ರಾಹುಲ್‌ಗೆ ಅಂಟಿಕೊಂಡ ಹಿಂದೂಯೇತರ ವಿವಾದ
Team Udayavani, Nov 30, 2017, 6:00 AM IST
ಅಹ್ಮದಾಬಾದ್: ಗುಜರಾತ್ ಚುನಾವಣ ಪ್ರಚಾರದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ
ಹಿಂದೂ ವಿವಾದ ಅಂಟಿಕೊಂಡಿದೆ.
ಬುಧವಾರವಷ್ಟೇ ಸೋಮನಾಥ ದೇಗುಲಕ್ಕೆ ಪಕ್ಷದ ಮತ್ತೂಬ್ಬ ನಾಯಕ ಅಹ್ಮದ್ ಪಟೇಲ್ ಜತೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲೇ ಇದ್ದ “ಹಿಂದೂಯೇತರ ರಿಜಿಸ್ಟ್ರಿ’ ಪುಸ್ತಕ ದಲ್ಲಿ ಸಹಿ ಮಾಡಿದ್ದಾರೆ ಎಂದು ಹೇಳಲಾಗು ತ್ತಿದೆ. ಈ ಸಂಬಂಧ ರಿಜಿಸ್ಟರ್ ಪುಟದ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಾಕಿರುವ ಬಿಜೆಪಿ, ರಾಹುಲ್ ತಾನು ಹಿಂದೂ ಅಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಛೇಡಿಸಿದೆ.
ಇದಾದ ಬಳಿಕ ಟ್ವಿಟರ್‌ನಲ್ಲೂ ಸೋಮನಾಥ ದೇಗುಲ ಹೆಸರಲ್ಲಿ ಟ್ರೆಂಡಿಂಗ್ ಶುರುವಾಗಿದ್ದು ಪರ-ವಿರೋಧಗಳ ಚರ್ಚೆಯೂ ಆರಂಭ ವಾಗಿದೆ. ವಿವಾದ ಬಿಸಿಯೇರುತ್ತಿದ್ದಂತೆ ಎಚ್ಚೆತ್ತು ಕೊಂಡ ಕಾಂಗ್ರೆಸ್ ನಾಯಕರು, ರಾಹುಲ್ ಯಾವುದೇ ರಿಜಿಸ್ಟ್ರಿಗೆ ಸಹಿ ಮಾಡಿಲ್ಲ. ಅವರ ಕೈಬರಹವೂ ಆ ರೀತಿ ಇಲ್ಲ ಎಂದಿರುವುದಲ್ಲದೇ ಅದು ನಕಲಿ ರಿಜಿಸ್ಟ್ರಿಯ ಫೋಟೋ ಎಂಬ ಸ್ಪಷ್ಟನೆಯನ್ನೂ ನೀಡಿದೆ.
ಬುಧವಾರ ದೇಗುಲಕ್ಕೆ ರಾಹುಲ್ ಬಂದು ಹೋಗುತ್ತಿದ್ದಂತೆ ಅಲ್ಲಿನ ರಿಜಿಸ್ಟರ್ ಪುಟದ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಾಕಿರುವ ಬಿಜೆಪಿಯ ಅಮಿತ್ ಮಾಳವೀಯ, “ರಾಹುಲ್ ತಾವು ಹಿಂದೂ ಅಲ್ಲ ಎಂದು ಕೊನೆಗೂ ಒಪ್ಪಿಕೊಂಡಿದ್ದಾರೆ. ಅವರು ಹಿಂದೂ ಅಲ್ಲ ದಿದ್ದರೆ, ಚುನಾವಣೆಯ ಈ ಸಂದರ್ಭ ಗಳಲ್ಲಿ ದೇಗುಲಗಳಿಗೆ ಭೇಟಿ ನೀಡಿ ಹಿಂದೂ ಮತದಾರರನ್ನು ಏಕೆ ಮೂರ್ಖರನ್ನಾಗಿಸು ತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪತ್ರಿಕಾಗೋಷ್ಠಿ ನಡೆಸಿ ಉತ್ತರ ಕೊಟ್ಟ ಪಕ್ಷದ ವಕ್ತಾರ ರಣದೀಪ್ ಸುಜೇìವಾಲ, “ರಾಹುಲ್ ಗಾಂಧಿ ಒಬ್ಬ ಹಿಂದೂ. ರಾಹುಲ್ ಕೇವಲ ಹಿಂದೂ ಅಷ್ಟೇ ಅಲ್ಲ, ಅವರು ಜನಿವಾರ ಧಾರಿ(ಬ್ರಾಹ್ಮಣ) ಹಿಂದೂ ಆಗಿದ್ದಾರೆ. ಈ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿ ಕೊಳ್ಳಬಾರದು’ ಎಂದು ಹೇಳಿದ್ದಾರೆ.
ಈ ಮಧ್ಯೆ, ರಾತ್ರಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ನ ದೀಪೇಂದ್ರ ಹೂಡಾ, “”ರಾಹುಲ್ ಗಾಂಧಿ ಮಹಾ ಶಿವಭಕ್ತ. ಅವರು ಸತ್ಯವನ್ನು ನಂಬುತ್ತಾರೆ. ಹಾಗಾಗಿ, ಸತ್ಯವೇ ಜಯಿಸುತ್ತದೆ” ಎಂದರಲ್ಲದೆ, “”ಮತ ದಾರರ ಗಮನವನ್ನು ರಾಹುಲ್ ಕಡೆಯಿಂದ ವಿಮುಖಗೊಳಿಸಲು ಬಿಜೆಪಿ ಇಂಥ ತಂತ್ರಗಳನ್ನು ಅನುಸರಿ ಸುತ್ತಿದೆ” ಎಂದು ಟೀಕಿಸಿದರು. ಅಲ್ಲದೆ, ಈ ರಿಜಿಸ್ಟ್ರಿಯೇ ನಕಲಿ ಎಂದು ಹೇಳಿದರು.
ಆದರೆ, ಪರಿಸ್ಥಿತಿ ತಾರಕಕ್ಕೇರಿದ್ದನ್ನು ಗಮನಿಸಿದ ಗುಜರಾತ್‌ನ ಹಿರಿಯ ಪತ್ರಕರ್ತ, ಬ್ರಜೇಶ್ ಕೆ.ಸಿಂಗ್ ಅವರು ಸ್ಪಷ್ಟನೆ ನೀಡಿದ್ದು, ಇದು ಕಾಂಗ್ರೆಸ್ ಮಾಧ್ಯಮ ಸಂಯೋಜಕ ಮನೋಜ್ ತ್ಯಾಗಿ ಅವರ ತಪ್ಪು ಎಂದಿದ್ದಾರೆ. ಅಲ್ಲದೆ ರಾಹುಲ್ ಅವರೇ ಸಹಿ ಮಾಡಿದ್ದರೆ, ರಾಹುಲ್ ಜೀ ಎಂದು ಏಕೆ ಬರೆಯುತ್ತಿದ್ದರು ಎಂಬ ಪ್ರಶ್ನೆಗಳನ್ನೂ ಕಾಂಗ್ರೆಸ್ ನಾಯಕರು ಕೇಳಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲಿ ತ್ಯಾಗಿ ಅವರು ಇದಕ್ಕೆ ತದ್ವಿರುದ್ಧವಾದ ಸ್ಪಷ್ಟನೆ ನೀಡಿದರು. ತಾವು ರಿಜಿಸ್ಟ್ರಿಯಲ್ಲಿ ಕೇವಲ ತಮ್ಮ ಹೆಸರನ್ನು ಮಾತ್ರ ಬರೆದಿದ್ದು, ಬೇರ್ಯಾರ ಹೆಸರನ್ನೂ ಬರೆಯಲಿಲ್ಲ. ರಾಹುಲ್ ದೇಗುಲಕ್ಕೆ ಭೇಟಿ ನೀಡಿ ಹೊರಬಂದ ಬಳಿಕ ಯಾರೋ ಈ ಹೆಸರುಗಳನ್ನು ಇದರಲ್ಲಿ ಸೇರಿಸಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ಮತ್ತಷ್ಟು ಗೋಜಲನ್ನಾಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.