![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Aug 16, 2023, 7:06 AM IST
ಹೊಸದಿಲ್ಲಿ: “ಮೇಕ್ ಇನ್ ಇಂಡಿಯಾ” ಯೋಜನೆಯಡಿ ಕಾನ್ಪುರ ದಲ್ಲಿ ರುವ ಸರಕಾರಿ ಸ್ವಾಮ್ಯದ ಅಡ್ವಾನ್ಸ್ ವೆಪನ್ಸ್ ಆ್ಯಂಡ್ ಈಕ್ವಿಪ್‌ಮೆಂಟ್ ಇಂಡಿಯಾ ಲಿ.(ಎಡಬ್ಲ್ಯುಇಐಎಲ್) ದೇಶದ ಮೊದಲ ದೂರ ವ್ಯಾಪ್ತಿಯ ರಿವಾಲ್ವರ್ “ಪ್ರಬಲ್’ ಅನ್ನು ಸಿದ್ಧಪಡಿ ಸಿದೆ. ಅದನ್ನು ಆ. 18ರಂದು ಲೋಕಾರ್ಪಣೆಗೊಳಿಸಲಾಗುತ್ತದೆ.
50 ಮೀ. ವ್ಯಾಪ್ತಿ
ಕಡಿಮೆ ತೂಕದ 0.32 ಬೋರ್ ರಿವಾಲ್ವರ್ ಆಗಿರುವ “ಪ್ರಬಲ್’ನಿಂದ ಹಾರಿಸಿದ ಗುಂಡು 50 ಮೀಟರ್‌ವರೆಗಿನ ಗುರಿಯನ್ನು ನಿಖರವಾಗಿ ತಲುಪುತ್ತದೆ. ಜತೆಗೆ ಭಾರತದಲ್ಲಿ ತಯಾ ರಿಸಲಾದ ಸೈಡ್ ಸ್ವಿಂಗ್ ಸಿಲಿಂಡರ್ ಹೊಂದಿ ರುವ ಮೊದಲ ರಿವಾಲ್ವರ್ ಇದು.
ಸೈಡ್ ಸ್ವಿಂಗ್ ಸಿಲಿಂಡರ್ ಅಳವಡಿಕೆ
ಈ ಹಿಂದಿನ ಆವೃತ್ತಿಯ ರಿವಾಲ್ವರ್‌ಗಳಲ್ಲಿ ಕಾಟ್ರಿìಜ್‌ಗಳನ್ನು ಸೇರಿಸಲು ರಿವಾಲ್ವರ್‌ನ ಫೈರ್‌ಆರ್ಮನ್ನು ಮಡಚಬೇಕಿತ್ತು. ಪ್ರಬಲ್‌ನಲ್ಲಿ ಸೈಡ್ ಸ್ವಿಂಗ್ ಸಿಲಿಂಡರ್ ಅಳವಡಿಸಲಾಗಿದೆ ಎಂದು ಎಡಬ್ಲ್ಯುಇಐಎಲ್ ನಿರ್ದೇಶಕ ಎ.ಕೆ. ಮೌರ್ಯ ಹೇಳಿದ್ದಾರೆ. “ಪ್ರಬಲ್’ ಭಾರತದಲ್ಲಿ ತಯಾರಾದ ರಿವಾಲ್ವರ್‌ಗಳ ಪೈಕಿ ಅತೀ ದೀರ್ಘ ವ್ಯಾಪ್ತಿಯದಾಗಿದೆ. ದೇಶದಲ್ಲಿ ಈಗ 20 ಮೀ. ವರೆಗಿನ ವ್ಯಾಪ್ತಿಯ ರಿವಾಲ್ವರ್‌ಗಳು ಮಾತ್ರ ಲಭ್ಯವಿವೆ.
700 ಗ್ರಾಂ ತೂಕ
“ಪ್ರಬಲ್’ ಕಡಿಮೆ ತೂಕ ಹೊಂದಿದ್ದು, ಕಾಟ್ರಿಜ್ ಹೊರತುಪಡಿಸಿ ಇದರ ತೂಕ 700 ಗ್ರಾಂ ಮಾತ್ರ. ಇದರ ಬ್ಯಾರೆಲ್ ಉದ್ದ 76 ಮಿ.ಮೀ. ಹಾಗೂ ರಿವಾಲ್ವರ್‌ನ ಒಟ್ಟು ಉದ್ದ 177.6 ಮಿ.ಮೀ. ಮಹಿಳೆಯರು ಕೂಡ ಇದನ್ನು ಸುಲಭವಾಗಿ ತಮ್ಮ ಬ್ಯಾಗ್‌ಗಳಲ್ಲಿ ಕೊಂಡೊಯ್ಯಬಹುದಾಗಿದೆ.
You seem to have an Ad Blocker on.
To continue reading, please turn it off or whitelist Udayavani.