ಇಡೀ ಗ್ರಾಮವೇ ಪುಸ್ತಕಮಯ; ಇದು ಭಾರತದ ಮೊದಲ ಗ್ರಂಥಗ್ರಾಮ!
Team Udayavani, Apr 30, 2017, 11:41 AM IST
ಮುಂಬಯಿ: ಆ ಗ್ರಾಮದಲ್ಲಿ ಎಲ್ಲಿ ನೋಡಿದರೂ ಪುಸ್ತಕಗಳೇ. ಇದು ಜ್ಞಾನಾರ್ಥಿಗಳಿಗೆ ಸುಗ್ಗಿ ಕೊಡುವ ತಾಣ. ಜೊತೆಗೆ ಸ್ಟ್ರಾಬೆರಿ ಹಣ್ಣಿನ ರಸದೌತಣ!
ಇದೆಲ್ಲೋ ವಿದೇಶದ ಕಥೆ ಇರಬಹುದು ಅಂದುಕೊಳ್ಳಬೇಕಿಲ್ಲ. ನೆರೆಯ ಮಹಾರಾಷ್ಟ್ರದ ಗ್ರಾಮವೊಂದರ ಕಥೆ. ಬ್ರಿಟನ್‌ನ ವೇಲ್ಸ್‌ನ ಹೇಯ್ ಆನ್ ವೇಯ ಮಾದರಿಯಲ್ಲೇ ಭಾರತದಲ್ಲೂ ಇದೇ ಮೊದಲ ಬಾರಿಗೆ “ಪುಸ್ತಕ ಗ್ರಾಮ’ ವೊಂದು ರೂಪು ತಳೆದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಭಿಲಾರ್ ಗ್ರಾಮ ಪುಸ್ತಕ ಗ್ರಾಮವಾಗಿದ್ದು ಮೇ 4ರಂದು ಇದು ಲೋಕಾರ್ಪಣೆಗೊಳ್ಳಲಿದೆ.
ಸ್ಟ್ರಾಬೆರಿ ಹಣ್ಣುಗಳಿಗೆ ಪ್ರಸಿದ್ಧವಾದ ಈ ಗ್ರಾಮ ಗಿರಿಧಾಮ ಮಹಾಬಲೇಶ್ವರದ ಸನಿಹವಿದ್ದು, ಅಪಾರ ಪ್ರಮಾಣದಲ್ಲಿ ಓದುಗರನ್ನು, ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ ಇದೆ.
ಪುಸ್ತಕಗಳೇ ಪುಸ್ತಕಗಳು: ಗ್ರಾಮದ ಶಾಲೆ, ಮನೆಗಳು, ದೇಗುಲ ಎಂದು ಸುಮಾರು 25 ಕಡೆಧಿಗಳಲ್ಲಿ ಪುಸ್ತಕಗಳನ್ನು ಇಡಲಾಗಿದ್ದು, ವೃತ್ತ ಪತ್ರಿಕೆಗಳಿಂದ ಹಿಡಿದು ಮರಾಠಿ ಭಾಷೆಯ ಅತಿ ಅಪರೂಪದ ಪುಸ್ತಕಗಳು ಇಲ್ಲಿ ಓದುಗರಿಗಾಗಿ ಲಭ್ಯವಿವೆ.
ಮಹಾರಾಷ್ಟ್ರ ಸರಕಾರ ಪುಸ್ತಕ ಗ್ರಾಮಕ್ಕಾಗಿ ಸುಮಾರು 10 ಸಾವಿರ ಪುಸ್ತಕಗಳನ್ನು ಪೂರೈಸಿದೆ. ಇವುಗಳಲ್ಲಿ ಪ್ರಕಟಣೆ ನಿಲ್ಲಿಸಿದವು, ತೀರ ಅಪರೂಪದ ಸಾಹಿತ್ಯ ಪುಸ್ತಕಗಳು, ಶೇಷ್ಠ ಬರಹಗಾರರ ಕೃತಿಗಳು ಇತ್ಯಾದಿಗಳಿವೆ. ಸದ್ಯ ಇಲ್ಲಿ ಮರಾಠಿ ಪುಸ್ತಕಗಳನ್ನೇ ಹೆಚ್ಚಾಗಿ ಇಡಲಾಗಿದ್ದು ಮುಂದಿನ ದಿನಗಳಲ್ಲಿ ಇಂಗ್ಲಿಷ್, ಹಿಂದಿ ಪುಸ್ತಕಗಳೂ ಲಭ್ಯವಾಗಲಿವೆ. ಓದುಗರು ಠೇವಣಿ ಇಟ್ಟು, ಪುಸ್ತಕಗಳನ್ನು ಓದಲು ಎರವಲು ಪಡೆದುಕೊಳ್ಳಬಹುದಾಗಿದೆ. ಇದೀಗ ಪುಸ್ತಕ ಗ್ರಾಮವನ್ನು ಸುಮಾರು 75 ಮಂದಿ ಕಲಾವಿದರು, ಸುಣ್ಣ ಬಣ್ಣ ಕೊಟ್ಟು ಅಲಂಕರಿಸಿದ್ದು ಚಿತ್ರಗಳನ್ನೂ ಬಿಡಿಸಿದ್ದಾರೆ. ಓದುಗರೊಂದಿಗೆ ಪ್ರವಾಸಿಗರನ್ನೂ ಕೈಬೀಸಿ ಕರೆಯುವಂತಿದೆ.
ಸ್ಟ್ರಾಬೆರಿ ಕೃಷಿಯ ತಾಣ
ಭಿಲ್ಹಾರ್ ಗ್ರಾಮ ಸ್ಟ್ರಾಬೆರಿ ಕೃಷಿಗೆ ಪ್ರಸಿದ್ಧ. 10 ಸಾವಿರ ಜನಸಂಖ್ಯೆಯ ಗ್ರಾಮ ವಾರ್ಷಿಕ ಸುಮಾರು 50 ಕೋಟಿ ರೂ. ಮೌಲ್ಯದ 100 ಟನ್ ಸ್ಟ್ರಾಬೆರಿ ಬೆಳೆಯುತ್ತಿದೆ. ಶೇ.90ರಷ್ಟು ಗ್ರಾಮದ ಜನ ಸ್ಟ್ರಾಬೆರಿ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಪುಸ್ತಕ ಗ್ರಾಮವಾಗಿಸುವತ್ತ ಸರಕಾರದೊಂದಿಗೆ ಗ್ರಾಮಸ್ಥರೂ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.