೊರತುಪಡಿಸಿ, ಕಂಬಳಕ್ಕೆ ಒಪ್ಪಿಗೆ ನೀಡಬಹುದು’ ಎಂದರು.
ಇದೇ ಸಂದರ್ಭ ಕರ್ನಾಟಕ ಸರಕಾರದ ಅಧ್ಯಾದೇಶ ಮತ್ತು ಅತೀವ ಆತಂಕದ ಬಗ್ಗೆ ಪ್ರಶ್ನೆ ಮಾಡಿದ ಪೀಠಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, ಇದು ಕೇವಲ ಕರ್ನಾಟಕದ ಭಾವನೆ ಯಲ್ಲ, ಎಲ್ಲ ರಾಜ್ಯ ಸರಕಾರ ಗಳು ಇಂಥ ವಿಚಾರದಲ್ಲಿ ಇದೇ ರೀತಿಯ ಮನೋಭಾವ ಹೊಂದಿರುತ್ತವೆ ಎಂದರು.
ಕರ್ನಾಟಕದ ಪರ ವಾದ ಮಂಡಿಸಿದ ದೇವದತ್ತ ಕಾಮತ್, ಕಂಬಳದ ಬಗ್ಗೆ ಕೋರ್ಟ್‌ಗೆ ವಿವರಣೆ ನೀಡಿ ದರು. ಜೋಡಿ ಕೋಣಗಳಿಗೆ ನೊಗವೊಂದನ್ನು ಕಟ್ಟಿ ಅದನ್ನು ಪ್ರತ್ಯೇಕವಾಗಿ ಮಾಡಿದ ಕೆಸರಿನ ಗದ್ದೆಯಲ್ಲಿ ಓಡಿಸಲಾಗುವುದು. ಈ ಕ್ರೀಡೆಗೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳಿದ್ದು ನವೆಂಬರ್‌ನಿಂದ ಮಾರ್ಚ್‌ವರೆಗೆ ನಡೆಸಲಾಗು ತ್ತದೆ ಎಂದರು.
ಈ ಸಂದರ್ಭ ರೈತರ ಹೊಲ ಗಳು ಖಾಲಿಯಾಗಿರುವುದರಿಂದ ನವೆಂಬರ್- ಮಾರ್ಚ್ ಅವಧಿಯನ್ನು ಆಯ್ದುಕೊಳ್ಳಲಾಗು ತ್ತದೆ ಎಂದು ಹೇಳಿದರು. ಅಲ್ಲದೆ ಈ ಕ್ರೀಡೆ ಯನ್ನು ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲ ಪ್ರಾಣಿಗಳನ್ನು ಬಳಕೆ ಮಾಡಲ್ಲ. ಇದಕ್ಕಾಗಿಯೇ ವಿಶೇಷ ತಳಿಯ ಕೋಣಗಳನ್ನು ಬಳಸಲಾಗುತ್ತದೆ ಎಂದು ಬಣ್ಣಿಸಿದರು. ಇದಷ್ಟೇ ಅಲ್ಲ, ರಾಜ್ಯ ಸರಕಾರ ಹೊರಡಿಸಿರುವ ಕಂಬಳದ ಸಮಯದಲ್ಲಿ ಹಿಂಸೆ ನೀಡದ ಹಾಗೆ ನೋಡಿಕೊಳ್ಳಬೇಕಾದ ಕಠಿನ ಅಂಶಗಳುಳ್ಳ ಅಧಿಸೂಚನೆಯ ಪ್ರತಿಯನ್ನೂ ಕೋರ್ಟ್‌ಗೆ ಒಪ್ಪಿಸಿದರು.
ಆದರೂ, ಸುಪ್ರೀಂ ಕೋರ್ಟ್ ಕಂಬಳ ವಿಚಾರದಲ್ಲಿ ಸಮಾಧಾನವಾಗಲೇ ಇಲ್ಲ. ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿ, ಅದಕ್ಕೆ ಅಂಗೀ ಕಾರವೂ ದೊರೆತು ರಾಷ್ಟ್ರಪತಿಗಳು ಮಸೂದೆಯಲ್ಲಿನ ಕೆಲವೊಂದು ಅಂಶ ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ ಬಳಿಕ ಅದೇ ಮಸೂದೆಯನ್ನು ಅಧ್ಯಾದೇಶವನ್ನಾಗಿ ಮಾಡಿ ಜಾರಿ ಮಾಡುವುದು ಸರಿಯೇ ಎಂದು ಪೀಠದಲ್ಲಿದ್ದ ನ್ಯಾ| ಡಿ.ವೈ. ಚಂದ್ರಚೂಡ್ ಪ್ರಶ್ನಿಸಿದರು. ಅಲ್ಲದೆ ರಾಷ್ಟ್ರಪತಿಗಳು ಒಪ್ಪಿಗೆ ನೀಡದೇ ಹೋದಾಗ ರಾಜ್ಯ ಸರಕಾರಗಳು ಪರ್ಯಾಯ ದಾರಿಯನ್ನು ಹುಡುಕಿಕೊಳ್ಳಬಹುದೇ ಎಂದು ಪ್ರಶ್ನಿಸಿದರಲ್ಲದೇ, ಈ ರೀತಿ ನಡೆದುಕೊಳ್ಳಬಾರದಲ್ಲವೇ ಎಂದು ಅಭಿಪ್ರಾಯಪಟ್ಟರು.
ಕಂಬಳವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಪ್ರಾಣಿ ದಯಾ ಸಂಘಟನೆ ಪೆಟಾ ಪರ ವಕೀಲ ಸಿದ್ಧಾರ್ಥ ಲೂಥಾರ ಅವರು, ಕರ್ನಾಟಕ ಸರಕಾರದ ಮಸೂದೆ ಮತ್ತು ಅಧ್ಯಾದೇಶವು ಒಂದೇ ರೀತಿಯಾಗಿವೆ. ಅಲ್ಲದೆ ಎ ನಾಗರಾಜ ತೀರ್ಪಿನಲ್ಲಿ ಹೇಳಿರುವಂತೆ ಪುರಾತನ ಸಂಸ್ಕೃತಿ ಎಂದು ಪ್ರಾಣಿಗಳಿಗೆ ಹಿಂಸೆ ನೀಡಬಾರದು ಎಂದು ವಾದ ಮಂಡಿಸಿದರು.
ಜತೆಗೆ ಮತ್ತೆ ಕರ್ನಾಟಕದ ಅಧ್ಯಾದೇಶ ಬಗ್ಗೆ ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾ| ಚಂದ್ರಚೂಡ್ ಅವರು, ರಾಜ್ಯ ಸರಕಾರಗಳಿಗೆ ಇಂಥ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಬಿಡಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೇಣುಗೋಪಾಲ್ ಅವರು, ಮಸೂದೆಯಲ್ಲಿ ಕೆಲವೊಂದು ಅಂಶಗಳ ಬಗ್ಗೆ ರಾಷ್ಟ್ರಪತಿಗಳು ಸಂದೇಹ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದರು. ಆದರೆ ರಾಜ್ಯ ಸರಕಾರ ಈ ಅಂಶಗಳನ್ನು ಸರಿಪಡಿಸಿಯೇ ಅಧ್ಯಾದೇಶ ಹೊರಡಿಸಿತು ಎಂದು ಹೇಳಿದರು.
ಈ ವಾದ-ಪ್ರತಿವಾದ ಆಲಿಸಿದ ಅನಂತರ ಕೋರ್ಟ್ ಮುಂದಿನ ವಿಚಾರಣೆಯನ್ನು ನ.20ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.