ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?
Team Udayavani, Dec 9, 2021, 10:05 AM IST
ರಷ್ಯನ್ ನಿರ್ಮಿತ, ಸೇನಾ ಸಾಗಾಟ ಆವೃತ್ತಿಯ “ಎಂಐ-17ವಿ5′, ಜಗತ್ತಿನಲ್ಲೇ ಅತ್ಯಂತ ಸುಧಾರಿತ ಸೇನಾ ಹೆಲಿಕಾಪ್ಟರ್‌ಗಳಲ್ಲಿ ಒಂದು. ಸಾಮರ್ಥ್ಯದಲ್ಲಿ ಬಲಿಷ್ಠವಾಗಿರುವ “ಎಂಐ-17ವಿ5′ ಹೆಲಿಕಾಪ್ಟರ್, ಸೇನಾ ಮುಖ್ಯಸ್ಥರಿಂದ ಪ್ರಧಾನಮಂತ್ರಿ ಅವರ ಪ್ರವಾಸದ ವೇಳೆಯೂ ಬಳಕೆಯಾಗುತ್ತದೆ. ಅಷ್ಟಕ್ಕೂ ಈ
ಹೆಲಿಕಾಪ್ಟರ್‌ನ ವಿಶೇಷತೆಗಳೇನು?
ಬೆಂಗಳೂರು ಏರೋ ಶೋ ಟಚ್
2008ರಲ್ಲಿ ರಷ್ಯಾದ ರೊಸೊಬೊರೊನೆಕ್ಸ್‌ಪೋರ್ಟ್ ಸಂಸ್ಥೆ ಜತೆ “ಎಂಐ-17ವಿ5′ ಹೆಲಿಕಾಪ್ಟರ್ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಇದರಂತೆ 80 ಎಂಐ17ವಿ5 ಹೆಲಿಕಾಪ್ಟರ್ ನಮ್ಮ ಸೇನಾ ಬಳಗ ಸೇರಿದ್ದವು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಶೋದಲ್ಲೂ ಈ ಹೆಲಿಕಾಪ್ಟರ್‌ಗಳು ನಮ್ಮ ವಾಯುಪಡೆಯ ಸಾಮರ್ಥ್ಯವನ್ನು ತೋರ್ಪಡಿಸಿದ್ದವು. ಎರಡನೇ ಒಪ್ಪಂದದ ಅನ್ವಯ ಮತ್ತೆ 71 ಹೆಲಿಕಾಪ್ಟರ್‌ಗಳನ್ನು ರಷ್ಯಾ ಭಾರತಕ್ಕೆ ಕಳುಹಿಸಿಕೊಡಲಿದೆ.
ಸಿಯಾಚಿನ್‌ನಿಂದ ಕಡಲವರೆಗೆ..
ಭಾರತೀಯ ವಾಯುಪಡೆ “ಎಂಐ-17ವಿ5′ ಹೆಲಿಕಾಪ್ಟರನ್ನು ಸಿಯಾಚಿನ್‌ನಿಂದ ಕಡಲ ಸೀಮೆವರೆಗೆ ವಿವಿಧ ಕಾರ್ಯಗಳಿಗೆ ಬಳಸುತ್ತಿದೆ. ಹಿಮಕಣಿವೆ, ಮರುಭೂಮಿ, ಸಾಗರ ವಾತಾವರಣ- ಹೀಗೆ ಯಾವುದೇ ಪ್ರತಿಕೂಲ ಹವಾಮಾನದಲ್ಲೂ ಯಶಸ್ವಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ಇದಕ್ಕಿದೆ.
ಉತ್ಕೃಷ್ಟತೆಗೆ ಹೆಸರಾದ ಹೆಲಿಕಾಪ್ಟರ್
ಗುಣಮಟ್ಟದ ಪೋರ್ಟ್‌ಸೈಡ್ ಡೋರ್ “ಎಂಐ-17ವಿ5′ ಹೆಲಿಕಾಪ್ಟರ್‌ನ ಪ್ರಮುಖ ವಿಶೇಷತೆಗಳಲ್ಲೊಂದು. ಹಾರಾಟದ ವೇಳೆ ಸಿಬ್ಬಂದಿ ತ್ವರಿತ ವೇಗದಲ್ಲಿ ಒಳಧಾವಿಸಲು ಅಥವಾ ಹೊರಕ್ಕೆ ಜಿಗಿಯಲು ಈ ಬಾಗಿಲುಗಳು ಸಹಕರಿಸುತ್ತವೆ. ಸೈನಿಕರು ನಿರ್ಭೀತಿಯಿಂದ ಹಗ್ಗದಿಂದ ಮೇಲೇರಲು ಅಗತ್ಯ ವ್ಯವಸ್ಥೆ, ಪ್ಯಾರಾಚೂಟ್ ಉಪಕರಣಗಳು, ಸರ್ಚ್‌ಲೈಟ್, ಎಫ್ಎಲ್‌ಐಆರ್ ಸಿಸ್ಟಂ ಅಲ್ಲದೆ ಉತ್ಕೃಷ್ಟ ದರ್ಜೆಯ ಎಮರ್ಜೆನ್ಸಿ ಫ್ಲೋಶನ್ ಸಿಸ್ಟಂಗಳನ್ನು ಒಳಗೊಂಡಿದೆ.
ಅತ್ಯಾಧುನಿಕ ಕಾಕ್‌ಪಿಟ್
“ಎಂಐ-17ವಿ5′ ಹೆಲಿಕಾಪ್ಟರ್‌ನ ಕಾಕ್‌ಪಿಟ್ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಿಸ್ಟಂನಿಂದ ನಿರ್ಮಿಸಲಾಗಿದೆ. 4 ಬಹುಕಾರ್ಯೋನ್ಮುಖ ಪರದೆಗಳು, ರಾತ್ರಿ ವೀಕ್ಷಣಾ ಉಪಕರಣ, ವೆಧರ್ ಬೋರ್ಡ್ ಮತ್ತು ಆಟೋ ಪೈಲಟ್ ಸಿಸ್ಟಂಗಳನ್ನೂ ಹೊಂದಿದೆ. ಕಾಕ್‌ಪಿಟ್‌ನಲ್ಲಿನ ಅತ್ಯಾಧುನಿಕ ವರ್ಕ್‌ಲೋಡ್ ಸಿಸ್ಟಂ, ಪೈಲಟ್‌ಗಳ ತೂಕವನ್ನು ಹೆಲಿಕಾಪ್ಟರ್‌ಗೆ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳುತ್ತದೆ.
ಏರ್‌ಕ್ರಾಫ್ಟ್ ವಿಧ
-ಸೇನಾ ಸಾಗಾಟದ ಹೆಲಿಕಾಪ್ಟರ್
-ಬಹು ಬಗೆಯ ಶಸ್ತ್ರಾಸ್ತ್ರ ದಾಳಿ ಸಾಮರ್ಥ್ಯ
ವಿನ್ಯಾಸ
ರಷ್ಯಾದ ಮಿಲ್ ಮಾಸ್ಕೋ, ಹೆಲಿಕಾಪ್ಟರ್ ಪ್ಲಾಂಟ್
ನಿರ್ಮಾಣ
-ಕಾಝನ್ ಹೆಲಿಕಾಪ್ಟರ್ಸ್, ಮಾಸ್ಕೋ
-2021ರವರೆಗೆ ಒಟ್ಟು 60 ಎಂಐ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆ ಬಳಸಿದೆ.
ಎಂಜಿನ್ ಸಾಮರ್ಥ್ಯ ಹೇಗಿತ್ತು?
-“ಎಂಐ-17ವಿ5′ ಹೆಲಿಕಾಪ್ಟರ್‌ನಲ್ಲಿ ಸಾಮಾನ್ಯವಾಗಿ ವಿಕೆ-2500 ಟಬೋì- ಶಾಫ್ಟ್ ಎಂಜಿನ್ ಅಳವಡಿಸ ಲಾಗಿರುತ್ತದೆ.
– ದುರಂತಕ್ಕೀಡಾದ ಈ ಹೆಲಿಕಾಪ್ಟರ್‌ನಲ್ಲಿ ವಿಕೆ-2500 ನವೀಕೃತ ಎಂಜಿನ್ ಅಳವಡಿಸಲಾಗಿತ್ತು. ಇದು ಸಂಪೂರ್ಣ ಡಿಜಿಟಲ್ ನಿಯಂತ್ರಣ ವ್ಯವಸ್ಥೆ ಹೊಂದಿದೆ.
– 2,100 ಅಶ್ವಶಕ್ತಿ ಸಾಮರ್ಥ್ಯ.
– 580 ಕಿ.ಮೀ. ದೂರದವರೆಗೆ ಹಾರಾಡುವ ಸಾಮರ್ಥ್ಯ ಈ ಹೆಲಿಕಾಪ್ಟರ್‌ಗಿತ್ತು. 2 ಸಹಾ ಯಕ ಎಂಜಿನ್ ಬಳಸಿದರೆ ಗರಿಷ್ಠ 1065 ಕಿ.ಮೀ.ವರೆಗೂ ಇದು ಹಾರಾಡುತ್ತದೆ.
ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಇದು!
ದುರಂತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿನ ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯೂ ಇತ್ತು. ಶರ್ಮ್-5 ಕ್ಷಿಪಣಿ, ಎಸ್-8 ರಾಕೆಟ್, 23 ಎಂಎಂ ಮಶೀನ್ ಗನ್, ಪಿಕೆಟಿ ಮಶೀನ್ ಗನ್ ಮತ್ತು ಎಕೆಎಂ ಸಬ್ ಮಶೀನ್‌ಗನ್‌ಗಳು ಇದರಲ್ಲಿದ್ದವು. ಏಕಕಾಲದಲ್ಲಿ 8 ಟಾರ್ಗೆಟ್‌ಗಳನ್ನು ಮತ್ತು ಯಾವುದೇ ಚಲನೆಯುಕ್ತ ಟಾರ್ಗಟನ್ನು ಇವು ಸುಲಭವಾಗಿ ಉಡಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದವು.
ಶಸ್ತ್ರಗಳಿದ್ದರೂ ಸುರಕ್ಷಿತ
ಸ್ವ-ಮುದ್ರಿತ ವ್ಯವಸ್ಥೆಯ ಇಂಧನ ಟ್ಯಾಂಕ್ ಈ ಹೆಲಿಕಾಪ್ಟರ್‌ನ ಇನ್ನೊಂದು ಹೈಲೈಟ್. ಪಾಲಿಯುರೇಥನ್ ಬುರುಗಿನಿಂದ ಆವೃತವಾದ ಈ ಟ್ಯಾಂಕ್ ಯಾವುದೇ ಸ್ಫೋಟದ ವೇಳೆಯೂ ಇಂಧನ ಸೋರಿಕೆಯಿಂದ ಹೆಲಿಕಾಪ್ಟರ್‌ಗೆ ಹೆಚ್ಚು ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅಲ್ಲದೆ, ಹೆಲಿಕಾಪ್ಟರ್‌ನಲ್ಲಿ ಶಸ್ತ್ರಾಸ್ತ್ರಗಳಿದ್ದರೂ ಕಾಕ್‌ಪಿಟ್‌ಗೆ ಅಳವಡಿಸಿದ ಸಂಪೂರ್ಣ ಶಸ್ತ್ರಸಜ್ಜಿತ ಫಲಕಗಳು ಕೂಡ ಹಾನಿಯನ್ನು ನಿಯಂತ್ರಿಸುವ ವ್ಯವಸ್ಥೆ ಹೊಂದಿವೆ.
“ಎಂಐ -17’ನ ಈ ಹಿಂದಿನ ದುರಂತಗಳು
-ಎಂಐ-17′ ಆವೃತ್ತಿಯ ಹೆಲಿಕಾಪ್ಟರ್ ಈ ಹಿಂದೆಯೂ ಕೆಲವು ದುರಂತಗಳಿಗೆ ಸಾಕ್ಷಿಯಾಗಿವೆ.
-2010, ನ.19, ತವಾಂಗ್: ಅರುಣಾಚಲ ಪ್ರದೇಶದ ತವಾಂಗ್ ಸಮೀಪ ತಾಂತ್ರಿಕ ದೋಷದಿಂದ ಪತನ. 12 ಯೋಧರ ಸಾವು.
-2012, ಆ.31, ಜಾಮ್‌ನಗರ : ಗುಜರಾತ್‌ನ ಜಾಮ್‌ನಗರ ವಾಯುನೆಲೆಯ ಆಗಸದಲ್ಲಿ ಎರಡು ಎಂಐ-17 ಕಾಪ್ಟರ್‌ಗಳ ಡಿಕ್ಕಿ; 9 ಯೋಧರ ಸಾವು
-2013, ಜೂ.25, ಡೆಹ್ರಾಡೂನ್: ಎಂಐ- 17 ವಿ5 ಹೆಲಿಕಾಪ್ಟರ್ ದುರಂತಕ್ಕೀಡಾಗಿ, ಐವರು ಸಿಬ್ಬಂದಿ ದುರ್ಮರಣ.
-2017, ಅಕ್ಟೋಬರ್ 6, ತವಾಂಗ್: ತಾಂತ್ರಿಕ ದೋಷದಿಂದ ಪತನ; 6 ಯೋಧರು ಅಸುನೀಗಿದ್ದರು.
-2018, ಜುಲೈ 14, ಚಮೋಲಿ: ಉತ್ತರಾ ಖಂಡದ ಚಮೋಲಿಯಲ್ಲಿ ಸೇನಾಭ್ಯಾಸದ ವೇಳೆ ಲ್ಯಾಂಡಿಂಗ್ ಬಳಿಕ ಸ್ಫೋಟ. ಸಾವು-ನೋವು ಇಲ್ಲ
ಸಾಮರ್ಥ್ಯ
-13, 000 ಕಿಲೋ ಗರಿಷ್ಠ ಉಡ್ಡಯನ ತೂಕ
-36 ಸೈನಿಕರನ್ನು ಹೊತ್ತೂಯ್ಯುವ ಶಕ್ತಿ
-4, 500 ಕಿಲೋ ಲೋಡಿಂಗ್ ಸಾಮರ್ಥ್ಯ
-6, 000 ಮೀಟರ್ ಎತ್ತರದವರೆಗೆ ಗರಿಷ್ಠ ಹಾರಾಟ
-250ಕಿ.ಮೀ. ಗರಿಷ್ಠ ವೇಗ (ಗಂಟೆಗೆ)
-580ಕಿ.ಮೀ.ವರೆಗೆ ಹಾರಾಡುವ ಸಾಮರ್ಥ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.