ಹೆಚ್ಚಲಿದೆ ಸೋಂಕು ಸಂಖ್ಯೆ ; 2-3 ತಿಂಗಳಲ್ಲಿ ಗೋಚರಿಸಲಿದೆ ಪರಿಣಾಮ: ಏಮ್ಸ್‌ ನಿರ್ದೇಶಕ


Team Udayavani, Jun 8, 2020, 10:19 AM IST

ಹೆಚ್ಚಲಿದೆ ಸೋಂಕು ಸಂಖ್ಯೆ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಜಗತ್ತಿಡೀ ವ್ಯಾಪಿಸಿ ಇಡೀ ಮನುಕುಲವನ್ನೇ ನಡುಗಿಸಿರುವ ಕೋವಿಡ್ ಸದ್ಯಕ್ಕಂತೂ ಭಾರತದಿಂದ ಕಾಲ್ಕಿಳುವ ಲಕ್ಷಣ ಗೋಚರಿಸುತ್ತಿಲ್ಲ. ಇನ್ನೂ ಕೆಲವು ತಿಂಗಳ ಕಾಲ ಈ ವೈರಸ್‌ ತನ್ನ ಪ್ರತಾಪ ಮುಂದುವರಿಸಲಿದೆ. ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಭಾರತದಲ್ಲಿ ಸೋಂಕು ಉತ್ತುಂಗಕ್ಕೇರಲಿದೆ ಎಂದು ದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ| ರಣದೀಪ್‌ ಗುಲೇರಿಯಾ ಹೇಳಿದ್ದಾರೆ.

ರವಿವಾರ ಈ ಕುರಿತು ಮಾತನಾಡಿದ ಅವರು, “ಸೋಂಕಿನ ಉತ್ತುಂಗದ ಮಟ್ಟಕ್ಕೆ ನಾವು ಇನ್ನಷ್ಟೇ ತಲುಪ ಬೇಕಿದೆ. ದೇಶದಲ್ಲಿ ಜನಸಂಖ್ಯೆ ಅಧಿಕವಾಗಿರುವ ಕಾರಣ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುವುದರಲ್ಲಿ ಸಂದೇಹವಿಲ್ಲ. ನಾವು ಭಾರತವನ್ನು ಇತರ ಐರೋಪ್ಯ ದೇಶಗಳಿಗೆ ಹೋಲಿಸಲೂ ಆಗುವುದಿಲ್ಲ. ಐರೋಪ್ಯ ಒಕ್ಕೂಟದ ಎರಡರಿಂದ ಮೂರು ದೇಶಗಳನ್ನು ಒಟ್ಟು ಸೇರಿಸಿದರೆ, ಅವುಗಳ ಒಟ್ಟಾರೆ ಜನಸಂಖ್ಯೆಗೆ ಭಾರತದ ಜನಸಂಖ್ಯೆ ಸಮವಾಗುತ್ತದೆ. ಭಾರತದಲ್ಲಿ ಇನ್ನು 2-3 ತಿಂಗಳಲ್ಲಿ ಸೋಂಕು ಉತ್ತುಂಗಕ್ಕೇರಲಿದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಸೋಂಕು ಉತ್ತುಂಗಕ್ಕೆ ತಲುಪಬಹುದು’ ಎಂದಿದ್ದಾರೆ.

ಆಸ್ಪತ್ರೆಗೆ ದಾಖಲಿಸಬೇಕಾಗಿಲ್ಲ: ದೇಶಾದ್ಯಂತ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳು, ವೆಂಟಿಲೇಟರ್‌ಗಳ ಕೊರತೆಯನ್ನು ನಿಭಾಯಿಸಬೇಕೆಂದರೆ, ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಬೇಕು. ಅತ್ಯಲ್ಪ ರೋಗಲಕ್ಷಣ ಇರುವ ಸೋಂಕಿತರು ಹೆಚ್ಚಾಗಿ ತಾವಾಗಿಯೇ ಗುಣಮುಖರಾಗುತ್ತಾರೆ. ಅವರಿಗೆ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಅಂಥವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿಲ್ಲ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನಷ್ಟೇ ದಾಖಲಿಸಿಕೊಂಡರೆ, ಈ ಸಮಸ್ಯೆ ನಿಭಾಯಿಸಲು ಸಾಧ್ಯವಾಗುತ್ತದೆ ಎಂದೂ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಸಾಮುದಾಯಿಕ ವ್ಯಾಪಿಸುವಿಕೆ ಶುರು: ದಿಲ್ಲಿಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟ ಪ್ರತಿ ನಾಲ್ಕರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದ್ದು, ಇಲ್ಲಿ ವೈರಸ್‌ ಸಾಮುದಾಯಿಕ ಮಟ್ಟದಲ್ಲಿ ವ್ಯಾಪಿಸಿರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಡಾ| ಗುಲೇರಿಯಾ, ಹೌದು’ ಎಂದು ಉತ್ತರಿಸಿದ್ದಾರೆ. ದಿಲ್ಲಿ, ಮುಂಬಯಿನಂಥ ಹಾಟ್‌ ಸ್ಪಾಟ್‌ಗಳು ಸೇರಿದಂತೆ 10ರಿಂದ 12 ನಗರಗಳಲ್ಲಿ ಸ್ಥಳೀಯ ಮಟ್ಟದ ಸಾಮುದಾಯಿಕ ವ್ಯಾಪಿಸುವಿಕೆ ಆರಂಭವಾಗಿರುವ ಸಾಧ್ಯತೆ ಅಧಿಕವಾಗಿದೆ ಎಂದಿದ್ದಾರೆ. ಇದೇ ವೇಳೆ, ನಮ್ಮಲ್ಲಿ ಹೇರಲಾದ ದೇಶವ್ಯಾಪಿ ಲಾಕ್‌ ಡೌನ್‌ ಯಶಸ್ವಿಯಾದರೂ, ಸೋಂಕಿತರ ಸಂಖ್ಯೆಗೆ ಕಡಿವಾಣ ಹಾಕುವಲ್ಲಿ ಅದು ಸಫ‌ಲವಾಗಲಿಲ್ಲ ಎಂದಿದ್ದಾರೆ ಗುಲೇರಿಯಾ. ಜನರು ನಿರ್ಬಂಧವನ್ನು ಗಂಭೀರವಾಗಿ ಪಾಲಿಸಲಿಲ್ಲ. ಈಗಲಾದರೂ ಎಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ ಎಂದೂ ಅವರು ಸಲಹೆ ನೀಡಿದ್ದಾರೆ.

ಒಂದೇ ದಿನ 9,971 ಮಂದಿಗೆ ಸೋಂಕು
ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 9,971 ಹೊಸ ಪ್ರಕರಣ ಪತ್ತೆಯಾಗಿದೆ. ಶನಿವಾರ ಬೆಳಗ್ಗೆ 8ರಿಂದ ರವಿವಾರ ಬೆಳಗ್ಗೆ 8 ಗಂಟೆಯವರೆಗೆ ಇಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. 287 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈವರೆಗೆ 1,19,292 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ 5,220 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಮಾಣ
ಶೇ.48.37ಕ್ಕೇರಿಕೆಯಾಗಿದೆ ಎಂದೂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಒಂದೇ ದಿನ 1.42 ಲಕ್ಷ ಸ್ಯಾಂಪಲ್‌ ಗಳ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ ಒಟ್ಟಾರೆ 46.66 ಲಕ್ಷ ಸ್ಯಾಂಪಲ್‌ ಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ 3 ಸಾವಿರಕ್ಕೂ ಹೊಸ ಪ್ರಕರಣಗಳು ರವಿವಾರ ಪತ್ತೆಯಾಗಿದೆ.

ಇದರಿಂದಾಗಿ ಆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 85
ಸಾವಿರ ದಾಟಿದೆ. ಗುಜರಾತ್‌ನಲ್ಲಿ ಹೊಸತಾಗಿ 480 ಪ್ರಕರಣಗಳು ಪತ್ತೆಯಾಗುವ ಮೂಕ ಒಟ್ಟು ಸೋಂಕು 20 ಸಾವಿರ ದಾಟಿದೆ. ಜತೆಗೆ ಸಾವಿನ ಸಂಖ್ಯೆ 1,249ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ರವಿವಾರ ಸೋಂಕಿತರ ಸಂಖ್ಯೆ 31 ಸಾವಿರಕ್ಕಿಂತ ಹೆಚ್ಚಾಗಿದೆ. ಎಂಟು ದಿನಗಳ ಅವಧಿಯಲ್ಲಿ 8 ಸಾವಿರ ಮಂದಿ ಸೋಂಕಿತರು ಸೇರ್ಪಡೆಯಾಗಿದ್ದಾರೆ.

ಮರಣ ಪ್ರಮಾಣ ಕಡಿಮೆ
ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣ ಬಹಳಷ್ಟು ಕಡಿಮೆಯಿದೆ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ನಮ್ಮಲ್ಲಿ 0.49 ಮಂದಿ ಸಾವಿಗೀಡಾದರೆ, ಜಾಗತಿಕ ಸರಾಸರಿ 5.17 ರಷ್ಟಿದೆ. ಜರ್ಮನಿಯಲ್ಲಿ ಇದು 10.35, ಇಟಲಿಯಲ್ಲಿ 55.78, ಯು.ಕೆ.ಯಲ್ಲಿ 59.62 ಮತ್ತು ಸ್ಪೇನ್‌ ನಲ್ಲಿ 58.06 ರಷ್ಟಿದೆ. ಇನ್ನು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಭಾರತದಲ್ಲಿ ಸೋಂಕಿತರು 17.32 ಆಗಿದ್ದರೆ, ಜಾಗತಿಕ ಸರಾಸರಿ 87.74 ಆಗಿದೆ. ಜರ್ಮನಿಯಲ್ಲಿ ಇದು
219.93, ಇಟಲಿ 387.33, ಯು.ಕೆ. 419.54 ಮತ್ತು ಸ್ಪೇನ್‌ ನಲ್ಲಿ 515.61 ರಷ್ಟಿದೆ ಎಂದೂ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವಾದ್ಯಂತ 4 ಲಕ್ಷದಾಟಿದ ಸಾವಿನ ಸಂಖ್ಯೆ
ಚೀನದ ವುಹಾನ್‌ನಲ್ಲಿ ಮೊದಲಿಗೆ ಕಂಡುಬಂದ ಕೋವಿಡ್ ವೈರಸ್‌ ಜಗತ್ತಿನಾದ್ಯಂತ ವ್ಯಾಪಿಸಿ ಈವರೆಗೆ 4 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. 70
ಲಕ್ಷ ಕ್ಕಿಂತಲೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಜಗತ್ತಿನೆಲ್ಲೆಡೆ ಕಳೆದ ಕೆಲವು ತಿಂಗಳಿಂದ ಮೃತಪಟ್ಟ ಅನೇಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದ ಕಾರಣ, ವಾಸ್ತವದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದೂ ಜಾನ್ಸ್‌ ಹಾಪ್‌ ಕಿನ್‌ಸನ್‌ ವಿವಿ ಹೇಳಿದೆ.

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.