ಗುರುನಾನಕ್ ಅರಮನೆ ಧ್ವಂಸ
ಪಾಕ್ನ ಐತಿಹಾಸಿಕ ಗುರುನಾನಕ್ ಪ್ಯಾಲೇಸ್ ಧರೆಗೆ
Team Udayavani, May 28, 2019, 6:00 AM IST
ಲಾಹೋರ್: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಐತಿಹಾಸಿಕ ಗುರುನಾನಕ್ ಅರಮನೆಯನ್ನು ಧ್ವಂಸಗೊಳಿ ಸಲಾಗಿದೆ. ಕರ್ತಾರ್ಪುರ ಕಾರಿಡಾರ್ ನಿರ್ಮಾಣ ಮಾಡಿ ಗುರುನಾನಕ್ ಪ್ರಾರ್ಥನಾ ಮಂದಿರಕ್ಕೆ ತೆರಳಲು ಅವಕಾಶ ಮಾಡಿಕೊಡುತ್ತಿರುವ ಪಾಕಿಸ್ಥಾನದ ನಿಜ ಬಣ್ಣ ಈ ಘಟನೆಯಿಂದ ಬಹಿರಂಗವಾಗಿದೆ.
4 ಮಹಡಿಯ ಈ ಕಟ್ಟಡದ ಗೋಡೆಗಳನ್ನು ಧ್ವಂಸಗೊಳಿಸಿ, ಇದರ ಅಮೂಲ್ಯವಾದ ಕಿಟಕಿ ಹಾಗೂ ಬಾಗಿಲುಗಳನ್ನು ಮಾರಾಟ ಮಾಡಲಾಗಿದೆ. ಈ ಅರಮನೆ ಸುಮಾರು 16 ಕೋಣೆಗಳನ್ನು ಹೊಂದಿತ್ತು. ಛಾವಣಿಗಳಿಗೆ ಅತ್ಯಂತ ಅಮೂಲ್ಯವಾದ ಮರದ ತುಂಡುಗಳನ್ನು ಬಳಸಲಾಗಿತ್ತು. ಈ ಅರಮನೆ ವೀಕ್ಷಣೆಗೆ ದೇಶ ವಿದೇಶಗಳಿಂದಲೂ ಜನರು ಬರುತ್ತಿದ್ದರು.
ಮೂಲಗಳ ಪ್ರಕಾರ ಪಾಕಿಸ್ಥಾನದ ಪ್ರಾಚ್ಯ ವಸ್ತುಗಳನ್ನು ನಿರ್ವಹಿಸುವ ಔಖಾಫ್ ಇಲಾ ಖೆಯ ನೆರವಿನಿಂದಲೇ ಕೆಲವು ಪ್ರಭಾವಶಾಲಿ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇದರ ಗೋಡೆಗಳನ್ನು ಧ್ವಂಸಗೊಳಿಸಿ ಇಲ್ಲಿ ಕಟ್ಟಡಗಳನ್ನೂ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಈ ಅರಮನೆಯ ದಾಖಲೆಗಳನ್ನೂ ಔಖಾಫ್ ಇಲಾಖೆ ನಾಪತ್ತೆ ಮಾಡಿದೆ ಎಂದು ಪಾಕಿಸ್ಥಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.