ಕೈ ಪರ ಪ್ರಚಾರಕ್ಕೆ ಮುಸ್ಲಿಂ ನಾಯಕರ ಸಮಿತಿ


Team Udayavani, Jan 31, 2018, 6:40 AM IST

congress.jpg

ನವದೆಹಲಿ: ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸಲು ಮುಸ್ಲಿಂ ನಾಯಕರನ್ನು ನಿಯೋಜಿಸಲಾಗುತ್ತದೆ. ಈ ಬಗ್ಗೆ ಮಂಗಳವಾರ ನವದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಯಾವ ನಾಯಕರು ಪ್ರಚಾರ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಬಾರದು. ಇದರಿಂದಾಗಿ ಮತಗಳ ಧ್ರುವೀಕರಣ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

“ಪ್ರತಿ ಸ್ಪರ್ಧಿಗಳು ಮತಗಳ ಧ್ರುವೀಕರಣದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಆ ರೀತಿ ಆದ ತಕ್ಷಣ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಪಕ್ಷ ಮತದಾರರನ್ನು ಧ್ರುವೀಕರಣಗೊಳಿಸುವ ಬಗ್ಗೆ ಸಹಾಯ ಮಾಡುತ್ತದೆ’ ಎಂದು ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಅದನ್ನು ತಡೆಯಲೋಸುಗವೇ ಪಕ್ಷದ ವರಿಷ್ಠ ಮಂಡಳಿ ಸಮಿತಿ ರಚಿಸಲಿದೆ ಎಂದು ಅವರು ಹೇಳಿದ್ದಾರೆ.

2015ರಲ್ಲಿ ಬಿಹಾರದಲ್ಲಿ ಪಕ್ಷ ಅನುಸರಿಸಿದ ಮಾದರಿಯನ್ನೇ ಕರ್ನಾಟಕದಲ್ಲೂ ಅನುಸರಿಸಲಿದೆ ಎಂದು ಮತ್ತೂಬ್ಬ ನಾಯಕರು ಹೇಳಿದ್ದಾರೆ. ಆ ವರ್ಷ ಕಾಂಗ್ರೆಸ್‌-ಆರ್‌ಜೆಡಿ ಮೈತ್ರಿ ಕೂಟ 27 ಕ್ಷೇತ್ರಗಳನ್ನು ಗೆದ್ದಿತ್ತು.

ಎಂಐಎಂ ನಾಯಕ ಅಸಾಸುದ್ದೀನ್‌ ಒವೈಸಿ ಅವರ ಜತೆಗೂಡಿದ್ದರಿಂದಲೇ ಮಹಾರಾಷ್ಟ್ರದ ನಾಂದೇಡ್‌ ವಾಘಾÉ ಮುನಿಸಿಪಲ್‌ ಕಾರ್ಪೋರೇಷನ್‌ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.

ವಿಷ ಕುಡಿದು ಸಾಯುವೆ, ಮತ್ತೆಂದೂ ಜೆಡಿಎಸ್‌ ಸೇರಲ್ಲ: ಜಮೀರ್‌
ಕೆ.ಆರ್‌.ಪೇಟೆ: ಜೆಡಿಎಸ್‌ ಪಕ್ಷವನ್ನು ಒಲ್ಲದ ಮನಸ್ಸಿನಿಂದಲೇ ತ್ಯಜಿಸಿದ್ದೇವೆ. ಈಗ ಪಕ್ಷ ಬಿಟ್ಟಾಗಿದೆ ಮತ್ತೆ ಜೆಡಿಎಸ್‌ ಸೇರುವ ಸಂದರ್ಭ ಒದಗಿ ಬಂದರೆ ವಿಷ ಕುಡಿದು ಸಾಯುತ್ತೇನೆಯೇ ಹೊರತು ನನ್ನ ಜೀವನದಲ್ಲಿ ಮತ್ತೆಂದಿಗೂ ಜೆಡಿಎಸ್‌ ಸೇರುವುದಿಲ್ಲ ಎಂದು ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌ ಅಹಮದ್‌ ಹೇಳಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಪುರಸಭಾ ಮೈದಾನದಲ್ಲಿ ತಾಲೂಕು ಚೆಲುವರಾಯಸ್ವಾಮಿ ಮತ್ತು ಜಮೀರ್‌ ಅಹಮದ್‌ ಖಾನ್‌ ಅಭಿಮಾನಿ ಬಳಗ ಆಯೋಜಿಸಿದ್ದ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಪಕ್ಷದ್ರೋಹಿಗಳಲ್ಲ. ಪಕ್ಷದ ಕಾರ್ಯಕರ್ತರಿಗೆ ನಾವು ಧ್ವನಿಯಾಗಿದ್ದರಿಂದ ಜೆಡಿಎಸ್‌ ವರಿಷ್ಠರು ನಮ್ಮನ್ನು ಪಕ್ಷ ವಿರೋಧಿಗಳಂತೆ ಬಿಂಬಿಸಿ ಹೊರಹೋಗುವಂತೆ ಮಾಡಿದರು. ಕುಮಾರಸ್ವಾಮಿ ಅಣತಿ ಮೇರೆಗೆ ನಾವು ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ 60 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಶಕ್ತಿ ಜೆಡಿಎಸ್‌ಗಿದೆ. ಪರಿಸ್ಥಿತಿ ಹೀಗಿರುವುವಾಗ ಜೆಡಿಎಸ್‌ 113 ಸ್ಥಾನ ಗೆದ್ದು ಅಧಿಕಾರಕ್ಕೇರುವುದು ಹೇಗೆ ಸಾಧ್ಯ? ಜೆಡಿಎಸ್‌ ವರಿಷ್ಠರಿಗೆ ಕಿಂಗ್‌ ಮೇಕರ್‌ ಆಗುವ ಕನಸಿದೆ. ಮತದಾರರು ಇದನ್ನು ಅರ್ಥಮಾಡಿಕೊಂಡು ರಾಜ್ಯದಲ್ಲಿ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು. ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಗೆ ಬೆಂಬಲಿಸಬೇಕೆಂದು ಜಮೀರ್‌ ಮನವಿ ಮಾಡಿದರು.

ಮೊದಲು ನಾನೊಬ್ಬ ಹಿಂದೂಸ್ತಾನಿ, ಅನಂತರ ಕನ್ನಡಿಗ, ಆಮೇಲೆ ಮುಸ್ಲಿಂ ಎಂದು ಹೇಳಿದ ಜಮೀರ್‌, ಮುಸ್ಲಿಮರ ಮತಗಳನ್ನು ವಿಭಜಿಸಿಲು ಬಿಜೆಪಿ ಹೈದರಾಬಾದಿನ ಅಸಾದುದ್ದೀನ್‌ ಓವೈಸಿ ಜತೆ ಒಳ ಒಪ್ಪಂದ ಮಾಡಿಕೊಂಡಿದೆ. ಓವೈಸಿ ರಾಜ್ಯಕ್ಕೆ ಕಾಲಿಡದಂತೆ ಇಲ್ಲಿನ ಮುಸ್ಲಿಮರು ಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಪಕ್ಷದ್ರೋಹಿಗಳನ್ನು ಕಾಂಗ್ರೆಸ್‌ಗೆ ಸೇರಿಸ್ಬೇಡಿ: ಎಸ್‌. ಸಚ್ಚಿದಾನಂದ
ಮಂಡ್ಯ: ಪಕ್ಷದ್ರೋಹಿ ಶಾಸಕರು ಕಾಂಗ್ರೆಸ್‌ ಸೇರುವುದಕ್ಕೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ಸದಸ್ಯ ಎಸ್‌.ಸಚ್ಚಿದಾನಂದ ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿ ಕೊತ್ತತ್ತಿ ಹೋಬಳಿ ವ್ಯಾಪ್ತಿಯ ಒಂದೇ ವೃತ್ತದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೆಡಿಎಸ್‌ ಬಂಡಾಯ ಶಾಸಕರು ಕಾಂಗ್ರೆಸ್‌ ಸೇರ್ಪಡೆಗೊಂಡು ಪಕ್ಷದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರ್ಯಕರ್ತರು ಎಂದಿಗೂ ಅವಕಾಶ ನೀಡಬಾರದು. ಪಕ್ಷ ಸಂಘಟನೆಗೆ ಹತ್ತಾರು ವರ್ಷಗಳಿಂದ ದುಡಿದವರಿಗೆ ರಾಜಕೀಯ ಅಧಿಕಾರ, ಅವಕಾಶಗಳು ಸಿಗಬೇಕು ಎನ್ನುವುದು ನಮ್ಮ ಬಯಕೆ ಎಂದು ಹೇಳಿದರು.

ಬಂಡಾಯ ಅಭ್ಯರ್ಥಿಯಾಗುವೆ: ಹೊರಗಿನವರಿಗೆ ಕಾಂಗ್ರೆಸ್‌ ಮಣೆ ಹಾಕಿದರೆ ತಾವು ತಮ್ಮ ಹಿತೈಷಿಗಳೊಂದಿಗೆ ಚರ್ಚಿಸಿ ಬಂಡಾಯವಾಗಿ ಕಣಕ್ಕಿಳಿಯುತ್ತೇನೆ ಎಂಬ ಎಚ್ಚರಿಕೆ ಸಂದೇಶವನ್ನು ಸಚ್ಚಿದಾನಂದ ರವಾನಿಸಿದರು.

ಮಾಜಿ ಶಾಸಕ ಆನಂದ್‌ಸಿಂಗ್‌ ಇಂದು ಕಾಂಗ್ರೆಸ್‌ಗೆ
ಹೊಸಪೇಟೆ:  ವಿಜಯನಗರ ಕ್ಷೇತ್ರದ ಮಾಜಿ ಶಾಸಕ ಆನಂದ್‌ಸಿಂಗ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರುವುದು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್‌ ಹಾಗೂ ಇತರರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜ.31ರಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಬಿಜೆಪಿಯಲ್ಲಿನ ಕೆಲ ಬೆಳವಣಿಗೆಗೆಗಳಿಂದ ಆನಂದ್‌ಸಿಂಗ್‌ ಅಸಮಾಧಾನಗೊಂಡಿದ್ದರು. ಪಕ್ಷದ ಸ್ಥಳೀಯ ಘಟಕದಲ್ಲಿ ನಡೆದ ಕೆಲ ಚಟುವಟಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆ ನಡೆದ ಸಂದರ್ಭದಲ್ಲೂ ಆನಂದ ಸಿಂಗ್‌ ಅದರಲ್ಲಿ ಪಾಲ್ಗೊಂಡಿರಲಿಲ್ಲ. ಈ ಸಂದರ್ಭದಲ್ಲೇ ಸಿಂಗ್‌ ಬಿಜೆಪಿ ತೊರೆಯಲಿದ್ದಾರೆಂದು ಸುದ್ದಿ ಹರಡಿತ್ತು. ಈ ಮಧ್ಯೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರೊಂದಿಗೆ ಆನಂದ್‌ ಸಿಂಗ್‌ ಹಾಗೂ ಕೂಡ್ಲಿಗಿ ಶಾಸಕ ನಾಗೇಂದ್ರ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ನಂತರ ಆನಂದ ಸಿಂಗ್‌ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿತ್ತು.

ಮಾ.1 ರಿಂದ ರಾಜ್ಯ ನಾಯಕರ ಒಗ್ಗಟ್ಟಿನ ಯಾತ್ರೆ: ವೇಣುಗೋಪಾಲ್‌
ಬೆಂಗಳೂರು:
ಮಾರ್ಚ್‌ 1 ರಿಂದ ರಾಜ್ಯ ಕಾಂಗ್ರೆಸ್‌ ನಾಯಕರು ಒಟ್ಟಾಗಿ ರಾಜ್ಯ ಚುನಾವಣಾ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ತಿಂಗಳು ಪೂರ್ಣ ಬೂತ್‌ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಯಲಿದ್ದು, ಮಾರ್ಚ್‌ 1 ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ನಾಯಕರೂ ಒಂದೇ ವಾಹನದಲ್ಲಿ ಪ್ರವಾಸ ಆರಂಭಿಸಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿಯವರು ಕೋಮುವಾದ, ಹಸು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾವು ಮುಂದಿನ ಐದು ವರ್ಷ ಕರ್ನಾಟಕದ ಭವಿಷ್ಯ ಹೇಗಿರಬೇಕು ಎನ್ನುವ ಅಭಿವೃದ್ಧಿ ಪರ ಯೋಚನೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಮಹದಾಯಿ ವಿಷಯದಲ್ಲಿ ಬಿಜೆಪಿ ನಾಯಕರು ಬರೀ ನಾಟಕವಾಡುತ್ತಿದ್ದಾರೆ. ಗೋವಾ ಕಾಂಗ್ರೆಸ್‌ನವರನ್ನು ಒಪ್ಪಿಸುವ ಮೊದಲು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಾತುಕತೆಗೆ ಒಪ್ಪಿಗೆ ಸೂಚಿಸಲಿ. ಅದನ್ನು ಬಿಟ್ಟು ಕಾಂಗ್ರೆಸ್‌ ನಾಯಕರನ್ನು ಒಪ್ಪಿಸಿ ಎನ್ನುವುದು ಬರೀ ನಾಟಕ ಎಂದು ಆರೋಪಿಸಿದರು.

ಸತೀಶ್‌ ಜಾರಕಿಹೊಳಿ ಗೊಂದಲವಿಲ್ಲ: ಎಐಸಿಸಿ ಕಾರ್ಯದರ್ಶಿ ಸತೀಶ್‌ ಜಾರಕಿಹೊಳಿ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿ. ಅವರ ನಡೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ನಾನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ಎಲ್ಲ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅದೇ ರೀತಿ ಸತೀಶ್‌ ಜಾರಕಿಹೊಳಿಯನ್ನೂ ಮಾತನಾಡಿಸಿದ್ದೇನೆ. ಮುಖ್ಯಮಂತ್ರಿಯೊಂದಿಗೆ ಅವರನ್ನು ಭೇಟಿ ಮಾಡಿದರಲ್ಲೇನೂ ವಿಶೇಷವಿಲ್ಲ ಎಂದರು.

ಚುನಾವಣಾ ಪ್ರಚಾರಕ್ಕೆ ಅಕ್ಕ ಪಕ್ಕದ ರಾಜ್ಯಗಳ ಸಿನಿ ತಾರೆಯರನ್ನು ಕರೆ ತರುವ ಬಗ್ಗೆ ಚಿಂತನೆ ನಡೆದಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯೇ ನಮಗೆ ದೊಡ್ಡ ಸ್ಟಾರ್‌ ಕ್ಯಾಂಪೇನರ್‌. ಅವರ ಸಾಮರ್ಥ್ಯ ಏನೆಂದು ಗುಜರಾತ್‌ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಹೇಳಿದರು.

ಟಾಪ್ ನ್ಯೂಸ್

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

saavu

New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.