ಬೆಕ್ಕಿನ ಮರಿ ಎಂದು ಚಿರತೆ ಮರಿ ತಂದ ರೈತ!
Team Udayavani, Jul 17, 2023, 7:33 AM IST
ಚಂಡೀಗಢ: ಹರ್ಯಾಣದ ನುಹ್ ಜಿಲ್ಲೆಯ ಗ್ರಾಮವೊಂದರ ರೈತರೊಬ್ಬರು ಬೆಕ್ಕಿನ ಮರಿಗಳೆಂದು ಭಾವಿಸಿ, ಚಿರತೆ ಮರಿಗಳನ್ನು ರಕ್ಷಿಸಿ ಗ್ರಾಮಕ್ಕೆ ತಂದು ಅವುಗಳಿಗೆ ಮೇಕೆ ಹಾಲನ್ನು ಕುಡಿಸಿರುವ ಘಟನೆ ವರದಿಯಾಗಿದೆ.
ಮೇಕೆಗಳನ್ನು ಮೇಯಿಸಲೆಂದು ಕಾಡಿಗೆ ತೆರಳಿದ್ದ ವೇಳೆ 2 ಚಿರತೆ ಮರಿಗಳು ಸಿಕ್ಕಿವೆ. ಎಳೆಯದಾಗಿದ್ದ ಕಾರಣ ಅವುಗಳು ಬೆಕ್ಕಿನ ಮರಿಗಳಿರಬಹುದೆಂದು ಭಾವಿಸಿ ಅವುಗಳನ್ನು ಮನೆಗೆ ತಂದು, ಮೇಕೆ ಹಾಲು ಕುಡಿಸಿದ್ದಾರೆ. ಕೊನೆಗೆ ಈ ವಿಚಾರ ಅರಣ್ಯಾಧಿಕಾರಿಗಳಿಗೆ ಗೊತ್ತಾಗಿ, ಅವರು ಸ್ಥಳಕ್ಕಾಗಮಿಸಿ ಚಿರತೆ ಮರಿಗಳನ್ನು ಕೊಂಡೊಯ್ದಿದ್ದು, ತಾಯಿಯ ಜತೆಗೆ ಒಗ್ಗೂಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಚಿರತೆ ಮರಿಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಕಾಡಿನಲ್ಲಿ ಈ ರೀತಿ ಮರಿಗಳನ್ನು ಕಂಡಾಗ ರಕ್ಷಿಸುವುದಕ್ಕಾಗಿ ಎತ್ತಿಕೊಳ್ಳಬೇಡಿ, ಸಾಧ್ಯವಾದರೆ ಅವುಗಳು ಇರುವ ಸ್ಥಳವನ್ನೇ ಸುರಕ್ಷಿತವಾಗಿಸಿ ಸಾಕು. ಇಲ್ಲದಿದ್ದರೆ ಮರಿಗಳನ್ನು ಹುಡುಕಿ ಬರುವ ತಾಯಿ, ದಿಕ್ಕು ತಪ್ಪುತ್ತದೆ. ಮರಿಗಳು ತಾಯಿಂದ ದೂರಾಗುತ್ತವೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.