ಮನುಷ್ಯರ ಬದಲು ಎಮ್ಮೆ ಕಿಡ್ನ್ಯಾಪ್
ಬಿಡುಗಡೆಗೆ ಶೇ.25-ಶೇ.30ರಷ್ಟು ಮೊತ್ತ ಕೊಡಬೇಕು!
Team Udayavani, Jan 1, 2020, 7:45 AM IST
ಭೋಪಾಲ: ಹಣಕ್ಕಾಗಿ ಮಾನವ ರನ್ನು ಅಪಹರಿಸಲಾಗುತ್ತದೆ. ಆದರೆ ಎಮ್ಮೆಗಳನ್ನು ಅದೇ ರೀತಿ ಮಾಡಲಾಗುತ್ತದೆಯೇ? ಇದು ಅಚ್ಚರಿಯಾದರೂ ನಂಬಲೇಬೇಕಾಗಿರುವ ಅಂಶ. ಇಂಥ ವಿಚಿತ್ರ ನಡೆಯುತ್ತಿರುವುದು ಮಧ್ಯಪ್ರದೇಶದ ಮೊರೇನಾ ಜಿಲ್ಲೆ ಯಲ್ಲಿ. ಬಹಳ ಹಿಂದೆ ಇಲ್ಲಿ ಡಕಾಯಿತರ ಗುಂಪುಗಳು ನಡೆಸುತ್ತಿದ್ದ ಕುಕೃತ್ಯ ಬೆಳಕಿಗೆ ಬರುತ್ತಿತ್ತು. ಅವರ ಉಪಟಳ ನಿಂತುಹೋದ ಬಳಿಕ ಮರಳು ಮಾಫಿಯಾದವರು ನಡೆಸು ತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಆಗಾಗ ದೇಶವ್ಯಾಪಿ ಪ್ರಚಾರ ಪಡೆಯುತ್ತದೆ.
ಪ್ರಸಕ್ತ ವರ್ಷ ಅಂದರೆ 2019ನೇ ಸಾಲಿನಲ್ಲಿ ಎಮ್ಮೆಗಳನ್ನು ಅಪಹರಿಸಿ, ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಬೇಕಾದರೆ ಭಾರಿ ಮೊತ್ತದ ಹಣ ಪೀಕಿದ 23 ಪ್ರಕರಣಗಳು ವರದಿಯಾಗಿವೆ. ಸ್ಥಳೀಯವಾಗಿ ಈ ಕುಕೃತ್ಯಕ್ಕೆ “ಪಾನ್‌ಹಾಯ್’ ಎಂದು ಕರೆಯಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಥ ಕೃತ್ಯಗಳನ್ನು ನಡೆಸುವವರು ಅವುಗಳ ಪಾದದ ಚಿಹ್ನೆ ನೆಲದಲ್ಲಿ ಮೂಡದಂತೆ ಪ್ಲಾಸ್ಟಿಕ್ ಶೀಟ್‌ಗಳನ್ನು ಕಟ್ಟಿ ಕರೆದೊಯ್ಯುತ್ತಾರೆ. ಎಮ್ಮೆಯ ಬೆಲೆಯ ಶೇ.25-ಶೇ.30ರಷ್ಟನ್ನು ಬಲ ವಂತವಾಗಿ ವಸೂಲು ಮಾಡಿ, ಬಿಟ್ಟುಬಿಡುತ್ತಾರೆ. ಈ ಬಗ್ಗೆ ಮೊರೇನಾ ಜಿಲ್ಲೆಯ ಹಲವು ಗ್ರಾಮಗಳಿಂದ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಸಿತ್ ಯಾದವ್ ಆಯಾ ಠಾಣಾ ವ್ಯಾಪ್ತಿಯಲ್ಲಿ ಇಂಥ ಪ್ರಕ ರಣಗಳು ಕಂಡು ಬಂದರೆ ಅವುಗಳನ್ನು ಸ್ವೀಕರಿಸಿ, ದಾಖಲಿಸುವಂತೆ ಸೂಚನೆ ನೀಡಿದ್ದಾಗಿ ಹೇಳಿದ್ದಾರೆ. ಕೆಲವೊಂದು ಸಂದರ್ಭ ಗಳಲ್ಲಿ ಎಮ್ಮೆಗಳನ್ನು ಈ ಜಾಲದಿಂದಾಗಿ ಕಳೆದುಕೊಂಡವರು ಮರ್ಯಾದೆಗೆ ಅಂಜಿ ದೂರು ನೀಡಲೂ ಹಿಂಜರಿಯುತ್ತಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.