ಮಿಗ್-17 ಧ್ವಂಸ ಪ್ರಕರಣ ತನಿಖಾ ವರದಿ ಸದ್ಯದಲ್ಲೇ ಸಲ್ಲಿಕೆ
Team Udayavani, May 22, 2019, 6:12 AM IST
ಹೊಸದಿಲ್ಲಿ: ಇದೇ ವರ್ಷ ಫೆ. 27 ರಂದು ಭಾರತದಿಂದ ಆಗಸಕ್ಕೆ ಚಿಮ್ಮಿದ್ದ ಮಿಗ್-17 ಯುದ್ಧವಿಮಾನವನ್ನು ಶತ್ರುವಿಮಾನ ವೆಂದು ತಪ್ಪಾಗಿ ಭಾವಿಸಿ ಭಾರತೀಯ ವಾಯು ಪಡೆಯೇ (ಐಎಎಫ್) ಹೊಡೆದುರುಳಿಸಿರುವ ಪ್ರಕರಣದ ತನಿಖಾ ವರದಿಯನ್ನು ಸದ್ಯದಲ್ಲೇ ಅಂತಿಮ ಗೊಳಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಿಗ್-17 ಯುದ್ಧ ವಿಮಾನ ಹೊಡೆದುರುಳಿಸಿದಾಗ ಅದರಲ್ಲಿದ್ದ ಆರು ಸಿಬಂದಿ ಸೇರಿ, ನೆಲದ ಮೇಲಿದ್ದ ಒಬ್ಬ ನಾಗರಿಕನೂ ಹತನಾಗಿದ್ದಾನೆ. ಈ ಪ್ರಕರಣವನ್ನು ವಾಯುಪಡೆ ಗಂಭೀರವಾಗಿ ತೆಗೆದುಕೊಂಡಿದ್ದು ತಪ್ಪಿತಸ್ಥರ ವಿರುದ್ಧ 1950ರ ವಾಯುಪಡೆ ಕಾಯ್ದೆಯ ಪ್ರಕಾರ, ಹತ್ಯೆ ಪ್ರಕರಣ ದಾಖಲಿಸಲಾಗುತ್ತದೆ ಎಂದೂ ಮೂಲಗಳು ತಿಳಿಸಿವೆಯೆಂದು ಎನ್‌ಡಿಟಿವಿ ವರದಿ ಮಾಡಿದೆ.
ಫೆ. 26ರಂದು ಭಾರತೀಯ ವಾಯುಪಡೆ ಬಾಲಕೋಟ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಫೆ. 27ರಂದು ಪಾಕಿಸ್ಥಾನದ ಸುಮಾರು 24 ಯುದ್ಧ ವಿಮಾನಗಳು ಭಾರತದ ಗಡಿ ನಿಯಂತ್ರಣ ರೇಖೆ ದಾಟಿ ಬಂದು ಭೂಸೇನೆಯ ಕ್ಯಾಂಪ್‌ಗ್ಳ ಮೇಲೆ ದಾಳಿ ನಡೆಸಲಾರಂಭಿಸಿತ್ತು. ಆ ವಿಮಾನ ಗಳನ್ನು ಹಿಮ್ಮೆಟ್ಟಿಸಲು ಐಎಎಫ್ನ ವಿಮಾನಗಳು ಆಗಸಕ್ಕೆ ಹಾರಿದ್ದವು. ಅದರಲ್ಲೊಂದು ಮಿಗ್-17 ಸಹ ಆಗಿತ್ತು.
ವಾಯು ಮಂಡಲದಲ್ಲಿ ಕೆಳ ಹಂತದಲ್ಲಿ ಸಾಗುತ್ತಿದ್ದ ಈ ವಿಮಾನವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿರುವ ರೇಡಾರ್‌ಗಳು ತೋರಿಸಿದ್ದವು. ಇದನ್ನು ಪರೀಕ್ಷಿಸಲು ಮುಂದಾಗದ ಶ್ರೀನಗರದ ವಾಯುಪಡೆ ನೆಲೆಯ ಅಧಿಕಾರಿ, ತಕ್ಷಣವೇ ಅದನ್ನು ಧ್ವಂಸಗೊಳಿಸುವಂತೆ ಆದೇಶಿಸಿದ್ದರೆಂದು ಆಪಾದಿಸಲಾಗಿದೆ. ಇದೇ ವೇಳೆ, ಶ್ರೀನಗರ ಸೇನಾನೆಲೆಯ ಏರ್ ಆಫೀಸರ್ ಕಮಾಂಡಿಂಗ್‌ರನ್ನು ವರ್ಗಾವಣೆ ಮಾಡಿ ಮಂಗಳವಾರ ವಾಯುಪಡೆ ಆದೇಶ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.