ಐದು ಗೋಪುರಗಳ ಭವ್ಯ ರಾಮ ಮಂದಿರ; ಶಿಲ್ಪಿ ಚಂದ್ರಕಾಂತ್ ಸೋಮಪುರ ಪ್ರತಿಪಾದನೆ
Team Udayavani, Aug 1, 2020, 7:47 AM IST
ರಾಮ ಮಂದಿರಕ್ಕೆ ಭೂಮಿ ಪೂಜೆ ಆ.5ರಂದು ನೆರವೇರಲಿದೆ. ಆ ದಿನ ವಿತರಿಸಲು ಬೇಕಾಗಿರುವ ಲಡ್ಡುಗಳನ್ನು ಅಯೋಧ್ಯೆಯಲ್ಲಿ ಬಾಣಸಿಗರು ಸಿದ್ಧಪಡಿಸುತ್ತಿದ್ದಾರೆ.
ಅಯೋಧ್ಯೆ: ಅವತ್ತಿನ ಅಯೋಧ್ಯೆಗೂ, ಇವತ್ತಿನ ಅಯೋಧ್ಯೆಗೂ ಅಜಗಜಾಂತರ. 1990ರಲ್ಲಿ ಮೊಟ್ಟ ಮೊದಲು ಅಯೋಧ್ಯೆಗೆ ಕಾಲಿಟ್ಟಾಗ ಚಿತ್ರವೇ ಬೇರೆ ಇತ್ತು. ಭದ್ರತೆಯ ದೃಷ್ಟಿಯಿಂದ ಅಳತೆಯ ಟೇಪ್ ಒಳಗೊಯ್ಯಲೂ ಅವಕಾಶವಿರಲಿಲ್ಲ. ಎಷ್ಟೋ ಸಲ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಶಿಲೆಗಳನ್ನು ಅಳೆದಿದ್ದೆ!
ರಾಮಮಂದಿರವನ್ನು ವಿಶ್ವದ ಮುಂದೆ ವಿಸ್ಮಯದ ಕಲಾಕೃತಿಯಾಗಿ ನಿಲ್ಲಿಸುತ್ತಿರುವ ಶಿಲ್ಪಿ ಚಂದ್ರಕಾಂತ್ ಸೋಮಪುರ ಕಣ್ಣಲ್ಲಿನ ಅಯೋಧ್ಯೆ ಇದು. ಅವರ ಜತೆಗೀಗ ಯಂತ್ರೋಪಕರಣಗಳ ಗೆಳೆಯರಿದ್ದಾರೆ. ಮಂದಿರ ವಿನ್ಯಾಸಕ್ಕೆ ಶಿಲ್ಪಿಗಳಿಗೆ ಏನನ್ನೂ ಕೊಂಡೊಯ್ಯಲು ಸ್ವಾತಂತ್ರ್ಯವಿದೆ! ಆ ಸ್ವಾತಂತ್ರ್ಯದ ಫಲವೇ ಭವಿಷ್ಯದ ರಾಮಮಂದಿರ.
ವೈಭವ ದುಪ್ಪಟ್ಟು: ಅಯೋಧ್ಯೆ ಕುರಿತು ಸುಪ್ರೀಂ ತೀರ್ಪು ಕೊಟ್ಟ ನಂತರ ಮೂಲ ವಿನ್ಯಾಸವನ್ನು ಮಾರ್ಪಡಿಸಲಾಗಿದೆ. ಮೂಲ ಯೋಜನೆಗಿಂತ ದುಪ್ಪಟ್ಟು ವೈಭವದಲ್ಲಿ ರಾಮಮಂದಿರ ಮೈದಳೆಯಲಿದೆ. ನಾಗರ ವಾಸ್ತುಶಿಲ್ಪದಲ್ಲಿ 5 ಗೋಪುರಗಳು ನಿರ್ಮಾಣಗೊಳ್ಳಲಿವೆ ಎಂದು ಮಾಧ್ಯಮಗಳ ಮುಂದೆ ರೂಪುರೇಷೆ ಬಿಚ್ಚಿಟ್ಟರು.
“5 ಗೋಪುರಗಳ ನಿರ್ಮಾಣಕ್ಕೆ ಎರಡು ಕಾರಣ ಗಳಿವೆ. ಮೊದಲನೆಯದಾಗಿ, ಮಂದಿರಕ್ಕೆ ಈಗ ಭೂಮಿಯ ಕೊರತೆ ಇಲ್ಲ. ಎರಡನೆಯದು, ಇಷ್ಟು ಪ್ರಚಾರದ ಅನಂತರ ಭಕ್ತರು ಅಪಾರ ಸಂಖ್ಯೆಯಲ್ಲಿ ದೇಗು ಲಕ್ಕೆ ಭೇಟಿ ನೀಡುತ್ತಾರೆ ಎಂದು ನಿರೀಕ್ಷಿಸಿ ದ್ದೇವೆ. ಮಂದಿರದ ಕೆಲಸ ಮುಂದಿನ 3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಭರವಸೆ ನೀಡಿದರು.
ಸಜ್ಜಾದ ರಾಜಧಾನಿ: ಆ.5ರ ಭೂಮಿಪೂಜೆಯನ್ನು ರಾಷ್ಟ್ರದ ರಾಜಧಾನಿಯ ಜನತೆ ಕಣ್ತುಂಬಿಕೊಳ್ಳಲು ದಿಲ್ಲಿ ಬಿಜೆಪಿ ಮಹಾನಗರದಾದ್ಯಂತ ಬೃಹತ್ ಎಲ್‌ಇಡಿ ಪರದೆಗಳನ್ನು ಸ್ಥಾಪಿಸಲಿದೆ. ಮನೆಮನೆಗಳಲ್ಲಿ ದೀಪ ಬೆಳಗಿಸಲೂ ನಿರ್ಧರಿಸಿದೆ.
ರಾಯಭಾರ ಕಚೇರಿಗಳಿಗೆ 16 ಲಕ್ಷ ಬಿಕಾನೇರ್ ಲಡ್ಡು !
ಸಂತಸದ ಸಂದರ್ಭಗಳಲ್ಲಿ ಸಿಹಿ ಹಂಚುವ ಭಾರತೀಯ ಸಂಪ್ರದಾಯ ಗಮನದಲ್ಲಿಟ್ಟು ಕೊಂಡು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶೇಷ ಸಿದ್ಧತೆ ನಡೆಸಿದೆ. ಭೂಮಿಪೂಜೆ ಯಂದು ದೆಹಲಿಯ ಎಲ್ಲ ವಿದೇಶಿ ರಾಯಭಾರ ಕಚೇರಿಗಳಿಗೆ ಬಿಕಾನೇರ್ ಲಡ್ಡುಗಳನ್ನು ವಿತರಿಸಲು ಟ್ರಸ್ಟ್ ಮುಂದಾಗಿದೆ. ಇದಕ್ಕಾಗಿ 16 ಲಕ್ಷ ಲಡ್ಡು ಒಳ ಗೊಂಡ 4 ಲಕ್ಷ ಪ್ಯಾಕೆಟ್‌ಗಳಿಗೆ ಆರ್ಡರ್ ಮಾಡಲಾಗಿದೆ. ಲಕ್ನೋ, ದಿಲ್ಲಿಯಲ್ಲಿ ಲಡ್ಡುಗಳು ತಯಾರಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ನಿಷ್ಪಕ್ಷ ತನಿಖೆಗೆ ಸಚಿವರು, ಸಿಎಂ ರಾಜೀನಾಮೆ ನೀಡಲಿ: ಗೋವಿಂದ ಕಾರಜೋಳ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.