ಪಶ್ಚಿಮ ಬಂಗಾಳ: ಮೃತ ಮರಿಯನ್ನು ಹೊತ್ತು ಸುಮಾರು 7 ಕಿ.ಮೀ. ದೂರ ನಡೆದ ತಾಯಿ ಆನೆ
Team Udayavani, May 30, 2022, 8:10 PM IST
ಕೋಲ್ಕತ: ಎಲ್ಲಕ್ಕಿಂತ ಶ್ರೇಷ್ಠ ಪ್ರೀತಿ ತಾಯಿಯ ಪ್ರೀತಿ ಎನ್ನುವ ಮಾತಿದೆ. ಅದೇ ರೀತಿ ಮಗುವಿನ ಬಗ್ಗೆ ಅಗಾಧ ಪ್ರೀತಿ ಹೊತ್ತಿದ್ದ ತಾಯಿ ಆನೆಯೊಂದು ತನ್ನ ಕರುವಿನ ಮೃತದೇಹವನ್ನು ಕಿಲೋ ಮೀಟರ್‌ಗಟ್ಟಲೆ ದೂರ ಹೊತ್ತು ನಡೆದಿರುವ ಭಾವನಾತ್ಮಕ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಡೋರ್ಸ್ ಪ್ರದೇಶದ ಚುನಾಬಟಿ ಚಹಾ ಗಾರ್ಡೆನ್‌ನ ಬಳಿ ಇತ್ತೀಚೆಗೆ ಆನೆಮರಿ ಸಾವನ್ನಪ್ಪಿತ್ತು. ಆ ಮರಿಯನ್ನು ತನ್ನ ಸೊಂಡಿಲಲ್ಲಿ ಎತ್ತಿಕೊಂಡ ತಾಯಿ ಆನೆ, ತನ್ನ ಹಿಂಡಿನೊಂದಿಗೆ ನಡೆಯುತ್ತಾ ಸಾಗಿದೆ.
ಚುನಾಬಟಿ ಗಾರ್ಡೆನ್‌ನಿಂದ ಹೊರಟ ಆನೆ ಹಿಂಡು ಅಂಬಾರಿ ಚಹಾ ಗಾರ್ಡೆನ್, ಡಿಯಾನಾ ಚಹಾ ಗಾರ್ಡೆನ್, ನ್ಯೂಡೋರ್ಸ್ ಚಹಾ ಗಾರ್ಡೆನ್ ದಾಟಿ ಸಾಗಿದೆ. ರೆಡ್‌ಬ್ಯಾಂಕ್ ಚಹಾ ಗಾರ್ಡೆನ್ ಬಳಿಯ ಪೊದೆಯೊಂದರಲ್ಲಿ ತಾಯಿ ಆನೆಯು ತನ್ನ ಕರುವಿನ ಶವವನ್ನು ಇರಿಸಿದೆ.
ಸುಮಾರು 30-35 ಆನೆಗಳಿದ್ದ ಹಿಂಡು ಮೃತ ಕರುವಿನ ಶವದೊಂದಿಗೆ ಸುಮಾರು 7 ಕಿ.ಮೀ. ದೂರ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ರೀತಿ ಸಾಗುತ್ತಿದ್ದ ಆನೆ ಹಿಂಡನ್ನು ನೋಡಿದ ಸ್ಥಳೀಯರು ಗಾಬರಿಯಿಂದ ಮನೆಯೊಳಗೆ ಸೇರಿಕೊಂಡಿದ್ದಾರೆ.
#WATCH | WB: A mother elephant seen carrying carcass of her dead calf in Ambari Tea Estate, Jalpaiguri. A team of Binnaguri wildlife reached there to retrieve the carcass but elephant walked away to Redbank Tea Estate. Cause of death yet to be ascertained.
(Source: Unverified) pic.twitter.com/cPFSWtRDGk
— ANI (@ANI) May 27, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.