ರೈತರ ಉಪವಾಸ: ಮಾತುಕತೆಗೆ ಕರೆದ ಕೇಂದ್ರ
Team Udayavani, Dec 14, 2020, 8:50 PM IST
ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಸೋಮವಾರ 33 ರೈತ ಸಂಘಟನೆಗಳ ನಾಯಕರು ಉಪವಾಸ ಸತ್ಯಾಗ್ರಹ ನಡೆಸಿದರು. ಮೂರು ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು ಎಂಬುದು ರೈತರ ಪಟ್ಟು. ಆದರೆ ಕಾಯ್ದೆಗಳಿಗೆ ಕೆಲವು ರೈತ ಸಂಘಟನೆಗಳು ಬೆಂಬಲ ನೀಡಿದ್ದು, ಪ್ರತಿಭಟನನಿರತ ರೈತ ಸಂಘಟನೆಗಳೊಂದಿಗೆ ಮತ್ತೂಂದು ಸುತ್ತಿನ ಮಾತುಕತೆಗೆ ಸಿದ್ಧ ಎಂದು ಕೇಂದ್ರ ಸರಕಾರ ಹೇಳಿದೆ.
ಸೋಮವಾರ ಕೇಂದ್ರ ಸರಕಾರದ ಜತೆ ಐದು ಸುತ್ತಿನ ಮಾತುಕತೆ ನಡೆಸಿದ್ದ 33 ಸಂಘಟನೆಗಳ ನಾಯಕರು ಹರಿಯಾಣ- ದಿಲ್ಲಿ ಗಡಿ ಸಿಂಘುವಿನಲ್ಲಿ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು. ಇದರ ಮಧ್ಯೆಯೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮಾತುಕತೆ ನಡೆಸಿದರು. ಇದಾದ ಅನಂತರ ಮಾತನಾಡಿದ ಥೋಮರ್, ರೈತರ ಜತೆ ಮತ್ತೂಂದು ಸುತ್ತಿನ ಮಾತುಕತೆ ನಡೆಸುವುದಾಗಿ ಹೇಳಿದರು. ಈಗಾಗಲೇ ರೈತರಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದರು. ಅಲ್ಲದೆ ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಿಲ್ಲ. ವಿವಿಧ ರಾಜ್ಯಗಳ 10 ರೈತ ಸಂಘಟನೆಗಳ ಜತೆ ಮಾತುಕತೆ ನಡೆಸಿದ್ದೇವೆ. ಈ ರೈತ ಸಂಘಟನೆಗಳು, ಮೂರು ಕಾಯ್ದೆಗಳಿಗೆ ಬೆಂಬಲ ನೀಡಿವೆ ಎಂದು ಥೋಮರ್ ಹೇಳಿದರು.
ಪೊಲೀಸರ ಜತೆ ಘರ್ಷಣೆ
ದಿಲ್ಲಿ -ಜೈಪುರ ಹೆದ್ದಾರಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಹರಿಯಾಣದಿಂದ ದಿಲ್ಲಿಗೆ ಬರುತ್ತಿದ್ದ ರೈತರನ್ನು ತಡೆದ ಪೊಲೀಸರು ವಾಪಸ್ ಕಳುಹಿಸಲು ಯತ್ನಿಸಿದರು. ಈ ವೇಳೆ ಘರ್ಷಣೆ ಉಂಟಾಯಿತು. ಪೊಲೀಸರು ರೈತರು ಬಂದಿದ್ದ ಟ್ರ್ಯಾಕ್ಟರ್‌ಗಳ ಕೀಗಳನ್ನು ಪಡೆದರು. ಕಡೆಗೆ 20 ಮಂದಿಯನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ರೈತರ ವಿರುದ್ಧ ಯಾವುದೇ ಪ್ರತಿಗಾಮಿ ಹೆಜ್ಜೆ ಇರಿಸುವುದಿಲ್ಲ. ಭಾರತದಲ್ಲಿ ಕೃಷಿ ವಲಯ ಮಾತೃ ವಲಯದಂತಿದೆ. ಇದರ ಸುಧಾರಣೆಗಾಗಿ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಚರ್ಚೆ ಮತ್ತು ಮಾತುಕತೆಗೆ ಸರಕಾರ ಸದಾ ಸಿದ್ಧವಿದೆ.
ರಾಜನಾಥ್ ಸಿಂಗ್, ರಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.