ತನಿಖೆಗೆ ಬಂತು ಲಿಬರ್ಹಾನ್ ಕಮಿಷನ್
Team Udayavani, Nov 10, 2019, 4:05 AM IST
ಲಿಬರ್ಹಾನ್ ಆಯೋಗ! ಇದು ಭಾರತದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಪ್ರಕರಣದ ತನಿಖೆ ನಡೆಸಲು ನೇಮಕಗೊಂಡ ಅತ್ಯಂತ ವಿವಾದಾತ್ಮಕ ಆಯೋಗ. ಬಾಬ್ರಿ ಮಸೀದಿ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ತನಿಖೆ ನಡೆಸಲು ಆಗಿನ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಘಟನೆ ನಡೆದ 10 ದಿನಗಳ ಬಳಿಕ ಅಂದರೆ ಡಿ.16ರಂದು (1992) ಲಿಬರ್ಹಾನ್ ಆಯೋಗವನ್ನು ನೇಮಕ ಮಾಡಿತ್ತು.
ಯಾರು ಈ ಲಿಬರ್ಹಾನ್?: ಖ್ಯಾತ ನ್ಯಾಯವಾದಿ ಚೌಧರಿ ಭುಕ್ತಾವರ್ ಸಿಂಗ್‌ರ ಪುತ್ರನೇ ನ್ಯಾ. ಮನಮೋಹನ್ ಸಿಂಗ್ ಲಿಬರ್ಹಾನ್ (ಜನನ- 1938). 1964ರಿಂದ ಹರ್ಯಾಣ ರಾಜ್ಯದ ಅಡ್ವೊಕೇಟ್ ಜನರಲ್ ಆಗಿದ್ದರು. ಮುಂದೆ 1987ರಲ್ಲಿ ಅವರಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ಭಡ್ತಿ ನೀಡಲಾಯಿತು. 1992ರಲ್ಲಿ ಬಾಬ್ರಿ ಮಸೀದಿ ವಿವಾದಿತ ಕಟ್ಟಡ ಧ್ವಂಸವಾದಾಗ ನಿಷ್ಕ್ರಿಯವಾಗಿದ್ದ ಆರೋಪಕ್ಕೆ ಸಿಲುಕಿದ್ದ ಪಿ.ವಿ. ನರಸಿಂಹ ರಾವ್ ನೇತೃತ್ವದ ಕೇಂದ್ರ ಸರ್ಕಾರ ಲಿಬರ್ಹಾನ್ ನೇತೃತ್ವದ ಆಯೋಗ ರಚಿಸಿ ಕೈತೊಳೆದುಕೊಂಡಿತು. ತನಿಖಾ ಆಯೋಗದ ಹೆಚ್ಚುವರಿ ಹೊರೆಯ ಜೊತೆ ನ್ಯಾಯಾ ಧೀಶರಾಗಿಯೂ ಮುಂದುವರಿದ ಲಿಬರ್ಹಾನ್ 1997ರಲ್ಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅ ಧಿಕಾರ ವಹಿಸಿಕೊಂಡರು. 1998ರಲ್ಲಿ ಆಂಧ್ರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡ ಅವರು ಸದ್ಯ ಚಂಡೀಗಢದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಸುದೀರ್ಘ ತನಿಖೆ: ನ್ಯಾ. ಎಂಎಸ್ ಲಿಬರ್ಹಾನ್ ನೇತೃತ್ವದ ಆಯೋಗ 6 ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಬೇಕೆಂದು ಸೂಚಿಸಿತ್ತು. ಆದರೆ, ಇದು ಭಾರತದ ಅತ್ಯಂತ ಸುದೀರ್ಘ ತನಿಖಾ ಆಯೋಗಗಳಲ್ಲೊಂದಾ ಯಿತು. ಕೊನೆಗೂ ಲಿಬರ್ಹಾನ್ ತಮ್ಮ ವಿಸ್ತೃತ ವರದಿಯನ್ನು ಸಲ್ಲಿಸುವಾಗ ಕೇಂದ್ರದಲ್ಲಿ ಹಲವು ಸರ್ಕಾರಗಳು ಬದಲಾಗಿದ್ದವು. ಆಯೋಗದ ಅವಧಿಯನ್ನು 48 ಬಾರಿ ವಿಸ್ತರಣೆ ಮಾಡಲಾಗಿತ್ತು.
ವಾಜಪೇಯಿಗೆ ನಂಟು ಬೆಸೆದ ಲಿಬರ್ಹಾನ್: ಲಿಬರ್ಹಾನ್ ತಮ್ಮ 16 ವರ್ಷಗಳ ಸುದೀರ್ಘ ತನಿಖೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಒಮ್ಮೆಯೂ ವಿಚಾರಣೆಗೆ ಒಳಪಡಿಸದಿದ್ದರೂ, ಅವರು ಭಾಗಿ ಎಂದು ದೋಷಾ ರೋಪ ಪಟ್ಟಿ ಮಾಡಿದ್ದು ವಿವಾದಕ್ಕೆ ಕಾರಣವಾಯಿತು. ವರದಿಯಲ್ಲಿ ಲೋಪ ಹುಡುಕುತ್ತಿದ್ದವರಿಗೆ ಇದು ಅಸ್ತ್ರವಾಗಿತ್ತು. “ಒಬ್ಬ ವ್ಯಕ್ತಿಯ ವಿರುದ್ಧ ದೋಷಾ ರೋಪ ಸಲ್ಲಿಸಬೇಕಾದರೆ, ಆತನನ್ನು ವಿಚಾರಣೆಗೆ ಒಳಪಡಿಸಬೇಕು. ಹಾಗಾಗಿ, ವಾಜಪೇಯಿ ವಿರುದ್ಧ ಮಾಡಿ ರುವ ಟಿಪ್ಪಣಿಗಳು ಕಾನೂನುಬದ್ಧವಲ್ಲ.
ಅವರು ಈ ವರದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು’ ಎಂದು ಸಂಸದೀಯ ತಜ್ಞ ಪಿ.ಪಿ. ರಾವ್ ಹೇಳಿದ್ದರು. “ಅಯೋ ಧ್ಯೆಗೆ ಹೋಗಬೇಡಿ’ ಎಂದು ಸುಪ್ರೀಂ ಕೋರ್ಟ್, ವಾಜಪೇಯಿಗೆ ಸೂಚಿ ಸಿತ್ತು. ಹಾಗಾಗಿ, ಕಟ್ಟಡ ಧ್ವಂಸ ನಡೆದಾಗ ವಾಜಪೇಯಿ ಅಲ್ಲಿರಲಿಲ್ಲ. ಆದರೂ ಘಟನೆ ನಡೆಯುವ ಹಿಂದಿನ ದಿನ ವಾಜಪೇಯಿ ಮಾಡಿದ್ದ ಭಾಷಣವನ್ನು ಲಿಬರ್ಹಾನ್ ಗಂಭೀರವಾಗಿ ಪರಿಗಣಿಸಿದ್ದರು. ಆ ಭಾಷಣದಲ್ಲಿ ವಾಜಪೇಯಿ “ಚೂಪಾದ ಕಲ್ಲುಗಳು ನೆಲದಿಂದ ಹೊರಹೊಮ್ಮುತ್ತಿವೆ. ಅದರ ಮೇಲೆ ಯಾರೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೆಲವನ್ನು ಸಮತಟ್ಟು ಮಾಡಬೇಕಿದೆ (ಜಮೀನ್ ಕೋ ಸಮತಲ್ ಕರ್‍ನಾ ಪಡೇಗಾ)’ ಎಂದಿದ್ದರು.
ವರದಿ ಮಾಡಿದ್ದ 8 ಆರೋಪಗಳು
-ಅಡ್ವಾಣಿ, ಮುರಳಿ ಮನೋಹರ ಜೋಷಿ, ಅಟಲ್ ಬಿಹಾರಿ ವಾಜಪೇಯಿ ಸಹಿತ 68 ಮಂದಿ ದಂಡನಾರ್ಹರು.
-ಆರ್‌ಎಸ್‌ಎಸ್ ವಿವಾದಿತ ಕಟ್ಟಡ ಧ್ವಂಸದ ಪ್ರಮುಖ ರೂವಾರಿ.
-ವಿವಾದಾತ್ಮಕ ಕಟ್ಟಡ ಧ್ವಂಸಗೊಳಿಸುವ ಷಡ್ಯಂತ್ರ ಅನುಷ್ಠಾನಗೊಳಿಸುವಲ್ಲಿ ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಪಾತ್ರ ಪ್ರಮುಖವಾಗಿತ್ತು.
-ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ “ಪೊಳ್ಳು ಮಂದಗಾಮಿಗಳು’.
-ಪೂರ್ಣ ಷಡ್ಯಂತ್ರದ ಮಾಹಿತಿ ಇದ್ದರೂ, ಇವರು ರಾಮಜನ್ಮ ಭೂಮಿ ಆಂದೋಲನದಿಂದ ದೂರ ಇರುವವರಂತೆ ನಾಟಕವಾಡಿದ್ದರು.
-ಮಸೀದಿ ಧ್ವಂಸ ಸಂದರ್ಭ ತಟಸ್ಥವಾಗುಳಿಯುವಂತೆ ಆಡಳಿತಾಧಿ ಕಾರಿ, ಪೊಲೀಸ್ ಅ ಧಿಕಾರಿಗಳನ್ನೇ ಅಯೋಧ್ಯೆಯಲ್ಲಿ ನಿಯೋಜಿಸಲಾಗಿತ್ತು.
-ಸಂಘ ಪರಿವಾರ ತನ್ನ ಉದ್ದೇಶ ಸಾಧಿ ಸುವುದಕ್ಕೆ ಪೂರಕವಾಗಿ ಕಲ್ಯಾಣ್ ಸಿಂಗ್ ಸರ್ಕಾರ ಅದರ ಕೈಗೊಂಬೆಯಾಗಿತ್ತು. ಕಲ್ಯಾಣ್ ಸಿಂಗ್, ಪರಿವಾರದ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಿದರು.
-ಸರ್ಕಾರ ತಮಗೆ ಸಹಕಾರ ನೀಡದ ಅಧಿಕಾರಿಗಳನ್ನು ಶಕ್ತಿ ಕೇಂದ್ರಗಳಿಂದ ಕಿತ್ತು ಹಾಕಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ಒದಗಿಸಿತ್ತು.
ಬಟ್ಟೆಯ ಟೆಂಟ್ ಒಳಗೆ ಬಾಲರಾಮ: ಸಂಜೆ 4.30ರ ಸುಮಾರಿಗೆ ಮೂರು ಗುಮ್ಮಟಗಳು ಧರೆಗುರುಳಿದವು. ಅದೇ ರಾತ್ರಿ ನೆಲ ಸಮತಟ್ಟು ಗೊಳಿಸಿ ಬಟ್ಟೆಯ ಟೆಂಟ್‌ನ ಒಳಗೆ ಬಾಲರಾಮನ ವಿಗ್ರಹಕ್ಕೆ ಪೂಜೆ ನಡೆಯಿತು. ಸುಪ್ರೀಂ ಕೋರ್ಟ್‌ನ ಆದೇಶದಂತೆ ಮಳೆಗಾಳಿಯಿಂದ ರಕ್ಷಿತವಾದ ತಾತ್ಕಾಲಿಕ ರಾಮಮಂದಿರದಲ್ಲೇ 1992ರಿಂದ ಈ ತನಕವೂ ನಿರಂತರ ಪೂಜೆ ಆ ಜನ್ಮಭೂಮಿಯ ತಾಣದಲ್ಲಿ ಜರುಗುತ್ತಿದೆ. 1983ರಲ್ಲಿ ಮೊಳಗಿದ “ಮಂದಿರವಲ್ಲೇ ಕಟ್ಟುವೆವು’ ಎನ್ನುವ ಘೋಷಣೆಗೆ ಪೂರಕವಾದ ಮಂದಿರ ನಿರ್ಮಾಣದ ಕೆತ್ತನೆಯ ಕೆಲಸಗಳ ಬಹುಪಾಲು ಈಗಾಗಲೇ ಮುಗಿದಿದೆ. 268 ಅಡಿ ಉದ್ದ, 140 ಅಡಿ ಅಗಲ, 128 ಅಡಿ ಎತ್ತರದ 2 ಅಂತಸ್ತಿನ, 106 ಕಂಬಗಳ, 24 ಭವ್ಯದ್ವಾರಗಳನ್ನು ಹೊಂದಿರುವ ಶ್ರೀರಾಮ ಮಂದಿರದ ನೀಲಿನಕಾಶೆ 2 ದಶಕಗಳಿಂದ ಕಾಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.