ದೆಹಲಿಯಲ್ಲಿ ಮಾಂಸದ ದರ ಹೆಚ್ಚಳ?
Team Udayavani, Mar 29, 2017, 3:45 AM IST
ಲಕ್ನೋ/ನವದೆಹಲಿ: ಉತ್ತರಪ್ರದೇಶ ಸರ್ಕಾರವು ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುತ್ತಿರುವುದರ ಪ್ರಭಾವವು ದೆಹಲಿಯ ಮೇಲೆ ಬೀರಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಾಂಸದ ತೀವ್ರ ಕೊರತೆ ಉಂಟಾಗಿದ್ದು, ನವರಾತ್ರಿಯ ನಂತರ ಮಾಂಸದ ದರವು ಗಗನಮುಖೀಯಾಗುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ.
ದೆಹಲಿಯ ನೆರೆ ರಾಜ್ಯ ಉತ್ತರಪ್ರದೇಶದಲ್ಲಿ ಕಸಾಯಿಖಾನೆಗಳು ಮುಚ್ಚುತ್ತಿರುವುದು ಮತ್ತು ಮಾಂಸ ವ್ಯಾಪಾರಿಗಳ ಮುಷ್ಕರದಿಂದಾಗಿ ಮಾಂಸದ ಪೂರೈಕೆ ಶೇ.50ರಷ್ಟು ಕಡಿಮೆಯಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಹಿಂದೂಗಳು ಮಾಂಸಾಹಾರದಿಂದ ದೂರವುಳಿಯುವ ಕಾರಣ ಸದ್ಯಕ್ಕೆ ಗಂಭೀರ ಸಮಸ್ಯೆಯೇನೂ ತಲೆದೋರಿಲ್ಲ. ಆದರೆ, 9 ದಿನ ಕಳೆದರೆ ಮಾಂಸದ ಕೊರತೆ ತೀವ್ರವಾಗಲಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರಪ್ರದೇಶದಿಂದ ಕುರಿಗಳ ಮಾಂಸ ಪೂರೈಕೆಯೂ ಸಂಪೂರ್ಣ ಸ್ಥಗಿತಗೊಂಡಿದೆ. ಕುರಿ ಮಾಂಸ ವ್ಯಾಪಾರಿಗಳು ಪರವಾನಗಿ ಹೊಂದಿದ್ದರೂ, ದಾಳಿ ಭೀತಿಯಿಂದಾಗಿ ಮಾಂಸ ಪೂರೈಸುತ್ತಿಲ್ಲ, ಇದು ಹೀಗೇ ಮುಂದುವರಿದರೆ, ಮಾಂಸದ ಕೊರತೆ ಮಾತ್ರವಲ್ಲ, ದರವೂ ಹೆಚ್ಚಾಗಲಿದೆ ಎನ್ನುತ್ತಾರೆ ಗಾಜಿಪುರದ ಸಗಟು ಮಾರುಕಟ್ಟೆಯ ಅಧಿಕಾರಿಗಳು.
ಪರವಾನಗಿ ಇದ್ದರೂ ಮುಚ್ಚಿದ ವಧಾಗೃಹಗಳು
ಉತ್ತರಪ್ರದೇಶದಲ್ಲಿ 44 ಕಸಾಯಿಖಾನೆಗಳು ಪರವಾನಗಿ ಹೊಂದಿವೆ. ಆದರೆ, ಈ ಪೈಕಿ 26 ವಧಾಗೃಹಗಳನ್ನು ಮೂಲ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 26 ಕಸಾಯಿಖಾನೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆಯಷ್ಟೆ. ನಿಯಮದಂತೆ ನಡೆದುಕೊಂಡರೆ, ಅವುಗಳ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಹೇಳಿದ್ದಾರೆ. ಜತೆಗೆ, ಮುಷ್ಕರನಿರತ ಮಾಂಸ ವ್ಯಾಪಾರಿಗಳು ಯಾವುದೇ ದೂರು ಅಥವಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಮ್ಮ ಮುಂದೆ ಬಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.