ಸಂವಿಧಾನವೇ ದಾರಿದೀಪ: ಪ್ರಧಾನಿ ಮೋದಿ
ಕೋವಿಡ್ ತಡೆಯುವಲ್ಲಿ ಭಾರತ ಯಶಸ್ವಿ
Team Udayavani, Jun 28, 2020, 6:10 AM IST
ಹೊಸದಿಲ್ಲಿ: ಸಂವಿಧಾನವೇ ನಮಗೆ ದಾರಿದೀಪ. ಕೇಂದ್ರ ಸರಕಾರವು ನಂಬಿಕೆ, ಲಿಂಗ, ಜಾತಿ, ಮತ ಅಥವಾ ಭಾಷೆಗಳ ನಡುವೆ ತಾರತಮ್ಯ ಮಾಡುವುದಿಲ್ಲ. 130 ಕೋಟಿ ಭಾರತೀಯರನ್ನು ಸಶಕ್ತೀಕರಣ ಗೊಳಿಸುವ ಮಹತ್ತರ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ಕೇರಳದ ಪತ್ತನಂತಿಟ್ಟ ಚರ್ಚ್‌ನ ರೆವರೆಂಡ್ ಡಾ| ಮಾರ್ ಥೋಮಾಅವರ 90ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪ್ರಧಾನಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿದರು. ನಾವು ಯಾವುದೇ ನಿರ್ಧಾರಗಳನ್ನು ದಿಲ್ಲಿಯ ಆರಾಮದಾಯಕ ಸರಕಾರಿ ಕಚೇರಿಗಳಿಂದ ತೆಗೆದುಕೊಳ್ಳುವುದಿಲ್ಲ. ಸ್ಥಳೀಯ ಜನರ ಸಲಹೆಗಳನ್ನು ಹೆಚ್ಚು ಪರಿಗಣಿಸುತ್ತೇವೆ ಎಂದರು.
ಕೋವಿಡ್ ತಡೆ ಯಶಸ್ವಿ
ಆರಂಭದಲ್ಲಿ ಕೋವಿಡ್ ದಾಳಿ ನಡೆಸಿದಾಗ ಭಾರತ ಅಪಾಯಕ್ಕೆ ಸಿಲುಕಲಿದೆ ಎಂದೇ ಅನೇಕರು ಭಾವಿ ಸಿದ್ದರು. ಆದರೆ ಇಂದು ಕೋವಿಡ್ ನಿಯಂತ್ರಣದಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಉತ್ತಮ ಸಾಧನೆಗೈದಿದೆ. ಲಾಕ್‌ಡೌನ್ ಜಾರಿ, ಸರಕಾರವು ಸಮ ಯೋಚಿತವಾಗಿ ಕೈಗೊಂಡ ಕ್ರಮ ಗಳಿಂದಾಗಿ ಮತ್ತು ಜನರ ಪರಿಶ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಎಚ್ಚರ ವಹಿಸೋಣ
ಪ್ರಸ್ತುತ ದೇಶದಲ್ಲಿ ಚೇತರಿಸಿಕೊಳ್ಳು ವವರ ಪ್ರಮಾಣ ಅಧಿಕವಿದೆ. ಆದರೂ ನಾವು ಇನ್ನಷ್ಟು ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು, ಜನದಟ್ಟಣೆ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಬಡತನ ನಿರ್ಮೂಲನೆ, ಮಹಿಳೆ ಯರ ಸಶಕ್ತೀಕರಣಕ್ಕೆ ಬಹುವಾಗಿ ಶ್ರಮಿಸಿರುವ ರೆವರೆಂಡ್ ಡಾ| ಮಾರ್ ಥೋಮಾ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಪ್ರಧಾನಿ ಹಾರೈಸಿದರು. ವರ್ಚುವಲ್ ಸಭೆಯಲ್ಲಿ ವಿಶ್ವದ ಹಲವು ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.