ದೇಶದಲ್ಲಿ ಹೆಚ್ಚುತ್ತಿದೆ ಬಿಸಿಲ ತಾಪ
Team Udayavani, Feb 27, 2017, 10:02 AM IST
ಪುಣೆ/ಬೆಂಗಳೂರು: ಈ ಬಾರಿಯ ಬೇಸಿಗೆ ಈ ಹಿಂದಿನ ಎಲ್ಲಾ ಬೇಸಿಗೆಗಳಿಗಿಂಥ ಹೆಚ್ಚು ಸುಡಲಿದೆ! ಅಧ್ಯಯನದ ವರದಿಯೊಂದು ಈ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ಭಾರತೀಯ ಉಷ್ಣವಲಯ ಮಾಪನ ಸಂಸ್ಥೆ (ಐಐಟಿಎಂ) ಜಂಟಿಯಾಗಿ ನಡೆಸಿರುವ ಅಧ್ಯಯನ ವರದಿಯಲ್ಲಿ ಇದು ದಾಖಲಾಗಿದೆ. ಪ್ರತಿ ದಶಕಕ್ಕೆ ಬೇಸಿಗೆಯ ಉಷ್ಣಾಂಶ ಶೇ.0.56 ಡಿಗ್ರಿ ಸೆ.ನಷ್ಟು, ಮಳೆಗಾಲದಲ್ಲಿನ ಉಷ್ಣಾಂಶ ಶೇ. 0.32 ಡಿಗ್ರಿ ಸೆ.ನಷ್ಟು ಗಮನಾರ್ಹ ಹೆಚ್ಚಳ ಕಂಡಿದೆ ಎನ್ನುವುದನ್ನು ಅಧ್ಯಯನ ತಂಡ ವರದಿಯಲ್ಲಿ ದಾಖಲಿಸಿದೆ. ಬೇಸಿಗೆಗೂ ಮುನ್ನವೇ ಸುಡು ಬಿಸಿಲ ಪರಿಣಾಮ ವಿದ್ಯುತ್ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವಂತೆಯೇ ಇಂಥದ್ದೊಂದು ಮಾಹಿತಿ ವರದಿಯಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗುವ ರಣಬಿಸಿಲ ತಾಪ ಮನುಷ್ಯ ಸೇರಿದಂತೆ ಜೀವಿಗಳನ್ನು ಕಾಡುವ ಆತಂಕ ವ್ಯಕ್ತವಾಗಿದೆ.
ಮುಂಬೈ, ಪುಣೆ, ಕೋಲ್ಕತ, ಅಹಮದಾಬಾದ್, ವಿಶಾಖಪಟ್ಟಣ, ಕೊಯಮತ್ತೂರು, ನಾಗ್ಪುರ ಸೇರಿ ದೇಶಾದ್ಯಂತ 17 ನಗರಗಳನ್ನು ಈ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಎಲ್ಲಾ ನಗರಗಳಲ್ಲಿಯೂ ಬೇಸಿಗೆಯ ತಾಪಮಾನದಲ್ಲಿನ ಉಷ್ಣಾಂಶ ಸೂಚ್ಯಂಕದಲ್ಲಿ ಹೆಚ್ಚಳ ಕಂಡುಬಂದಿದೆ. ಮುಂಬೈ ಮತ್ತು ಪುಣೆಯಲ್ಲಿ ಮಳೆಗಾಲದ ಉಷ್ಣಾಂಶ ಗಣನೀಯವಾಗಿ ಹೆಚ್ಚುತ್ತಿದೆ. ದೆಹಲಿ ಮತ್ತು ಅಮೃತಸರ ಸೇರಿ ಉತ್ತರ ಭಾರತದ ಬಹುತೇಕ ನಗರಗಳಲ್ಲಿ ಬೇಸಿಗೆ ಉಷ್ಣಾಂಶ ಪ್ರತಿ ವರ್ಷ ಹೆಚ್ಚುತ್ತಲೇ ಇದೆ ಎಂದು ಅಧ್ಯಯನ ವರದಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Kerala: ತಂಜಾವೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ: ನಾಲ್ವರು ಮೃತ್ಯು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.