![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 20, 2019, 6:00 AM IST
ಹೊಸದಿಲ್ಲಿ: ಕೃಷಿ ಚಟುವಟಿಕೆಗಳಿಗೆ ಮಹತ್ವ ಎನಿಸಿರುವ ಮುಂಗಾರು ಪೂರ್ವ ವರ್ಷಧಾರೆ ದೇಶದ ಅಲ್ಲಲ್ಲಿ ಆರಂಭವಾಗಿದ್ದರೂ ಈ ಬಾರಿ ಇದರ ಪ್ರಮಾಣ ಸರಾಸರಿಗಿಂತ ಶೇ. 22ರಷ್ಟು ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಬಿದ್ದಿರುವ ಮುಂಗಾರುಪೂರ್ವ ಮಳೆ ಶೇ. 46ರಷ್ಟು ಕೊರತೆಯಾಗಿದೆ ಎಂದು ತಿಳಿಸಿದೆ.
ದೇಶದೆಲ್ಲೆಡೆ ಮಾ. 1ರಿಂದ 15ರ ವರೆಗೆ ಆಗಿರುವ ಮುಂಗಾರು ಪೂರ್ವ ಮಳೆಯ ಸರಾಸರಿ ಪ್ರಮಾಣ 96.8 ಮಿ.ಮೀ.ಗಳಷ್ಟಿದೆ. ಇದು ಶೇ. 22ರಷ್ಟು ಕೊರತೆ ಎನಿಸಿದ್ದು, ಮಾ. 1ರಿಂದ ಎ. 24ರ ಅವಧಿಯಲ್ಲಿ ಸುರಿದ ಮಳೆಯಲ್ಲಿ ಶೇ. 27ರಷ್ಟು ಕೊರತೆ ಉಂಟಾಗಿದೆ. ಈ ಕೊರತೆ ಈಗಲೂ ಮುಂದುವರಿದಿದ್ದು, ಅದಕ್ಕೆ ಇತ್ತೀಚೆಗೆ ದೇಶದ ಪೂರ್ವ, ಈಶಾನ್ಯ ರಾಜ್ಯಗಳಲ್ಲಿ ಕಾಣಿಸಿಕೊಂಡ ತೀವ್ರ ಮಳೆಯೇ ಕಾರಣ ಎಂದು ಇಲಾಖೆ ತಿಳಿಸಿದೆ.
ಮುಂಗಾರು ಪ್ರಗತಿ
ಈ ನಡುವೆ ಆಗ್ನೇಯ ದಿಕ್ಕಿನ ಕಡೆಯಿಂದ ಬೀಸುತ್ತಿರುವ ಮುಂಗಾರು ಮಾರುತಗಳು ದಕ್ಷಿಣ ಅಂಡಮಾನ್ ಸಾಗರ ವನ್ನು ಮುಟ್ಟಿದ್ದು, ಇನ್ನು ಎರಡು-ಮೂರು ದಿನಗಳಲ್ಲಿ ಇವು ಉತ್ತರ ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ದ್ವೀಪಗಳನ್ನು ತಲುಪುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.