ಹಿಮಾಚಲದಲ್ಲಿ ಕಮರಿಗೆ ಬಿದ್ದ ಬಸ್: 28 ಸಾವು
Team Udayavani, Jul 21, 2017, 5:45 AM IST
ಹೊಸದಿಲ್ಲಿ: ಹಿಮಾಚಲ ಪ್ರದೇಶದಲ್ಲಿ ಬಸ್‌ವೊಂದು ಹಿಂದುಸ್ಥಾನ್-ಟಿಬೆಟ್ ರಾಷ್ಟ್ರೀಯ ಹೆದ್ದಾರಿಯಲ್ಲಿನ 500 ಅಡಿ ಆಳದ ಕಣಿವೆಗೆ ಬಿದ್ದು, 28 ಪ್ರಯಾಣಿಕರು ಸ್ಥಳದಲ್ಲೇ ಅಸುನೀಗಿದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಇತರೆ 8 ಮಂದಿ ಗಾಯಗೊಂಡಿದ್ದಾರೆ.
ಶಿಮ್ಲಾದಿಂದ 140 ಕಿ.ಮೀ. ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಖಾಸಗಿ ಬಸ್‌ನಲ್ಲಿ 36 ಪ್ರಯಾಣಿಕರು ಸಂಚರಿಸುತ್ತಿದ್ದರು. ಕಿನೌ°ರ್‌ನ ರೆಕಾಂಗ್ ಪಿಯೋದಿಂದ ಸೋಲಾನ್‌ಗೆ ತೆರಳುತ್ತಿದ್ದ ಬಸ್, ಟೈರ್ ಸ್ಫೋಟದಿಂದಾಗಿ ಕಮರಿಗೆ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಡಿದವರ ಕುಟುಂಬಕ್ಕೆ ಸರಕಾರ ಜಿಲ್ಲಾಧಿಕಾರಿಗಳ ಮೂಲಕ ತಾತ್ಕಾಲಿಕವಾಗಿ ಹತ್ತು ಸಾವಿರ ರೂ. ಪರಿಹಾರ ನೀಡಿದೆ.
28 ಮಂದಿ ಮೃತರ ಪೈಕಿ 11 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇವರಲ್ಲಿ 18 ಪುರುಷರು, 9 ಮಹಿಳೆಯರು ಮತ್ತು ಒಂದು ಮಗು ಸೇರಿದೆೆ. 8 ಮಂದಿ ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜತೆಗೆ, ಗಾಯಾಳುಗಳು ಬೇಗನೆ ಗುಣಮುಖರಾಗಲೆಂದು ಹಾರೈಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.