Panaji: ಡೊನಾ ಪೌಲಾದಲ್ಲಿನ ಪ್ರಸಿದ್ಧ ಜೆಟ್ಟಿ ಈಗ ಪಾರ್ಟಿ ಡೆಸ್ಟಿನೇಷನ್
Team Udayavani, Nov 16, 2023, 2:50 PM IST
ಪಣಜಿ: ಪ್ರವಾಸಿಗರಿಗಾಗಿ ತೆರೆದಿರುವ ಡೊನಾ ಪೌಲಾದಲ್ಲಿನ ಪ್ರಸಿದ್ಧ ಜೆಟ್ಟಿ ಈಗ ಪಾರ್ಟಿ ಡೆಸ್ಟಿನೇಷನ್ ಎಂಬ ಖ್ಯಾತಿಯನ್ನು ಸೃಷ್ಟಿಸುತ್ತಿದೆ.
ಈ ಸ್ಥಳವನ್ನು ಸಂಜೆ ಪಾರ್ಟಿಗಳನ್ನು ಆಯೋಜಿಸಲು ಬಳಸಲಾಗುತ್ತದೆ. ಜೆಟ್ಟಿಗೆ ಟಿಕೆಟ್ ನೀಡುವ ಕಂಪನಿಯ ಮೂಲಕವೂ ಈ ಪಾರ್ಟಿಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಪ್ರವಾಸೋದ್ಯಮ ಇಲಾಖೆಗೆ ಉತ್ತಮ ಆದಾಯ ಬರುತ್ತಿದೆ ಎಂದೇ ಹೇಳಲಾಗುತ್ತಿದೆ.
ಡೋನಾ ಪೌಲಾ ಜೆಟ್ಟಿಯನ್ನು ಕಳೆದ ನಾಲ್ಕು ವರ್ಷಗಳಿಂದ ದುರಸ್ತಿ ಮತ್ತು ನವೀಕರಣದ ಹೆಸರಿನಲ್ಲಿ ಮುಚ್ಚಲಾಗಿತ್ತು. ಆ ನಂತರ ಜೆಟ್ಟಿ ಯಾವಾಗ ಮುಗಿದು ತೆರೆಯುತ್ತದೆ ಎಂಬ ಕುತೂಹಲ ಪ್ರವಾಸಿಗರಲ್ಲಿ ಮೂಡಿತ್ತು. ಅಂತಿಮವಾಗಿ, ಇದನ್ನು ಇತ್ತೀಚೆಗೆ ಪ್ರವಾಸಿಗರಿಗೆ ತೆರೆಯಲಾಯಿತು. ಜೆಟ್ಟಿಗೆ ತೆರಳಲು ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಟಿಕೆಟ್ ನೀಡುತ್ತಿದೆ.
ರಾಜ್ಯ ಸರ್ಕಾರ ಈ ಹಿಂದೆ ವೆರೆಯಲ್ಲಿರುವ ರೇಯಿಷ್‍ಮಾಗಸ್ ಕೋಟೆಯ ಭೂಮಿಯನ್ನು ಹೋಟೆಲ್ ಆಡಳಿತಕ್ಕೆ ಹಸ್ತಾಂತರಿಸಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಆಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಡೊನಾ ಪೌಲಾ ಜೆಟ್ಟಿಯಲ್ಲಿ ಸಂಜೆಯವರೆಗೂ ಅಂದರೆ ಸೂರ್ಯಾಸ್ತದವರೆಗೂ ಜನಜಂಗುಳಿ ಇರುತ್ತದೆ.
ರಾತ್ರಿ ವೇಳೆ ದೋನಾ ಪೌಲಾ ಜೆಟ್ಟಿಯ ಆವರಣ ಗಮನ ಸೆಳೆಯುತ್ತದೆ. ಅದಕ್ಕಾಗಿಯೇ ಈ ಕಡಲತೀರದ ಬೆಟ್ಟದಲ್ಲಿ ಪಾರ್ಟಿಗಳನ್ನು ನಡೆಸಲು ಅನೇಕರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಪಾರ್ಟಿಗಳಿಗೆ ಜೆಟ್ಟಿಯನ್ನು ಅಲಂಕರಿಸಲಾಗಿದೆ. ಜೆಟ್ಟಿಯನ್ನು ವಿದ್ಯುತ್ ದೀಪಾಲಂಕಾರ, ಹೂವುಗಳಿಂದ ಅಲಂಕರಿಸಲಾಗಿದೆ. ಈವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಯು ಯೋಜನೆ ಕಾರ್ಯನಿರ್ವಹಿಸುತ್ತಿದೆ.
ಈ ಕುರಿತು ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಪ್ರತಿಕ್ರಿಯೆ ನೀಡಿ ಡೊನಾ ಪೌಲಾ ಜೆಟ್ಟಿಯಲ್ಲಿ ಸಂಜೆಯವರೆಗೆ ಅಂದರೆ ಸೂರ್ಯಾಸ್ತದವರೆಗೂ ಜನಜಂಗುಳಿ ಇರುತ್ತದೆ. ಸ್ವಾಭಾವಿಕವಾಗಿ, ರಾತ್ರಿಯಲ್ಲಿ ಅಲ್ಲಿ ಪಾರ್ಟಿಗಳನ್ನು ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಈ ಉದ್ದೇಶಕ್ಕಾಗಿ ನೇಮಕಗೊಂಡ ಕಂಪನಿಯಿಂದ ಸರ್ಕಾರ ವರ್ಷಕ್ಕೆ ಆದಾಯವನ್ನು ಪಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.