ದಂತ ವೈದ್ಯರು ಬೇರೆ ರೋಗಕ್ಕೂ ಔಷಧ ಕೊಡಬಹುದು!
ಬಿಡಿಎಸ್‌ಗೆ ಬ್ರಿಡ್ಜ್ ಕೋರ್ಸ್ ಪ್ರಸ್ತಾವಿಸಿದ ನೀತಿ ಆಯೋಗ ಐಎಂಎ ಆಕ್ಷೇಪ
Team Udayavani, Apr 22, 2019, 6:00 AM IST
ಹೊಸದಿಲ್ಲಿ: ದೇಶದಲ್ಲಿನ ವೈದ್ಯರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನೀತಿ ಆಯೋಗ ಮಹತ್ವದ ಕ್ರಮವೊಂದನ್ನು ಪ್ರಸ್ತಾವಿಸಿದೆ. ಈಗಾಗಲೇ ದಂತ ವೈದ್ಯರಾಗಿರುವವರು ಒಂದು ಪ್ರತ್ಯೇಕ ಕೋರ್ಸ್ ಮಾಡಿ ಎಂಬಿಬಿಎಸ್‌ಗೆ ಸಮಾನ ಅರ್ಹತೆ ಪಡೆಯಬಹುದಾಗಿದ್ದು, ಇದರಿಂದಾಗಿ ಅವರು ಸಾಮಾನ್ಯ ವೈದ್ಯರಾಗಿಯೂ ಕೆಲಸ ಮಾಡಬಹುದಾಗಿದೆ. ಸಾಮಾನ್ಯವಾಗಿ ಎಂಬಿಬಿಎಸ್ ಮತ್ತು ಬಿಡಿಎಸ್ ವ್ಯಾಸಂಗ ಮಾಡುವವರಿಗೆ ಮೊದಲ 3 ವರ್ಷಗಳಲ್ಲಿ ಒಂದೇ ರೀತಿಯ ಪಠ್ಯಕ್ರಮ ಇರುತ್ತದೆ. ಹೀಗಾಗಿ ಬ್ರಿಡ್ಜ್ ಕೋರ್ಸ್ ರೂಪಿಸುವುದು ಸುಲಭ ಎಂದು ನೀತಿ ಆಯೋಗ ಹೇಳಿದೆ.
ಈ ಸಂಬಂಧ ಎ. 9ರಂದು ಆಯೋಗ ಪ್ರಸ್ತಾವ ಮಾಡಿದ್ದು, ಕೇಂದ್ರ ಗೃಹ ಸಚಿವಾಲಯವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಭಾರತೀಯ ದಂತ ವೈದ್ಯಕೀಯ ಸಮಿತಿ ಮತ್ತು ವೈದ್ಯಕೀಯ ಸಮಿತಿ ಕೂಡ ಈ ಬಗ್ಗೆ ಪರಿಶೀಲನೆ ನಡೆಸಿದ್ದು ಸಮ್ಮತಿ ನೀಡಿದೆ. ಆದರೆ ಇದಕ್ಕೆ ಭಾರತೀಯ ವೈದ್ಯರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ವರ್ಷ ಆಯುಷ್ ವೈದ್ಯರಿಗೆ ಇದೇ ರೀತಿಯ ಬ್ರಿಡ್ಜ್ ಕೋರ್ಸ್ ಅನ್ನು ಪ್ರಸ್ತಾವ ಮಾಡಲಾಗಿತ್ತು. ಇದಕ್ಕೆ ವೈದ್ಯರ ಸಂಘದ ಆಕ್ಷೇಪದಿಂದಾಗಿ ಆಗ ದಂತ ವೈದ್ಯಕೀಯ ಬ್ರಿಡ್ಜ್ ಕೋರ್ಸ್ ಪ್ರಸ್ತಾವವನ್ನು ಕೈಬಿಡಲಾಗಿತ್ತು.
2016ರಿಂದಲೂ ದೇಶದ ದಂತ ವೈದ್ಯರು ಈ ಬಗ್ಗೆ ಮನವಿ ಸಲ್ಲಿಸುತ್ತಿದ್ದಾರೆ. ಈಗ ವೈದ್ಯರ ಕೊರತೆಯೂ ಇರುವುದರಿಂದ ನೀತಿ ಆಯೋಗ ಶಿಫಾರಸು ಮಾಡಿದೆ. ಆರೋಗ್ಯ ಸಚಿವಾಲಯ ಸಮ್ಮತಿ ನೀಡಿದ ಬಳಿಕ ಇದು ಅಂತಿಮಗೊಳ್ಳಲಿದೆ. ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
3 ವರ್ಷಗಳ ಕೋರ್ಸ್
ಈ ಪ್ರಸ್ತಾವಕ್ಕೆ ಆರೋಗ್ಯ ಇಲಾಖೆ ಸಮ್ಮತಿಸಿ ದರೆ 3 ವರ್ಷಗಳ ಬ್ರಿಡ್ಜ್ ಕೋರ್ಸ್ ಅನ್ನು ಪರಿ ಚಯಿಸ ಲಾಗುತ್ತದೆ. ಇದರಿಂದ ಈಗಾಗಲೇ ಬಿಡಿಎಸ್ ಓದಿದವರು ಮೂರು ವರ್ಷಗಳ ಬ್ರಿಡ್ಜ್ ಕೋರ್ಸ್ ಮಾಡಿ ಸಾಮಾನ್ಯ ವೈದ್ಯರಂತೆ ಕಾರ್ಯನಿರ್ವಹಿಸಬಹುದು. ಪ್ರವೇಶ ಪರೀಕ್ಷೆ ಅಥವಾ ಬಿಡಿಎಸ್‌ನಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಪ್ರವೇಶಾತಿ ಮಾಡಿ ಕೊಳ್ಳಲಾಗುತ್ತದೆ. ಶೇ. 50ರಷ್ಟು ಬಿಡಿಎಸ್ ಅಂಕ ಮತ್ತು ಶೇ. 50ರಷ್ಟು ಪ್ರವೇಶ ಪರೀಕ್ಷೆ ಅಂಕ ಗಳನ್ನು ಪರಿ ಗಣಿಸ ಲಾಗುತ್ತದೆ. ಎಂಬಿಬಿಎಸ್ ಕೋರ್ಸ್‌ಗೆ ಎಂಸಿಐ ಶಿಫಾರಸು ಮಾಡಿದ ಪಠ್ಯಕ್ರಮ ವನ್ನೇ ಈ ಕೋರ್ಸ್‌ಗೆ ಅಳವಡಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.