ಅಭ್ಯರ್ಥಿ ಇಲ್ಲಿ ಲೆಕ್ಕಕ್ಕಿಲ್ಲ, ಧರ್ಮ, ಜಾತಿಗೇ ಆದ್ಯತೆ
Team Udayavani, Nov 8, 2017, 6:20 AM IST
ಹೊಸದಿಲ್ಲಿ: “ಅಭ್ಯರ್ಥಿಯನ್ನು ನೋಡಿ ಮತ ಹಾಕಿ’ ಎಂಬ ಮಾತಿದೆ. ಆದರೆ, ಗುಜರಾತ್ ಮತದಾರರು ತಮ್ಮ ಕ್ಷೇತ್ರದಲ್ಲಿ ಕಣಕ್ಕಿಳಿದ ಅಭ್ಯರ್ಥಿ, ಆತನ ವರ್ಚಸ್ಸು, ಗುಣಾವಗುಣಗಳನ್ನು ಪರಿಗಣಿಸುವುದೇ ಇಲ್ಲ. ಬದಲಿಗೆ ಅವರು ನೋಡುವುದೇ ಆತನ ಧರ್ಮ ಅಥವಾ ಜಾತಿಯನ್ನು ಮಾತ್ರ!
ಹೀಗೆಂದು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್Õ(ಎಡಿಆರ್) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮತದಾರರ ಆದ್ಯತೆ ಕುರಿತು 527 ಲೋಕಸಭಾ ಕ್ಷೇತ್ರಗಳಲ್ಲಿನ 2.70 ಲಕ್ಷ ಮತದಾರರನ್ನು ಸಮೀಕ್ಷೆಗೊಳಪಡಿಸಿ ವರದಿ ತಯಾರಿಸಲಾಗಿತ್ತು. ಆ ಪೈಕಿ ಗುಜರಾತ್‌ಗೆ ಸಂಬಂಧಿಸಿದ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಅದರಂತೆ, ಇಲ್ಲಿ ನವರು ಅಭ್ಯರ್ಥಿಯ ಹಿನ್ನೆಲೆ ಏನೇ ಇದ್ದರೂ, ಆತನ ಧರ್ಮ, ಜಾತಿ ನೋಡಿಯೇ ಮತ ಹಾಕುತ್ತಾರೆ. ಈ ಮಾನದಂಡದ ಹೊರತಾಗಿ ಸಿಎಂ ಅಥವಾ ಪಿಎಂ ಅಭ್ಯರ್ಥಿಯೇ ಎಂಬುದನ್ನೂ ನೋಡುತ್ತಾರೆ ಎಂದಿದೆ ವರದಿ. ಇನ್ನು ಮತದಾರರಿಗೆ ಆಮಿಷವೊಡ್ಡುವುದು ಕಾನೂನುಬಾಹಿರ ಎಂದು ಗೊತ್ತಿರುವುದು ಕೇವಲ ಶೇ.29ರಷ್ಟು ಮಂದಿಗೆ ಮಾತ್ರ.
ಹಿಮಾಚಲದಲ್ಲಿ ನಾಳೆ ಮತದಾನ
ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾ ಜಿದ್ದಿನ ಕಣವಾಗಿ ಪರಿವರ್ತಿತವಾಗಿರುವ ಹಿಮಾಚಲ ಪ್ರದೇಶದಲ್ಲಿ ಗುರುವಾರ ಮತ ದಾನ ನಡೆಯಲಿದ್ದು, ಮಂಗಳವಾರ ಪ್ರಚಾರಕ್ಕೆ ತೆರೆಬಿದ್ದಿದೆ. ಇದೇ ವೇಳೆ, ಚುನಾವಣೆಗೆ ಸಿದ್ಧವಾ ಗಿರುವ ಗುಜರಾತ್ ಮತ್ತು ಹಿಮಾಚಲದಲ್ಲಿ ಒಟ್ಟು 1.38 ಕೋಟಿ ರೂ. ನಗದು, 12.86 ಕೋಟಿ ಬೆಲೆ ಬಾಳುವ 6 ಲಕ್ಷ ಲೀಟರ್ ಮದ್ಯ ಮತ್ತು ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಹಿಮಾಚಲದಲ್ಲೇ 1.18 ಕೋಟಿ ನಗದು, 5.19 ರೂ. ಮೌಲ್ಯದ ಮದ್ಯ, 81 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾ ಗಿದೆ. ಗುಜರಾತ್‌ನಲ್ಲಿ 20 ಲಕ್ಷ ನಗದು, 3.08 ಲೀ ಮದ್ಯ, 24 ಕೇಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಗುಜರಾತ್‌ನಲ್ಲಿ ಪ್ರಚಾರ ಆರಂಭಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಯಾಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್ ರದ್ದು: ಸುಪ್ರೀಂ ಕೋರ್ಟ್
ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್ ಸರಕಾರ; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…
Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.