ಶಾಂತಿ ಕಾಪಾಡುವಂತೆ ಮೃತನ ತಂದೆ ಮನವಿ
Team Udayavani, Mar 31, 2018, 7:00 AM IST
ಅಸಾನ್‌ಸೋಲ್: ಪಶ್ಚಿಮ ಬಂಗಾಲದಲ್ಲಿ ರಾಮನವಮಿ ವೇಳೆ ನಡೆದ ಗಲಭೆಯಲ್ಲಿ ಪುತ್ರನನ್ನು ಕಳೆದುಕೊಂಡಿರುವ ಅಸಾನ್‌ಸೋಲ್‌ನ ಇಮಾಮ್ ಇಮªತುಲ್ಲಾ ರಶೀದ್ ಜನರು ಶಾಂತರಾಗಿರುವಂತೆ ಬೇಡಿಕೊಂಡಿದ್ದಾರೆ. ಈ ಹಿಂಸೆಯನ್ನು ಇಲ್ಲಿಗೇ ನಿಲ್ಲಿಸಿ. ನನ್ನ ಮಗನನ್ನು ನಾನು ಕಳೆದುಕೊಂಡರೂ, ಪೊಲೀಸರಿಗೆ ದೂರು ನೀಡಿಲ್ಲ. ಅದನ್ನು ಒಂದು ದೊಡ್ಡ ವಿಷಯವನ್ನಾಗಿ ಮಾಡಬೇಡಿ. ನನ್ನ ಮೇಲೆ ನಿಮಗೆ ಪ್ರೀತಿಯಿದ್ದರೆ ಶಾಂತಿಯಿಂದಿರಿ ಎಂದು ಮನವಿ ಮಾಡಿದ್ದಾರೆ.
ಗಲಭೆಯಲ್ಲಿ 16 ವರ್ಷದ ಪುತ್ರ ಹಫೀಜ್ ಸಬತುಲ್ಲಾ ಮಾರಣಾಂತಿಕವಾಗಿ ಗಾಯಗೊಂಡಿದ್ದ. ಬುಧವಾರ ಸಾವನ್ನ ಪ್ಪಿದ್ದ. ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ. ಹಿಂಸಾಚಾರ ವರದಿಗೆ ಸಮಿತಿ: ರಾಣಿಗಂಜ್‌ನಲ್ಲಿ ರಾಮನವಮಿ ಆಚರಣೆ ಹಿಂಸಾಚಾರಕ್ಕೆ ತಿರುಗಿದ ಘಟನೆ ಕುರಿತು ವರದಿ ನೀಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳವಾರ ನಾಲ್ವರು ಸದಸ್ಯರ ಸಮಿತಿ ರಚಿಸಿದ್ದಾರೆ. ಇದರ ಸದಸ್ಯರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಮಿತ್ ಶಾಗೆ ವರದಿ ನೀಡಲಿದ್ದಾರೆ. ಈ ಸಮಿತಿಯಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಮ್ ಮಾಥುರ್, ವಕ್ತಾರ ಶಹನವಾಜ್ ಹುಸೇನ್, ಸಂಸದರಾದ ರೂಪಾ ಗಂಗೂಲಿ ಮತ್ತು ವಿ.ಡಿ. ರಾಮ್ ಇದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ಇಂಥ ಘಟನೆಗಳು ಖಂಡನೀಯ. ಇದರಿಂದ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.