ನನ್ನನ್ನು ನಿಂದಿಸಲು ಒಲಿಂಪಿಕ್ಸೇ ನಡೀತಿದೆ
Team Udayavani, Feb 10, 2019, 12:30 AM IST
ಚಾಂಗ್‌ಸಾರಿ/ಅಗರ್ತಲಾ: “ಮಹಾಕಲಬೆರಕೆ ಪಕ್ಷಗಳ ಪ್ರಮುಖ ಕೆಲಸವೇ ನನ್ನನ್ನು ನಿಂದಿಸುವುದು. ನನ್ನ ವಿರುದ್ಧ ಟೀಕೆಗಳ ಮಳೆಯಾಗುತ್ತಿರುವುದನ್ನು ನೋಡಿದರೆ, ಅವರೆಲ್ಲರೂ ನಿಂದನೆಗಳ ಒಲಿಂಪಿಕ್ಸ್‌ನಲ್ಲಿ ಭಾಗಿ ಯಾಗಿದ್ದಾರೇನೋ ಎಂಬಂತೆ ಭಾಸವಾಗುತ್ತಿದೆ.’ ಹೀಗೆಂದು ಪ್ರತಿಪಕ್ಷಗಳ ಮಹಾಮೈತ್ರಿ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ತ್ರಿಪುರದಲ್ಲಿ ಶನಿವಾರ ನಡೆಸಿದ ರ್ಯಾಲಿಯಲ್ಲಿ ಮಹಾಮೈತ್ರಿಯನ್ನು ಮಹಾಕಲಬೆರಕೆ ಎಂದು ಪುನರುಚ್ಚರಿಸಿದ ಅವರು, ಎಷ್ಟು ಸಾಧ್ಯವೋ ಅಷ್ಟು ಟೀಕಿಸುವುದು ಪ್ರತಿಪಕ್ಷಗಳ ಏಕೈಕ ಕೆಲಸ. ಜನರಿಗೆ ಸುಳ್ಳು ಹೇಳುವುದರಿಂದ ಸಿಗುವ ಫಲಿತಾಂಶವೇನು ಎಂಬುವುದು ಲೋಕಸಭೆ ಚುನಾವಣೆ ಬಳಿಕ ಗೊತ್ತಾಗುತ್ತದೆ ಎಂದಿದ್ದಾರೆ.
ಈಶಾನ್ಯಕ್ಕೆ ಹಾನಿಯಾಗದು: ಇದಕ್ಕೂ ಮುನ್ನ ಅಸ್ಸಾಂನಲ್ಲಿ ರ್ಯಾಲಿ ನಡೆಸಿದ ಅವರು, ಪೌರತ್ವ ವಿಧೇಯಕದಿಂದ ಅಸ್ಸಾಂಗಾಗಲೀ, ಈಶಾನ್ಯ ರಾಜ್ಯಗಳ ಹಿತಾಸಕ್ತಿಗಾಗಲೀ ಯಾವುದೇ ಹಾನಿಯಾಗದು ಎಂಬ ಭರವಸೆ ನೀಡಿದ್ದಾರೆ. ಸೂಕ್ತ ತನಿಖೆ ಮತ್ತು ರಾಜ್ಯ ಸರಕಾರದ ಶಿಫಾರಸಿನ ನಂತರವೇ ಪೌರತ್ವ ನೀಡಲಾಗುತ್ತದೆ ಎಂದಿದ್ದಾರೆ.
ರ್ಯಾಲಿಗೂ ಮುನ್ನ ಚಾಂಗ್‌ಸಾರಿಯಲ್ಲಿ ನಿರ್ಮಿಸಲುದ್ದೇಶಿಸಿರುವ ಏಮ್ಸ್‌ಗೆ ಹಾಗೂ ಗುವಾಹಟಿ ಮತ್ತು ಉತ್ತರ ಗುವಾಹಟಿಯನ್ನು ಸಂಪರ್ಕಿಸುವ ಷಟ³ಥದ ಸೇತುವೆಗೆ ಶಿಲಾನ್ಯಾಸ ನೆರವೇರಿಸಿದರು. ಅರುಣಾಚಲ ಪ್ರದೇಶದ ಹೊಲ್ಲಾಂಗಿಯಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಸೇರಿದಂತೆ 4 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಅರುಣಾಚಲದಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರಗಳು ನಿರ್ಲಕ್ಷಿಸಿದ್ದ ಹೆದ್ದಾರಿ, ರೈಲ್ವೆ, ಏರ್‌ವೆà ಸುಧಾರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.
ಚೀನಾ ಆಕ್ಷೇಪ
ಅರುಣಾಚಲಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಂತೆ ನೆರೆರಾಷ್ಟ್ರ ಚೀನಾ ಕಾಲ್ಕೆರೆದಿದೆ. “ಭಾರತ-ಚೀನಾ ಗಡಿಗೆ ಸಂಬಂಧಿಸಿ ಚೀನಾದ ನಿಲುವು ಸ್ಪಷ್ಟವಾ ಗಿದ್ದು, ಗಡಿಯ ಪೂರ್ವ ಭಾಗಕ್ಕೆ ಭಾರತೀ ಯ ನಾಯಕತ್ವವು ಭೇಟಿ ನೀಡು ವುದನ್ನು ನಾವು ವಿರೋಧಿಸುತ್ತೇವೆ. ಗಡಿ ಸಮಸ್ಯೆ ಉಲ್ಬಣಿಸುವಂಥ ಯಾವುದೇ ಕ್ರಮದಿಂದ ಭಾರತ ದೂರವಿರಬೇಕು’ ಎಂದು ಚೀನಾ ವಿದೇಶಾಂಗ ಇಲಾಖೆ ಎಚ್ಚರಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ, ಅರು ಣಾಚಲವು ಭಾರತದ ಅವಿಭಾಜ್ಯ ಅಂಗ. ಭಾರತೀಯ ನಾಯಕರು ದೇಶದ ಇತರೆ ಭಾಗಗಳಿಗೆ ಹೋದಂತೆ ಅರುಣಾಚಲಕ್ಕೂ ಹೋಗು ತ್ತಿರುತ್ತಾರೆ. ಇದನ್ನು ಹಲವು ಬಾರಿ ಚೀನಾಗೆ ಸ್ಪಷ್ಟಪಡಿಸಿದ್ದೇವೆ ಎಂದಿದೆ.
ಕಪ್ಪುಬಾವುಟ ಪ್ರದರ್ಶನ, ಪ್ರತಿಕೃತಿ ದಹನ
ಪೌರತ್ವ ವಿಧೇಯಕ ಖಂಡಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ಪ್ರಧಾನಿ ಮೋದಿ ಅವರಿಗೂ ತಟ್ಟಿದೆ. ಎರಡು ಕಡೆ ಮೋದಿಯವರಿಗೆ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಅಲ್ಲದೆ, ಪ್ರತಿಕೃತಿಗಳನ್ನೂ ದಹಿಸಿದ್ದಾರೆ. ಜನತಾ ಭವನದ ಮುಂದೆ ಬೆತ್ತಲೆ ಪ್ರತಿಭಟನೆ ನಡೆಸಿದ ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಯ್ ಯುವ ಪರಿಷತ್ 12 ಗಂಟೆಗಳ ಅಸ್ಸಾಂ ಬಂದ್‌ಗೆ ಕರೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.