ದಿವ್ಯಾಂಗರು ಇನ್ನು ಸುಲಭವಾಗಿ ಕಾರು ಚಲಾಯಿಸಬಹುದು
Team Udayavani, Feb 5, 2017, 3:45 AM IST
ಕೊಚ್ಚಿ: ಕೇರಳದ ಕೊಚ್ಚಿಯ ಬಿಜು ವರ್ಗೀಸ್ (44) ಎಂಬುವರು ಗಿಯರ್ನಲ್ಲಿಯೇ ಕಾರನ್ನು ನಿಯಂತ್ರಿಸುವಂಥ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ಗಾಲಿಕುರ್ಚಿ ಮೇಲೆ ಕುಳಿತು ಜೀವನ ಸಾಗಿಸುತ್ತಿರುವ ಬಿಜು, ತನ್ನಂಥ ಸಾವಿರಾರು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹೊಸ ಮಾದರಿ ಕಾರು ನಿಯಂತ್ರಿಸುವ ವ್ಯವಸ್ಥೆ ನಿರ್ಮಿಸಿದ್ದಾರೆ.
ಅದನ್ನು ಹೆಚ್ಚು ಮಾರ್ಪಾಡು ಮಾಡದೇ ಕೇವಲ ಗಿಯರ್ಗೆ ಈ ಸಾಧನ ಅಳವಡಿಸಿದರೆ ಸಾಕು. ಬ್ರೇಕ್, ಕ್ಲಚ್, ಆ್ಯಕ್ಸಿಲರೇಟರನ್ನು ಇದು ಒಳಗೊಂಡಿರುತ್ತದೆ. ಯಾವ ಕಾರಿಗಾದರೂ ಈ ವ್ಯವಸ್ಥೆಯನ್ನು ಕೇವಲ 15 ನಿಮಿಷದೊಳಗೆ ಅಳವಡಿಸಬಹುದು. ಅಲ್ಲದೇ ಬೇಡದಿದ್ದಾಗ ತೆಗೆಯಲೂಬಹುದು ಎಂದು ಬಿಜು ಹೇಳಿದ್ದಾರೆ. ಈ ಸಾಧನಕ್ಕೆ ಬಿಜು ಕೇವಲ 15,000ದಿಂದ 30,000 ರೂ. ಹಣ ಪಡೆಯುತ್ತಾರೆ. ಸುಮಾರು 2000 ಅಂಗವಿಕಲರಿಗೆ ಈ ವ್ಯವಸ್ಥೆ ಒದಗಿಸಿಕೊಟ್ಟಿರುವುದಾಗಿ ಬಿಜು ಹೇಳಿದ್ದಾರೆ.
ಪುಣೆ ಹೆದ್ದಾರಿಯಲ್ಲಿ ಈ ಕಾರು ಗಂಟೆಗೆ 170ಕಿಮೀ ಓಡುತ್ತದೆ ಎಂದು ಅವರು ಹೇಳಿದ್ದಾರೆ. ಕೇರಳ ಸರ್ಕಾರ ಆಯೋಜಿಸಿದ್ದ ವ್ಯಾಪಾರ್ 2017 ವಸ್ತು ಪ್ರದರ್ಶನದಲ್ಲಿ ಬಿಜು ಅವರ ಈ ಸಾಧನ ಕೂಡ ಪ್ರದರ್ಶನಗೊಂಡು ಅಪಾರ ಜನ ಮನ್ನಣೆ ಪಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.