ನೌಕಾಯಾನ ಖಾತೆಗೆ ಸಿಗಲಿದೆ ಹೊಸ ಹೆಸರು
Team Udayavani, Nov 9, 2020, 1:16 AM IST
ಅಹ್ಮದಾಬಾದ್: ನೌಕಾಯಾನ ಖಾತೆಯನ್ನು ಶೀಘ್ರದಲ್ಲಿಯೇ ಬಂದರು, ನೌಕಾಯಾನ ಮತ್ತು ಜಲಸಾರಿಗೆ ಸಚಿವಾಲಯ ಎಂದು ಪುನರ್‌ನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೂರತ್‌ನ ಹಝಾರಿಯಾದಿಂದ ಭಾವಾನಗರದ ಘೋ ಯಾವರೆಗೆ ಹಡಗು ಸೇವೆ- ರೋ ಪಾಕ್ಸ್ (Ro-Pax) ಸೇವೆಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು. ದೇಶದ ಸಮುದ್ರ ಮಾರ್ಗಗಳನ್ನು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಳಕೆ ಮಾಡಲಾಗುತ್ತದೆ. ಸರಕಾರದ ಇಂಥ ಪ್ರಯತ್ನಕ್ಕೆ ಇಂಬು ಕೊಡಲು ನೌಕಾಯಾನ ಸಚಿವಾಲಯವನ್ನು ಶೀಘ್ರ ದಲ್ಲಿಯೇ ಬಂದರು, ನೌಕಾಯಾನ ಮತ್ತು ಜಲ ಸಾರಿಗೆ ಸಚಿವಾಲಯ ಎಂದು ಪುನರ್ ನಾಮ ಕರಣ ಮಾಡಲಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನೌಕಾಯಾನ ಸಚಿವಾಲಯವೇ ಬಂದರು ಮತ್ತು ಜಲಸಾರಿಗೆಯನ್ನು ನೋಡಿ ಕೊಳ್ಳುÛತ್ತದೆ. ಭಾರತದಲ್ಲಿ ನೌಕಾಯಾನ ಸಚಿವಾ ಲಯಕ್ಕೆ ಬಂದರು ಮತ್ತು ಜಲಸಾರಿಗೆಗೆ ಸಂಬಂಧಿಸಿದಂತೆ ಹೆಚ್ಚಿನ ಕೆಲಸದ ಒತ್ತಡ ಇರುವುದಿಲ್ಲ. ಹೆಸರಿನಲ್ಲಿ ಸ್ಪಷ್ಟತೆ ಇದ್ದರೆ ಕೆಲಸದಲ್ಲಿಯೂ ನಿಖರತೆ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ರೋ ಪಾಕ್ಸ್ ಸೇವೆಯಿಂದಾಗಿ ಎರಡೂ ಸ್ಥಳ ಗಳ ನಡುವೆ ಇರುವ 375 ಕಿಮೀ ಪ್ರಯಾಣದ ದೂರವನ್ನು ಸಮುದ್ರ ಮಾರ್ಗದ ಮೂಲಕ 90 ಕಿಮೀ ದೂರಕ್ಕೆ ಇಳಿದಂತಾಗುತ್ತದೆ. ಮತ್ತು 2 ಗಂಟೆ ಗಳಿಗೆ ತಗ್ಗಿದಂತಾಗುತ್ತದೆ.
ನೌಕೆಯ ಬಲ?
30- ಟ್ರಕ್
100- ಕಾರುಗಳು
500- ಪ್ರಯಾಣಿಕರು
34- ನೌಕೆಯ ಸಿಬಂದಿ ಇರುವ ಸಾಮರ್ಥ್ಯ
03 – ದಿನಕ್ಕೆ ಮೂರು ಬಾರಿ ಸಂಚಾರ
5 ಲಕ್ಷ – ವಾರ್ಷಿಕವಾಗಿ ಸಂಚರಿಸುವ ಪ್ರಯಾಣಿಕರು
50 ಸಾವಿರ- ದ್ವಿಚಕ್ರ ವಾಹನಗಳು
30 ಸಾವಿರ- ಟ್ರಕ್‌ಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.