mAadhaar ಆಧಾರ್ ಮೊಬೈಲ್ ಆ್ಯಪ್ ; ಹೊಸ ಆಯ್ಕೆಯೊಂದಿಗೆ ಬಳಕೆಗೆ ಮುಕ್ತ
Team Udayavani, Dec 1, 2019, 9:50 PM IST
ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಐಒಎಸ್ ಮತ್ತು ಆ್ಯಂಡ್ರಾಯ್ಡ ಸ್ಮಾರ್ಟ್‌ಫೋನ್‌ಗಳಿಗೆ ತನ್ನ ಎಂಆಧಾರ್ (mAadhaar) ಆ್ಯಪ್ ಅನ್ನು ಪರಿಷ್ಕರಿಸಿ ಬಿಡುಗಡೆಗೊಳಿಸಿದೆ. ಇದು ತನ್ನ ಬಳಕೆದಾರರಿಗೆ ಕೆಲವೊಂದು ಹೊಸ ಫೀಚರ್‌ಗಳನ್ನು ಪರಿಚಯಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಿಂದ ಅಥವಾ ಐಫೋನ್‌ಗಳಿಗೆ ಆ್ಯಪಲ್ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇಲ್ಲಿ ನೂತನ ಆ್ಯಪನಲ್ಲಿ ಲಭ್ಯವಿರುವ ಸೇವೆಗಳನ್ನು ನೀಡಲಾಗಿದೆ.
ಬಳಕೆ ಹೇಗೆ?
ಈ ಆಪ್‌ಗೆ ಲಾಗ್‌ಇನ್ ಆಗಬೇಕು ಮತ್ತು ನಿಮ್ಮ ಮೊಬೈಲ್ ನಂಬರ್‌ನ ವೆರಿಫಿಕೇಷನ್ ಗೊಳ್ಳಬೇಕು. ಇದನ್ನು ಮಾಡುವುದಕ್ಕಾಗಿ ನೀವು ಮೇಲ್ಬಾಗದ ಬ್ಯಾನರ್ ನಲ್ಲಿರುವ Register your Aadaar ನ್ನು ಕ್ಲಿಕ್ಕಿಸಬೇಕು. ಬಳಿಕ ಇದು ನಿಮ್ಮನ್ನು ಹೊಸ ಪೇಜ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದು ಮಾಡಬೇಕು. ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಬಂದ ನಂತರ, ಅದನ್ನು ಆಪ್‌ನಲ್ಲಿ ಎಂಟರ್ ಮಾಡಬೇಕು. ಇದು ಪೂರ್ಣಗೊಂಡ ಬಳಿಕ ಆಪ್ ಲಿಂಕ್ ಕೆಲಸ ಪೂರ್ಣವಾಗುತ್ತದೆ. ಇದು ಪೂರ್ಣಗೊಂಡಿದೆ ಎಂಬುದನ್ನು ದೃಢೀಕರಿಸಲು ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಆಧಾರ್ ಕಾರ್ಡ್‌ನ ಅಧಿಕೃತ ಪ್ರತಿಯೊಂದು ಲಭ್ಯವಿರುತ್ತದೆ.
ಬಹುಭಾಷಿಕ ಆ್ಯಪ್
ಇಂಗ್ಲಿಷ್, ಹಿಂದಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಪಂಜಾಬಿ, ಮರಾಠಿ, ಒಡಿಯಾ, ಅಸ್ಸಾಮೀಸ್ ಮತ್ತು ಬೆಂಗಾಲಿ ಹೀಗೆ 13 ಭಾಷೆಗಳು ಈ ಆ್ಯಪ್‌ನಲ್ಲಿ ಉಪಲಬ್ಧವಿವೆ. ನಿಮ್ಮ ಇಚ್ಚೆಯ ಭಾಷೆಯನ್ನು ನೀವು ಆಯ್ದುಕೊಳ್ಳಬಹುದಾಗಿದೆ. ನೀವು ಕನ್ನಡ ಭಾಷೆಯನ್ನು ಆಯ್ದುಕೊಂಡು ಬಳಿಕ ಬೇರೆ ಭಾಷೆಗೆ ಬದಲಾಯಿಸಬಹುದಾಗಿದೆ.
ಆಧಾರ್ ಕಳೆದ ಹೋದರೆ ಇಲ್ಲಿದೆ ಪರಿಹಾರ
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಎಲ್ಲೋ ಕಳೆದುಹೋದರೆ ಈ ಹೊಸ ಎಂಆಧಾರ್ ಆಪ್‌ನಲ್ಲಿ ಹೊಸ ಆಧಾರ್ ಕಾರ್ಡ್‌ನ ಪ್ರತಿಗೆ ಮನವಿ ಮಾಡಬಹುದಾಗಿದೆ. ಆಪ್‌ನ ಮೊದಲ ಪೇಜ್‌ನಲ್ಲಿ Order Aadhaar Reprint ಆಯ್ಕೆ ಇದ್ದು, ಹೊಸ ಆರ್ಧಾ ಕಾರ್ಡ್ ಪ್ರಿಂಟ್ ಮಾಡಿಸಿಕೊಳ್ಳಬಹುದು.
ನಿಮ್ಮ ಆಧಾರ್ ವಿವರಗಳನ್ನು ಇಲ್ಲಿ ನಮೂದು ಮಾಡಬೇಕು. ಇದಾದ ಅನಂತರ ನೀವು ಉಳಿದೆಲ್ಲಾ ವಿವರಗಳನ್ನು ಎಂಟರ್ ಮಾಡಬೇಕು. ಇದಕ್ಕೆ 50 ರೂ. ಮೊತ್ತವನ್ನು ಪಾವತಿಸಬೇಕಾಗಿದೆ. ಇದರಲ್ಲಿ ಸ್ಪೀಡ್ ಪೋಸ್ಟ್ ಚಾರ್ಜ್ ಮತ್ತು ಜಿಎಸ್‌ಟಿ ಒಳಗೊಂಡಿರುತ್ತದೆ. UIDAI ಪ್ರಿಂಟ್ ಆಗಿರುವ ಪ್ರತಿಯನ್ನು ನಿಮಗೆ ಪ್ರಿಂಟ್ ಮಾಡಿ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ. ಇದು ಸುಮಾರು ಐದು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ.
ತಿದ್ದುಪಡಿಗೆ ಅವಕಾಶ
ಈಗಾಗಲೇ ನೀಡಲಾದ ಆಧಾರ್ ಕಾರ್ಡ್‌ನಲ್ಲಿ ಏನಾದರೂ ಮಾಹಿತಿಗಳು ಅಪ್‌ಡೇಟ್ ಆಗದೇ ಇದ್ದರೆ ಅಥವ ತಪ್ಪಾಗಿ ಮುದ್ರಣವಾಗಿದ್ದರೆ, ನೀವು ಈ ನೂತನ mAadhaar ಆ್ಯಪ್‌ನಲ್ಲಿ ತಿದ್ದಪಡಿಗೊಳಿಸುವುದಕ್ಕೆ ಅವಕಾಶ ನೀಡಲಾಗಿದೆ. ಉದಾ: ನಿಮ್ಮ ವಿಳಾಸ, ಮೇಲ್ ಮೊದಲಾದವುಗಳನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.
ಬಯೋ ಮೆಟ್ರಿಕ್ ಲಾಕ್
ಪ್ರೈವೆಸಿ/ಖಾಸಗಿತನಕ್ಕಾಗಿ ಬಯೋಮೆಟ್ರಿಕ್ಸ್ ಭದ್ರತೆಯನ್ನು ಒದಗಿಸಲಾಗುತ್ತದೆ. ನಿಮ್ಮ ಆಧಾರ್ ವಿವರವನ್ನು ಯಾರಿಗೂ ನೀಡಲು ಬಯಸದೇ ಇದ್ದಲ್ಲಿ ನೀವು ಸರಳವಾಗಿ ಆಪ್‌ನ ಮೈ ಆಧಾರ್ ವಿಭಾಗದಲ್ಲಿ ನಿಮ್ಮ ಆಧಾರ್ ವಿವರವನ್ನು ತಾತ್ಕಾಲಿಕವಾಗಿ ಲಾಕ್ ಮತ್ತು ಅನ್‌ಲಾಕ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
ದೃಢೀಕರಣ ಮಾಹಿತಿ
ಒಂದು ವೇಳೆ ನಿಮ್ಮ ಆಧಾರ್ ವಿವರಗಳು ನಿಮ್ಮ ಕಣ್ತಪ್ಪಿನಿಂದ ಅಥವ ನಿಮಗೆ ಅರಿವಿಲ್ಲದೇ ಎಲ್ಲೋ ಬಳಕೆಯಾಗಿದೆ ಎಂದು ನಿಮ್ಮಲ್ಲಿ ಅನಿಸಿದರೆ ನೀವು ಎಂಆಧಾರ್ ಆಪ್ ತೆರಳಿ ಮತ್ತು ಮೈ ಆಧಾರ್ ವಿಭಾಗದಲ್ಲಿ ಅuಠಿಜಛಿnಠಿಜಿcಚಠಿಜಿಟn ಏಜಿsಠಿಟ್ಟy’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ನೀವು ಯಾವೆಲ್ಲಾ ದಿನಾಂಕದಂದು ನಿವು ಆಧಾರ್ ವಿವರಗಳನ್ನು ತೆರೆದು ನೋಡಿದ್ದೀರಿ ಎಂಬ ಎಲ್ಲಾ ಮಾಹಿತಿಯನ್ನು ಪಡೆಯಬಹುದು.
3 ಪ್ರೊಫೈಲ್ ಸೇರಿಸಬಹುದು
ಮಲ್ಟಿ-ಪ್ರೊಫೈಲ್ ಸೇವೆಯು ಎಂಆಧಾರ್‌ನಲ್ಲಿ ಲಭ್ಯವುದೆ. ಒಂದೇ ಮೊಬೈಲ್ ಸಂಖ್ಯೆಯಲ್ಲಿ 3 ಆಧಾರ್ ಕಾರ್ಡ್‌ಗಳನ್ನು ತೆರೆಯಲಾಗಿದ್ದರೆ ಆ ಮೂರು ಆಧಾರ್ ಕಾರ್ಡ್‌ಗಳನ್ನು ಈ ಒಂದೇ ಆ್ಯಪ್‌ನಲ್ಲಿ ದಾಖಲಿಸಬಹುದು. ಆದರೆ ಗರಿಷ್ಠ 3 ಕಾರ್ಡ್‌ಗಳನ್ನು ಮಾತ್ರ ಇಟ್ಟುಕೊಳ್ಳಬಹುದಾಗಿದೆ.
ಗುರುತಾಗಿ ಬಳಸಿ
ರೈಲುಗಳಲ್ಲಿ ಅಥವ ಇತರ ಪ್ರಯಾಣಗಳಲ್ಲಿ ಗುರುತಿನ ಚೀಟಿಯನ್ನು ನಮ್ಮಿಂದ ದಾಖಲೆಯ ಸಲುವಾಗಿ ಅಪೇಕ್ಷಿಸಲಾಗುತ್ತದೆ. ಇಂತಹ ಕಡೆ ಎಂಆಧಾರ್ ಆ್ಯಪ್ ಅನ್ನು ಬಳಸಬಹುದಾಗಿದೆ.
#AadhaarInNews
UIDAI Launches More Secure mAadhaar App for Android, iOS https://t.co/goLRH0FVJi— Aadhaar (@UIDAI) November 28, 2019
You can download your Aadhaar anytime anywhere from your #mAadhaar app. The OTP for download is sent to the mobile number registered in the selected Aadhaar.
For more services, download the #NewmAadhaarApp from: https://t.co/62MEOeR7Ff (Android) https://t.co/GkwPFzuxPQ (iOS) pic.twitter.com/yXskkNysH7— Aadhaar (@UIDAI) November 28, 2019
Your #mAadhaar app shows all nearby Aadhaar Kendra on the map. You may also search for one using the search options on the top.
For more services, download and install the #NewmAadhaarApp from: https://t.co/62MEOeR7Ff (Android) https://t.co/GkwPFzuxPQ (iOS) pic.twitter.com/73qxZz7H9s— Aadhaar (@UIDAI) November 26, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.