ದೇಶದ ರಕ್ಷಣಾ ಸನ್ನದ್ಧತೆಗೆ 7 ಹೊಸ ಉತ್ಪಾದನಾ ಕಂಪನಿಗಳ ಸಾಥ್
Team Udayavani, Oct 15, 2021, 6:41 PM IST
ನವದೆಹಲಿ:ದೇಶದ ರಕ್ಷಣಾ ಸನ್ನದ್ಧತೆಗಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳು ನಿಕಟವಾಗಿ ಕೆಲಸ ಮಾಡುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಏಳು ಹೊಸ ರಕ್ಷಣಾ ಕಂಪನಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.
“ಉದಾರೀಕರಣ ಮತ್ತು ಮಾರುಕಟ್ಟೆ ಸುಧಾರಣೆಗಳ ನಂತರ, ಖಾಸಗಿ ವಲಯವು ದೇಶದ ರಕ್ಷಣಾ ಸನ್ನದ್ಧತೆಗಾಗಿ ಸಾರ್ವಜನಿಕ ವಲಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಇಂದು ರಕ್ಷಣಾ ಉಪಕರಣಗಳ ಉತ್ಪಾದನೆಯನ್ನು ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಮನ್ವಯದ ಭಾಗವಾಗಿ ನೋಡಲಾಗುತ್ತಿದೆ” ಎಂದು ರಾಜನಾಥ್ ಸಿಂಗ್ ಹೇಳಿದರು.
ಒರ್ಡ್ ನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ನ ಕಾರ್ಯವೈಖರಿಯನ್ನು ಕಳೆದ ಎರಡು ದಶಕಗಳಲ್ಲಿ ವಿವಿಧ ಉನ್ನತ ಮಟ್ಟದ ಸಮಿತಿಗಳು ಅಧ್ಯಯನ ಮಾಡಿವೆ. ಇದರ ಉದ್ದೇಶವು ಸಶಸ್ತ್ರ ರಕ್ಷಣಾ ಪಡೆಗಳ ಕಾರ್ಯವೈಖರಿಗಳನ್ನು ಸುಧಾರಿಸುವುದು ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವುದು ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ, ರಕ್ಷಣಾ ಉದ್ಯಮವು ಸ್ವಾವಲಂಬನೆಯತ್ತ ಸಾಗಿದ್ದಲ್ಲದೆ, ಈ ವರೆಗೆ ಸಾಧಿಸಲಾಗದ ಮಟ್ಟದಲ್ಲಿ ರಕ್ಷಣಾ ಸಾಮಗ್ರಿಗಳ ರಫ್ತುನ್ನು ಮಾಡುವ ಮೂಲಕ ಇನ್ನಷ್ಟು ಎತ್ತರಕ್ಕೆ ಏರಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು.
ಇದನ್ನೂ ಓದಿ:- ಮಾನಸಿಕ ರೋಗ ವಾಸಿಯಾಗದ ಕಾಯಿಲೆ ಅಲ್ಲ
“ಇಂದು ನಮ್ಮ ದೇಶವು ತನ್ನ ಸಂಪೂರ್ಣ ಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ವಿಶ್ವದ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಹೊರ ಹೊಮ್ಮಲಿದೆ” ಎಂದು ರಕ್ಷಣಾ ಸಚಿವರು ತಿಳಿಸಿದರು. 2014ರಿಂದಲೂ, ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆಯನ್ನು ಉತ್ತೇಜಿಸಲು ರಫ್ತು ಮತ್ತು ವಿದೇಶಿ ನೇರ ಹೂಡಿಕೆಗೆ ಅನುಕೂಲಕರ ವ್ಯವಸ್ಥೆಯನ್ನು ಸೃಷ್ಟಿಸಲು ಕೇಂದ್ರ ಸರಕಾರವು ರಕ್ಷಣಾ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದೆ ಎಂದು ತಿಳಿಸಿದರು.
ಒರ್ಡ್ ನೆನ್ಸ್ ಫ್ಯಾಕ್ಟರಿ ಬೋರ್ಡ್ ನ ಪುನರ್ ರಚನೆ ಮಾಡಿ ಏಳು ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸುವುದರಿಂದ ಆ ಕಂಪನಿಗಳಿಗೆ ಸ್ವಾಯತ್ತತೆ ನೀಡುವುದರ ಜೊತೆಗೆ, ಹೊಸ ಕಂಪನಿಗಳ ಅಡಿಯಲ್ಲಿ 41 ಕಾರ್ಖಾನೆಗಳ ಕಾರ್ಯನಿರ್ವಹಣೆಯಲ್ಲಿ ಜವಾಬ್ದಾರಿ ಮತ್ತು ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಶಸ್ತ್ರಾಸ್ತ್ರ ಕಾರ್ಖಾನೆಗಳ ವಾಣಿಜ್ಯೀಕರಣದ ಭಾಗವಾಗಿ, ಕೇಂದ್ರ ಸರಕಾರವು ಏಳು ಹೊಸ ಕಂಪನಿಗಳನ್ನು ಆರಂಭಿಸಿತ್ತು. ಸರಕಾರವು ಒರ್ಡ್ ನೆನ್ಸ್ ಫ್ಯಾಕ್ಟರಿ ಬೋರ್ಡನ್ನು ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಪರಿವರ್ತಿಸುತ್ತಿದೆ. ಈ ಏಳು ಹೊಸ ರಕ್ಷಣಾ ಕಂಪನಿಗಳು ವಾಯುಸೇನೆ, ಭೂ ಸೇನೆ,ನೌಕಾ ಪಡೆಗಳು ಮತ್ತು ಅರೆಸೇನಾ ಪಡೆಗಳಿಂದ 65,000 ಕೋಟಿ ಮೌಲ್ಯದ 66 ಸಾಂಸ್ಥಿಕ ಒಪ್ಪಂದಗಳನ್ನು ಮಾಡಿಕೊಂಡಿವೆ.
ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್, ಅವನಿ ಆರ್ಮರ್ಡ್ ವೆಹಿಕಲ್ಸ್, ಮುನಿಷನ್ಸ್ ಇಂಡಿಯಾ ಲಿಮಿಟೆಡ್, ಇಂಡಿಯಾ ಆಪ್ಟೆಲ್ ಲಿಮಿಟೆಡ್, ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್ ಇವು ಉದ್ಘಾಟಣೆಗೊಂಡ ಏಳು ಹೊಸ ಕಂಪನಿಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.