ರಾಜೀವ್ ಕುಮಾರ್ ಬಂಧನಕ್ಕೆ ಸುಪ್ರೀಂ ಅನುಮತಿ ಕೇಳಿದ ಸಿಬಿಐ
Team Udayavani, Apr 8, 2019, 6:30 AM IST
ಹೊಸದಿಲ್ಲಿ: ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಹಗರಣದಲ್ಲಿ ಕೋಲ್ಕತ್ತಾ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್‌ರನ್ನು ಬಂಧಿಸಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ಗೆ ಸಿಬಿಐ ಮೊರೆ ಹೋಗಿದೆ.
ಈಗಾಗಲೇ ಸುಪ್ರೀಂಕೋರ್ಟ್ ಬಂಧನಕ್ಕೆ ಮಧ್ಯಂತರ ತಡೆ ನೀಡಿದ್ದು, ಇದನ್ನು ತೆರವುಗೊಳಿಸಬೇಕು ಮತ್ತು ಮೋಸದ ಸ್ಕೀಮ್‌ಗಳಲ್ಲಿ ದೊಡ್ಡ ಮಟ್ಟದ ಜಾಲವಿದ್ದು, ಇದನ್ನು ಬೇಧಿಸಲು ಅವರನ್ನು ಬಂಧಿಸುವುದು ಅನಿವಾರ್ಯವಾಗಿದೆ ಎಂದು ಸಿಬಿಐ ಹೇಳಿದೆ.
ಅಷ್ಟೇ ಅಲ್ಲ, ಈ ಹಿಂದೆ ರಾಜೀವ್ ಕುಮಾರ್‌ರನ್ನು ವಿಚಾರಣೆ ನಡೆಸಲು ಸಿಬಿಐ ಕೋಲ್ಕತ್ತಾಗೆ ಹೋದಾಗ ಸಿಎಂ ಮಮತಾ ಬ್ಯಾನರ್ಜಿ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ ಇಂತಹ ಸನ್ನಿವೇಶ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶವನ್ನೂ ನೀಡುವಂತೆ ಕೋರಿದೆ. ಮೋಸದ ಸ್ಕೀಮ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಕುಮಾರ್ ಮತ್ತು ಇತರ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಈಗಾಗಲೇ ನಡೆಸಿದ ವಿಚಾರಣೆ ವೇಳೆ ಕೋಲ್ಕತ್ತಾ ಪೊಲೀಸರು ಹಾಗೂ ಎಸ್‌ಐಟಿ ಸೂಕ್ತ ಸಹಕಾರ ನೀಡುತ್ತಿಲ್ಲ ಎಂದೂ ಸಿಬಿಐ ಹೇಳಿದೆ. ಸಿಬಿಐ ವಾದ ಕುರಿತು ಸೋಮವಾರ ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೋಯ್ ವಿಚಾರಣೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ
CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!
Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ
Maharashtra: ಕ್ವಿಂಟಲ್ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!
Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.