Bihar ಸೇತುವೆ ಕುಸಿತಕ್ಕೆ ಹೂಳು ತೆಗೆದಿದ್ದೇ ಕಾರಣ!
Team Udayavani, Jul 5, 2024, 6:40 AM IST
ಪಟ್ನಾ: ಬಿಹಾರದಲ್ಲಿ 15 ದಿನಗಳ ಅವಧಿಯಲ್ಲಿ 10 ಸೇತುವೆಗಳು ಕುಸಿದಿದ್ದು ಸೇತುವೆಗಳಿಂದ ಅವ್ಯಾಹತ ವಾಗಿ ಹೂಳು ತೆಗೆದದ್ದೇ ಕಾರಣ ಎಂದು ಬಿಹಾರ ಜನಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚೈತನ್ಯ ಪ್ರಸಾದ್ ಹೇಳಿದ್ದಾರೆ. ಸುದ್ದಿವಾ ಹಿನಿ ಜತೆ ಮಾತನಾಡಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇನ್ನೊಂದೆ ಡೆ ಹೂಳು ತೆಗೆಯಲು ವೈಜ್ಞಾನಿಕ ಕ್ರಮ ಅನುಸರಿಸದಿದ್ದದ್ದೂ ಕಾರಣವೆಂದು ತಿಳಿ ದುಬಂದಿರುವುದಾಗಿ ವರದಿಯಾಗಿದೆ.
ಇದೇ ವೇಳೆ, ಸಾರಣ ಜಿಲ್ಲೆಯಲ್ಲಿ ಗುರುವಾರ ಮತ್ತೂಂದು ಸೇತುವೆ ಕುಸಿದಿದೆ. ಈ ಮೂಲಕ ಕಳೆದ 15 ದಿನಗಳಲ್ಲಿ ಕುಸಿದ ಸೇತುವೆಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಅದೇ ಜಿಲ್ಲೆಯಲ್ಲಿ 2 ದಿನಗಳಲ್ಲಿ ಇದು 3ನೇ ಘಟನೆ. ಪ್ರಸ್ತುತ ಕುಸಿದಿರುವ ಸೇತುವೆ 15 ವರ್ಷ ಹಳೆಯದಾಗಿದ್ದು, ಗಂಡಕಿ ನದಿಗೆ ಅಡ್ಡವಾಗಿ ಕಟ್ಟಲಾಗಿತ್ತು.
ಸಮೀಕ್ಷೆಗೆ ಸಿಎಂ ಸೂಚನೆ: ಸಾಲು ಸಾಲು ಸೇತುವೆಗಳು ಕುಸಿದ ಹಿನ್ನೆಲೆ, ಬಿಹಾರ ಸಿಎಂ ನಿತೀಶ್ ಕುಮಾರ್ ಸಭೆ ನಡೆಸಿದ್ದು, ರಾಜ್ಯದ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ ದುರಸ್ತಿ ಪಡಿಸಲು ಸೂಚಿಸಿದ್ದಾರೆ. ಜತೆಗೆ ಸೇತುವೆ ಕುಸಿತ ವಿರುದ್ಧ ಸುಪ್ರೀಂ ಕೋರ್ಟಲ್ಲಿ ಪಿಐಎಲ್ ಸಲ್ಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.