ಈ ಎಲ್ಲಾ ಕೆಲಸ ಕಾರ್ಯಗಳಿಗೆ ಪಾನ್‌ಕಾರ್ಡ್ ಕಡ್ಡಾಯ
Team Udayavani, Nov 2, 2019, 9:22 PM IST
ತೆರಿಗೆ ವಂಚನೆ ಹಾಗೂ ನಕಲಿ ಕಂಪನಿಗಳನ್ನು ತಡೆಯುವ ಉದ್ದೇಶದಿಂದ ಸರಕಾರ ಪಾನ್‌ಕಾರ್ಡ್ ಕಡ್ಡಾಯ ಕ್ರಮವನ್ನು ಜಾರಿ ಮಾಡಿತ್ತು. ಆದರೆ ಈ ಯೋಜನೆ ಚಾಲ್ತಿಗೆ ಬಂದಾಗಿನಿಂದ ಯಾವೆಲ್ಲಾ ವಹಿವಾಟುಗಳಿಗೆ ಪಾನ್‌ಕಾರ್ಡ್ ಬೇಕು/ಬೇಡ ಎಂಬ ಗೊಂದಲಗಳು ಸಾರ್ವಜನಿಕರುನ್ನು ಕಾಡುತ್ತಲ್ಲೇ ಇದೆ.
ಆ ಗೊಂದಲಗಳಿಗೆ ಪರಿಹಾರ ಇಲ್ಲಿದ್ದು ಯಾವ ಎಲ್ಲಾ ನೋಂದವಣಿ ಪ್ರಕ್ರಿಯೆಗಳಿಗೆ ಪಾನ್‌ಕಾರ್ಡ್ ನಂಬರ್‌ನ್ನು ಲಿಂಕ್ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
– ಮೋಟಾರು ವಾಹನವನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಪಾನ್‌ಕಾರ್ಡ್‌ನ ಅವಶ್ಯವಿದೆ.
– ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಪಾನ್‌ಕಾರ್ಡ್ ಬೇಕಾಗುತ್ತದೆ.
– ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ಅರ್ಜಿ ಸಲ್ಲಿಸುವಾಗ ಪಾನ್‌ಕಾರ್ಡ್ ನಂಬರ್ ಕಡ್ಡಾಯ.
– ಡಿಮ್ಯಾಟ್ ಖಾತೆ ತೆರೆಯಲು ಪಾನ್‌ಕಾರ್ಡ್ ಅತ್ಯವಶ್ಯಕ.
– ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳ ಬಿಲ್ 50 ಸಾವಿರ ಗಡಿ ದಾಟಿದ್ದರೆ, ಬಿಲ್ ಮೊತ್ತವನ್ನು ಪಾವತಿಸಲು ಪಾನ್‌ಕಾರ್ಡ್ ಬೇಕಾಗುತ್ತದೆ.
– 50 ಸಾವಿರ ಮೀರಿ ವಿದೇಶಿ ಪ್ರಯಾಣ ಅಥವಾ ವಿದೇಶಿ ಕರೆನ್ಸಿಯನ್ನು ಖರೀದಿಸಲು ಪಾನ್‌ಕಾರ್ಡ್‌ನ ಅವಶ್ಯವಿದೆ.
– 50 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಮ್ಯೂಚುಯಲ್ ಫಂಡ್, ಡಿಬೆಂಚರ್‌ಗಳು ಹಾಗೂ ಬಾಂಡ್‌ಗಳ ಖರೀದಿ ಪ್ರಕ್ರಿಯೆಯಲ್ಲಿ ಪಾನ್‌ಕಾರ್ಡ್ ನಂಬರ್ ಅಗತ್ಯವಾಗುತ್ತದೆ.
– ಏಕಕಾಲಕ್ಕೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದಾದರೆ ಪಾನ್‌ಕಾರ್ಡ್‌ನ ಅವಶ್ಯವಿದೆ.
– ನಿಮ್ಮ ಸ್ಥಿರ ಠೇವಣಿ(ಫಿಕ್ಸ್‌ಡ್ ಡೆಪಾಸಿಟಿ) ಒಂದೇ ವರ್ಷಕ್ಕೆ 50 ಸಾವಿರದ ಗಡಿ ದಾಟಿದ್ದರೆ ಅಥವಾ ಹಣಕಾಸು ವರ್ಷಗಳಲ್ಲಿ 5 ಲಕ್ಷದ ಮಿತಿ ಮೀರಿದ್ದರೆ ಪಾನ್‌ಕಾರ್ಡ್ ನಂಬರ್ ಲಿಂಕ್ ಮಾಡುವುದು ಅಗತ್ಯ.
– 50 ಸಾವಿರಕ್ಕಿಂತ ಹೆಚ್ಚು ಜೀವ ವಿಮೆ ಯೋಜನೆಯ ಕಾರ್ಯನಿರ್ವಹಣೆಗೆ ಪಾನ್‌ಕಾರ್ಡ್ ಬೇಕಾಗುತ್ತದೆ.
– ಸ್ಟಾಕ್ ಎಕ್ಸೇಚೆಂಜ್ ಪಟ್ಟಿಯಲ್ಲಿ ಮಾನ್ಯತೆ ಪಡೆದ ಕಂಪೆನಿಯ ಮಾಲೀಕರಿಂದ ಷೇರುಗಳನ್ನು ಖರೀದಿಸುವಾಗ ಅದರ ಮೊತ್ತ 1 ಲಕ್ಷ ಮೀರಿದ್ದರೆ ಪಾನ್‌ಕಾರ್ಡ್ ನಂಬರ್ ಅನ್ನು ನಮೂದಿಸುವುದು ಅಗತ್ಯ.
– ಸ್ಥಿರ ಆಸ್ತಿಯನ್ನು 10 ಲಕ್ಷ ಮೀರಿದ ಮೊತ್ತಕ್ಕೆ ಮಾರಾಟ ಮಾಡುವಾಗ ಅಥವಾ ಖರೀದಿಸುವಾಗ ಅಥವಾ ಸ್ಟ್ಯಾಂಪ್ ಮೌಲ್ಯಮಾಪನ ಪ್ರಾಧಿಕಾರದ ಸೆಕ್ಷನ್ 50ಸಿ ಯ ಅನ್ವಯ 10 ಲಕ್ಷ ಮೀರಿದ ಮೌಲ್ಯಯುತವಾದ ಆಸ್ತಿಯ ಖರೀದಿಗೆ ಪಾನ್‌ಕಾರ್ಡ್ ಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.