Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Team Udayavani, Dec 19, 2024, 9:59 AM IST
ಹೊಸದಿಲ್ಲಿ: ಬಾಲಿವುಡ್ ನಟ ನಟಿಯರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಬೆಟ್ಟಿಂಗ್ ಆ್ಯಪ್ ನ ಮಾಲಕ ಪಾಕಿಸ್ತಾನ ನಿವಾಸಿ ಎಂದು ವರದಿಯಾಗಿದೆ. ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿರುವ ಬೆಟ್ಟಿಂಗ್ ಆ್ಯಪ್ ರಾಕೆಟ್ ಪಾಕಿಸ್ತಾನದ ಪ್ರಜೆಯ ಮಾಲಿಕತ್ವದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮ್ಯಾಜಿಕ್‌ವಿನ್ ಬೆಟ್ಟಿಂಗ್ ಆ್ಯಪ್ (Magicwin Betting App) ಪ್ರಕರಣದಲ್ಲಿ ಪಾಕಿಸ್ತಾನಿ ಕೋನವನ್ನು ಇಡಿ ಪತ್ತೆ ಹಚ್ಚಿರುವುದು ಇದೇ ಮೊದಲು. ಭಾರತದಿಂದ ದುಬೈ ಮೂಲಕ ಪಾಕಿಸ್ತಾನಕ್ಕೆ ಹಣ ರವಾನೆಯಾಗಿದೆ ಎಂದು ವರದಿ ತಿಳಿಸಿವೆ.
ಸಿನಿಮಾ ಮತ್ತು ಕಿರುತೆರೆ ನಟ ನಟಿಯರು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಮ್ಯಾಜಿಕ್ ವಿನ್ ಆ್ಯಪ್ ಪ್ರಚಾರ ಮಾಡಿದ್ದರು.
ಇಡಿ ಈಗಾಗಲೇ ನಟಿಯರಾದ ಮಲ್ಲಿಕಾ ಶೆರಾವತ್ ಮತ್ತು ಪೂಜಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದೆ. ಈ ವಾರಾಂತ್ಯದಲ್ಲಿ ಇತರ ಇಬ್ಬರು ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್ ನೀಡಿದೆ, ಮುಂಬರುವ ವಾರದಲ್ಲಿ ಕನಿಷ್ಠ ಏಳು ಸೆಲೆಬ್ರಿಟಿಗಳಿಗೆ ಸಮನ್ಸ್ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಮ್ಯಾಜಿಕ್ ವಿನ್ ಒಂದು ಬೆಟ್ಟಿಂಗ್ ವೆಬ್‌ಸೈಟ್ ಆಗಿದ್ದು ಅದನ್ನು ಗೇಮಿಂಗ್ ವೆಬ್‌ಸೈಟ್ ಎಂದು ತೋರಿಸಲಾಗಿದೆ ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ದುಬೈನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಇದನ್ನು ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ, ವೆಬ್‌ಸೈಟ್ ನಲ್ಲಿ ಲಭ್ಯವಿರುವ ಬೆಟ್ಟಿಂಗ್ ಆಟಗಳನ್ನು ಫಿಲಿಪೈನ್ಸ್ ಮತ್ತು ಬೆಟ್ಟಿಂಗ್ ಕಾನೂನುಬದ್ಧವಾಗಿರುವ ಇತರ ದೇಶಗಳಲ್ಲಿ ನಡೆಸಲಾಗುತ್ತಿತ್ತು.
ಆಟಗಳ ಎಪಿಐ (API) ಅನ್ನು ಇತರ ಮೂಲಗಳಿಂದ ನಕಲಿ ಮಾಡಲಾಗಿದೆ ಮತ್ತು ಮ್ಯಾಜಿಕ್‌ವಿನ್ ನಲ್ಲಿ ಮರುಪ್ರಸಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಟ್ಟಿಂಗ್ ಅಪ್ಲಿಕೇಶನ್ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದೆ. ಅದು ಭಾರತದಲ್ಲಿ ತನ್ನನ್ನು ಪ್ರಚಾರ ಮಾಡಲು ಬಳಸುತ್ತದೆ.
ಈ ಪ್ರಕರಣದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಇಡಿ ಸುಮಾರು 67 ರೈಡ್ ಗಳನ್ನು ಮಾಡಿದೆ. ಇಡಿ ಕಳೆದ ವಾರ ದೆಹಲಿ, ಮುಂಬೈ ಮತ್ತು ಪುಣೆಯಲ್ಲಿ ಮ್ಯಾಜಿಕ್‌ವಿನ್ ಪ್ರಕರಣಕ್ಕೆ ಸಂಬಂಧಿಸಿದ ಜನರ 21 ಸ್ಥಳಗಳ ಮೇಲೆ ದಾಳಿ ನಡೆಸಿ ಸುಮಾರು 3.55 ಕೋಟಿ ರೂ ವಶಪಡಿಸಿಕೊಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.